ಇಂದು ಪೆಟ್ರೋಲನ್ನು ಯತೇಚ್ಛವಾಗಿ ಯಂತ್ರಗಳಿಗೆ ಇತರೆ ವಸ್ತುಗಳ ಚಲನೆಗೆ ಬಳೆಸುತ್ತೇವೆ. ಹೀಗೆ ಬಳೆಸುತ್ತಿದ್ದರೆ ಭೂಮಿಯಲ್ಲಿ ದೊರೆಯುವ ಈ ಇಂಧನ ಬಳಕೆಗೆ ತಕ್ಕಂತೆ ಸಾಕಾಗದೆ ಕಡಿಮೆಯಾಗುವ ಸ್ಥಿತಿಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೊಂದು ಮುಲದಿಂದ ಈ ಇಂಧನವನ್ನು ಸೃಷ್ಟಿ ಮಾಡುವ ಜೈವಿಕ ತಂತ್ರಜ್ಞಾನವು ಮುಂದುವರೆದಿದೆ. ಈಗಾಗಲೇ ರಾಮರ್‌ಪಿಳ್ಳೆ, ಎಂಬುವವರು ವನಸ್ಪತಿಗಳಿಂದ ಇಂಧನವನ್ನು ಕಂಡು ಹಿಡಿದಿದ್ದಾರೆ. ನಾವು ಸಾಸುವೆ, ಕಡಲೆಕಾಯಿ, ತೆಂಗು, ಕುಸುಬಿ, ಸೂರ್ಯಕಾಂತಿ ಇನ್ನಿತರೆ ವನಸ್ಪತಿಗಳಿಂದ ಸೃಷ್ಟಿಯಾಗುವ ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುತ್ತೇವೆ. ಇದೇ ರೀತಿಯಲ್ಲಿ ವನಸ್ಪತಿಗಳಿಂದ ಪೆಟ್ರೋಲದಂತಹ ಇಂಧನವನ್ನು ತಯಾರಿಸಲು ೫೦ ಜಾತಿಯ ಮರಗಳನ್ನು ಕಂಡು ಹಿಡಿಯಲಾಗಿದೆ.
*****
