ಸಾರೋ ಸಾರೋ ಸಾರೋ ಸುಮ್ಮನೆ
ನರಕಕಿಳಿವರೇನೋ ||ಪ||

ಪರಸ್ತ್ರೀಯರ ತಡವಿ ಕರವ ಪಿಡಿವರೇನೋ
ಸುರರು ನರರು ಎಲ್ಲರು ಜವನದಿ
ಹರಲಿಹೊತ್ತದ್ದನ್ನು ಅರಿಯದಾದಿಯೇನೋ ||೧||

ಮೋಹಿಸಿ ಮಾತುಗಳಾಡಿ ನಯದಿ
ಗಮ್ಮನೆ ನೋಡಿ ಭಯವು ಇಲ್ಲದೆ
ಮೈಯ ಮುಟ್ಟಿ ಬಿಂದು ಕೈಯ ಹಿಡಿವರೇನೋ ||೨||

ಲೇಸಿನಿಂದ ಜೀವ
ವಾಸವಿರುವ ದೇಹ
ಈಶ ಶಿಶುನಾಳಧೀಶಗ ಮೀಸಲಿರುವೆ ನಾನು ||೩||

*****