ಸೇವಿಸುವ ಆಹಾರ ಸುರಕ್ಷಿತವಾಗಿರಲಿ

ಸೇವಿಸುವ ಆಹಾರ ಸುರಕ್ಷಿತವಾಗಿರಲಿ

ಸಭೆ, ಸಮಾರಂಭಗಳಿಗೆ ಬಂದವರಿಗೆ ಬಗೆಬಗೆಯ ಪಾಕಗಳನ್ನು ಬಡಿಸಲಾಗುತ್ತದೆ. ಅಲ್ಲಿನ ವಿಶೇಷ ತಿಂಡಿಗಳಾದ ಜಿಲೇಬಿ, ಲಡ್ಡುಗಳು ಆಕರ್ಷಕವಾಗಿ ಕಾಣಲು ಮೆಟಾನಿಲ್ ಎಲ್ಲೋ, ಲೆಡ್ ಕ್ರೋಮೈಟ್, ರೋಡಾಮೈನ್ ಮುಂತಾದ ಬಣ್ಣಗಳನ್ನು ಅನಧಿಕೃತವಾಗಿ ಉಪಯೋಗಿಸಲಾಗುತ್ತದೆ. ಆಹಾರದಲ್ಲಿ ಇಂಥ ಬಣ್ಣಗಳ ಉಪಯೋಗದಿಂದ ಕರುಳು, ಮೂತ್ರಪಿಂಡ ಹಾಗೂ ಸಂತಾನೋತ್ಪತ್ತಿ ಅಂಗಗಳ ಮೇಲೆ ದುಷ್ಪರಿಣಾಮ ಉಂಟಾಗಬಲ್ಲದು. ಕೆಲವೊಮ್ಮೆ ಬಣ್ಣಗಳ ಡಬ್ಬಿ ಮೇಲೆ ಡಬ್ಬಿ ಮೇಲೆ ‘ನಾನ್ ಎಡಿಬಲ್’ ಎಂದು ಮುದ್ರಿಸಿದ್ದರು ಅತ್ತ ನಮ್ಮ ಗಮನ ಹರಿಯುವುದಿಲ್ಲ. ಅಡ್ಡ ಪರಿಣಾಮ ಬೀರುವ ಇಂತಹ ಬಣ್ಣಗಳು ಬಿಸ್ಕತ್, ತಂಪು ಪಾನೀಯ, ಐಸ್ ಕ್ರೀಮ್ ಗಳ ಮೂಲಕವೂ ದೇಹ ಸೇರುತ್ತವೆ.

ಉಪ್ಪಿಲ್ಲದೆ ಯಾವುದೇ ಅಡುಗೆ ಇಲ್ಲ. ಆದರೆ ಬಳಸುತ್ತಿರುವುದೇನು? ಅದೇ ಫ್ರೀ ಫ್ಲೋಯಿಂಗ್ ಉಪ್ಪು. ಉಪ್ಪು ಉದುರುವಂತೆ ಮಾಡಲು ಅದಕ್ಕೆ ಸಿಲಿಕಾನ್ ಡೈ ಆಕ್ಸೈಡ್ ಸೇರಿಸಲಾಗುತ್ತದೆ. ಇಂಥ ಉಪ್ಪಿನ ಉಪಯೋಗದಿಂದ ಅನ್ನನಾಳದ ಕ್ಯಾನ್ಸರ್ ಹಾಗೂ ಮೂತ್ರಕೋಶದಲ್ಲಿ ಕಲ್ಲು ಉಂಟಾಗಬಹುದು.

ಅಂಗಡಿಯಲ್ಲಿ ಸಿಹಿ ತಿಂಡಿಗಳು ಆಕರ್ಷಕವಾಗಿ ಕಾಣಲು ಅವುಗಳಿಗೆ ಅಳುಮಿನಿಯಂ ರಾಪರ್ ತೆಗೆಯದೆ ತಿಂಡಿ ತಿನ್ನುತ್ತಾರೆ. ಹೀಗೆ ಅತಿಯಾಗಿ ಅಲುಮಿನಿಯಂ ಅಂಶ ನಮ್ಮ ದೇಹ ಸೇರಿದರೆ ಕ್ಯಾನ್ಸರ್ ಉಂಟಾಗಬಲ್ಲದು. ಮೂಳೆ ಸಂಬಂಧಿ ಮತ್ತು ಆಲ್ಜೈಮರ್ ರೋಗಗಳನ್ನು ತರಬಲ್ಲದು. ಮೆದುಳಿಗೆ ಸೇರಿದರೆ ಬುದ್ಧಿಭ್ರಮಣೆ ಉಂಟಾಗಬಹುದು.

