ಬಾರೋ ವಸಂತ ಬಾರೋ ||
ಬರಿದಾದ ಈ ಮನಕೆ
ಮುದವ ನೀ ನೀಡಲು|
ಬಾರೋ ವಸಂತ ಬಾರೋ
ಈ ವಸುಂಧರೆಯ ನವ ವಧುವಾಗಿಸೆ
ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ||

ಕಾದಿರುವೆ ನಿನಗಾಗೆ
ಹಂದರವ ಅಣಿಮಾಡಿ|
ಆಲಿಸಲು ಕುಳಿತಿರುವೆ
ಕೋಗಿಲೆಯ ಗಾನ ಇಂಚರವ,
ಹೂ ದುಂಭಿಗಳ ಝೇಂಕಾರವ||

ಬರಿದಾದ ಈ ಗಿರಿ ಕಂದರ
ಬೆಟ್ಟ ಗುಡ್ಡಗಳ ಬಾಹುಗಳಲಿ
ಹಸಿರ ಚಿಗುರನು ಚಿಮ್ಮುತಲಿ|
ತರತರದ ಹೂಗಳಿಗೆ
ಬಣ್ಣದ ಬಣ್ಣದ ರಂಗನು
ತುಂಬುವಂದದಲಿ|
ನೋಡುಗರ ಮನಸ ತಣಿಸುತಲಿ
ಸೂರ್ಯ ಕಿರಣಗಳ ಬಣ್ಣಗಳ
ವರ್ಣವನು ವರ್ಣಿಸುತಲಿ||
ಬಾರೋ ವಸಂತ ಬಾರೋ
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)