ದೇವಸ್ಥಾನಕ್ಕೆ ಹೋದಾಗ ಕಾಗದದ ಮೇಲೆ ಪ್ರಸಾದ ಸ್ವೀಕರಿಸುತ್ತೇವೆ. ಕೆಲವೊಮ್ಮೆ ನ್ಯೂಸ್ಪೇಪರ್ ಮೇಲು ಹಾಕಿಕೊಂಡು ಆಹಾರ ಸೇವಿಸುತ್ತೇವೆ. ಪತ್ರಿಕೆಯ ಮುದ್ರಣಕ್ಕಾಗಿ ಬಳಸಿದ ಸೀಸವೂ ಆಗ ಆಹಾರದೊಂದಿಗೆ ದೇಹ ಸೇರುತ್ತದೆ. ಸೀಸವು ಪುರುಷತ್ವಕ್ಕೆ ದಕ್ಕೆ ತರಬಲ್ಲದು. ಸ್ತ್ರೀಯರಲ್ಲಿ ಋತುಚಕ್ರದ ಏರುಪೇರಿಗೆ ಕಾರಣವಾಗುವುದು.

ಒಮ್ಮೆ ತಿಂಡಿ ಕರಿದ ಎಣ್ಣೆಯನ್ನು ಉಳಿಸಿಕೊಂಡು ಪದೇಪದೇ ಅದರಲ್ಲೇ ಕರೆಯುತ್ತಾ ಹೋದರೆ ಅದರಲ್ಲಿ ಉತ್ಪತ್ತಿಯಾಗುವ ‘ಪೆರಾಕ್ಸೈಡ್’ ಎಂಬ ರಾಸಾಯನಿಕವು ಕ್ಯಾನ್ಸರ್ಗೆ ಕಾರಣವಾಗಬಲ್ಲದು.

ಶೇಂಗಾ, ಜೋಳ, ಅಕ್ಕಿ, ಗೋಧಿ ಇವುಗಳನ್ನು ಸರಿಯಾಗಿ ಒಣಗಿಸದೇ ಸಂಗ್ರಹಿಸಿಟ್ಟರೆ ಅವುಗಳಿಗೆ ಬೂಸ್ಟ್ ತಗಲುತ್ತದೆ. ಈ ಬೂಸ್ಟಿನಿಂದ ಉತ್ಪತ್ತಿಯಾಗುವ ‘ಅಫ್ಲಾಟಾಕ್ಸಿನ್’ ವಿಶ್ವವು ಮೂತ್ರಪಿಂಡ, ಯಕೃತ್ತು ಮತ್ತು ಚರ್ಮಕ್ಕೆ ಹಾನಿ ಉಂಟು ಮಾಡಬಲ್ಲದು. ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಯುಕ್ತ ಆಹಾರ ಸೇವಿಸಿದಲ್ಲಿ ಕೆಲವು ಗಂಟೆಗಳೊಳಗೆ ಚಳಿ, ಜ್ವರ, ವಾಂತಿ, ನೀರಿನಂಥ ಬೇದಿ ಉಂಟಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಸಾವು ಸಂಭವಿಸಬಹುದು.

ಸಾಮಾನ್ಯವಾಗಿ ಕೇಸರಿ ಬೇಳೆಯನ್ನು ಕಡಲೆ ಬೇಳೆಯೊಂದಿಗೆ ಹಾಗೂ ಕೇಸರಿ ಬೇಳೆ ಹಿಟ್ಟನ್ನು ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡುತ್ತಾರೆ. ಬಜ್ಜಿ ಕೆಂಪಾಗಿ ಕಾಣಲು ಹಲವು ಹೋಟೆಲ್ಗಳಲ್ಲಿ ಈ ರೀತಿ ಮಾಡುವುದಿದೆ. ಊಟದಲ್ಲಿ ಕೇಸರಿ ಬೇಳೆಯ ಸಾರು ಬಳಸುವವರೂ ಇದ್ದಾರೆ. ಇಂಥ ಕೇಸರಿ ಬೇಳೆಯಲ್ಲಿ ಬಿ. ಓ. ಎ. ಎ. ಎಂಬ ನಂಜಿನ ಅಂಶ ಅಡಗಿದೆ. ಇದು ನರಗಳನ್ನು ನಿಷ್ಕ್ರಿಯಗೊಳಿಸಬಲ್ಲದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ.

ಜಾಸ್ತಿ ಸಕ್ಕರೆ ಬಳಸಿದ ತಿಂಡಿಗಳ ಅತಿಯಾದ ಸೇವನೆಯಿಂದ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ –
– ರಕ್ತದೊತ್ತಡ ಹೆಚ್ಚುತ್ತದೆ
– ಕೊಬ್ಬಿನಂಶ ಹೆಚ್ಚಾಗಿ ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ
– ದೇಹದ ಬಿಳಿರಕ್ತಕಣಗಳಿಗೆ ಮಾರಕವಾಗುತ್ತದೆ. ಇದರಿಂದ ದೇಹವು ಸುಲಭವಾಗಿ ಕಾಯಿಲೆಗಳಿಗೆ ಬಲಿಯಾಗುವುದು.
– ಮೂಳೆಗಳಲ್ಲಿ ಸುಣ್ಣದಂಶ ಕಡಿಮೆಯಾಗಿ ಮೂಳೆಮುರಿತದ ಕಾಯಿಲೆಗೆ ಕಾರಣವಾಗುವುದು.
– ಕ್ಯಾನ್ಸರ್, ಕೀಲು ತೊಂದರೆ, ಹೃದ್ರೋಗ, ಮೂತ್ರಕೋಶದ ನಿಷ್ಕ್ರಿಯತೆ ಮುಂತಾದ ಕಾಯಿಲೆಗಳಿಗೆ ಇದು ಕಾರಣವಾಗುತ್ತದೆ.

ಆಹಾರಧಾನ್ಯ, ತರಕಾರಿಗಳಿಗೆ ಕೀಟನಾಶಕಗಳ ಬಳಕೆ ಇತ್ತೀಚೆಗೆ ಹೆಚ್ಚಾಗಿದೆ. ಕ್ರಿಮಿನಾಶಕಗಳು ಮಣ್ಣಿನಲ್ಲಿ ವಾಗಿ ಬೇರಿನಿಂದ ಹೀರಲ್ಪಟ್ಟು ಗಜ್ಜರಿ, ಮೂಲಂಗಿ, ಬೀಟ್ರೂಟ್ಗಳಂತಹ ಗೆಡ್ಡೆ- ಗೆಣಸು, ತರಕಾರಿಗಳಲ್ಲಿ ಕ್ರಿಮಿನಾಶಕಗಳು ಸೇರಿಕೊಳ್ಳುತ್ತಿವೆ. ಇಂಥವುಗಳಲ್ಲಿ ಡಿಡಿಟಿ, ಬಿ ಎಚ್ ಸಿ ಎಂಡ್ರಿನ್, ಕಾರ್‍ಟಲಿನ್, ಮೆಲಥಿಯನ್, ಪೆರಾಥಿಯನ್ ಮುಂತಾದ ಕ್ರಿಮಿನಾಶಕ ಅಂಶಗಳು ಹೆಚ್ಚಾಗಿರುವುದು ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ಹಣ್ಣು-ಹಂಪಲುಗಳಲ್ಲಿಯೂ ಕ್ರಿಮಿನಾಶಕಗಳ ಅಂಶ ಕಂಡುಬರುತ್ತಿದೆ. ಮಾವು, ದ್ರಾಕ್ಷಿ, ಪೇರಲ, ಬಾಳೆ, ಮೋಸಂಬಿ, ಸೇಬು, ಒಣದ್ರಾಕ್ಷಿ, ಚಿಕ್ಕು ಎಲ್ಲವೂ ಕ್ರಿಮಿನಾಶಕಗಳಿಂದ ಕಲೂಷಿತಗೊಳ್ಳುತ್ತಿವೆ. ಭಾರತದ ಬೇರೆ ಬೇರೆ ನಗರಗಳಲ್ಲಿ ದೊರೆಯುವ ವಿವಿಧ ಹಣ್ಣುಗಳನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಶೇ.೫೯.೪ ರಷ್ಟು ಮಾಲಿನ್ಯತೆ ಕಂಡುಬಂದಿದೆ.

ಹೀಗೆ ವಿವಿಧ ಮಾರ್ಗಗಳ ಮೂಲಕ ದೇಹ ಸೇರುವ ಕ್ರಿಮಿನಾಶಕಗಳಿಂದ ಹಲವು ಅಪಾಯಗಳು ಉಂಟಾಗಬಹುದು. ಗರ್ಭಪಾತ, ವಂಶವಾಹಿ ವಿಕೃತಿಗಳು, ಜನ್ಮತಃ ಬರುವ ಅಂಗವಿಕಲತೆಗಳು, ತಿಂಗಳು ತುಂಬುವ ಮೊದಲೇ ಹೆರಿಗೆ, ಮಾನಸಿಕ ಕಾಯಿಲೆಗಳು, ರೋಗನಿರೋಧಕ ಶಕ್ತಿಯ ಕುಂದುವಿಕೆ, ಪಿತ್ತಕೋಶ ಮತ್ತು ಮೂತ್ರಕೋಶ ಹಾನಿಗೀಡಾಗುವುದು, ಚರ್ಮದ ಅಲರ್ಜಿ, ಕಣ್ಣಿನ ದೋಷಗಳು, ನಪುಂಸಕತೆ ಹಾಗೂ ವಿವಿಧ ಬಗೆಯ ಕ್ಯಾನ್ಸರ್ ಗಳು ಪ್ರಮುಖವಾಗಿ ಬರುವ ತೊಂದರೆಗಳು.

ಹಣ್ಣು-ತರಕಾರಿ ಬಳಸುವಾಗ ಬಳಸಿದ ಕೀಟನಾಶಕಗಳ ಕಥೆ ಇದಾದರೆ ಇನ್ನೂ ಹಣ್ಣುಗಳನ್ನು ಪಕ್ವವಾಗಿಸಲು ಅತ್ಯಂತ ಅಪಾಯಕಾರಿ ರಾಸಾಯನಿಕವಾದ ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗುತ್ತದೆ. ಈ ರಾಸಾಯನಿಕದ ಗಾಳಿ ಉಸಿರಿನಲ್ಲಿ ಹೋದರೂ ಸಾಕು, ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುತ್ತದೆ. ಚರ್ಮವೃಣ, ಹುಣ್ಣು, ದೃಷ್ಟಿ ದೋಷ, ಗಂಟಲು ಕೆರೆತ, ದಮ್ಮು ಹಾಗೂ ಅಸ್ತಮಾಕ್ಕೆ ಅದು ಕಾರಣವಾಗುತ್ತದೆ. ಹಾಗಿರುವಾಗ ಇಂತಹ ಪದಾರ್ಥ ಬಳಸಿ ಪಕ್ವವಾಗಿಸಿದ ಹಣ್ಣುಗಳನ್ನು ತಿಂದಾಗ ಅಪಾಯ ಕಟ್ಟಿಟ್ಟದ್ದೇ.

ಮಿನರಲ್ ವಾಟರ್ ಆರೋಗ್ಯಕ್ಕೆ ಉತ್ತಮ, ಅದರಲ್ಲಿ ಮಾತ್ರ ಖನಿಜಾಂಶಗಳಿವೆ ಎಂಬ ತಿಳುವಳಿಕೆಯಿಂದ ಹಲವರು ಮಿನರಲ್ ವಾಟರ್ ನ್ನೇ ಬಳಸುವುದಿದೆ. ಆದರೆ ಕೆಲವು ಕಂಪನಿಗಳ ಮಿನರಲ್ ವಾಟರ್ ನಲ್ಲಿ ಹೆಚ್ಚಿನ ಖನಿಜಾಂಶಗಳನ್ನು ಸೇರಿಸುವುದರಿಂದ ಕರುಳು ಉರಿತ ಉಂಟಾಗಬಹುದು. ಮಿನರಲ್ ವಾಟರ್ ಸಂಗ್ರಹಣಾ ಅವಧಿ ಹೆಚ್ಚೆಂದರೆ ಎರಡು ದಿನಗಳು. ಆದರೆ ಅಂಗಡಿಗಳಲ್ಲಿ ಶೇಖರಿಸಿಟ್ಟ ಬಾಟಲಿಗಳು ಈ ಅವಧಿಯನ್ನು ಮೀರಿರುತ್ತದೆ. ಇವು ಬಹುಬೇಗ ಬ್ಯಾಕ್ಟೀರಿಯಾಗಳ ಸೋಂಕಿಗೂ ಒಳಗಾಗುತ್ತವೆ. ಹಾಗಾಗಿ ನೀರು ಹೆಚ್ಚು ದಿನ ಕೆಡದಂತಿರಲು ಕೆಲವು ರಸಾಯನಗಳನ್ನು (ಪ್ರಿಸರ್ವೇಟಿವ್) ಅದರಲ್ಲಿ ಸೇರಿಸುತ್ತಾರೆ.

ನಿತ್ಯ ಸೇವಿಸುವ ಇಂಥ ಆಹಾರಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಜೀವ ಉಳಿಸಬೇಕಾದ ಪದಾರ್ಥಗಳು ನಮ್ಮ ಜೀವವನ್ನೇ ತೆಗೆಯಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲು ಮನುಜನೆನ್ನ ಮಾತೇನು?
Next post ಬಾರೋ ವಸಂತ ಬಾರೋ

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…