ಮಾನವ ದೇಹಕ್ಕೆ ಸಂಬಂಧಪಟ್ಟ ಕೆಲವು ಆಶ್ಚರ್ಯಕರ ಸಂಗತಿಗಳಿವೆ.

* ನಮ್ಮ ದೇಹದಲ್ಲಿ ಸುಮಾರು ೫ ರಿಂದ ೬ ಲೀಟರ್‌ಗಳಷ್ಟು ರಕ್ತವಿರುತ್ತದೆ. ಅಂದರೆ ನಮ್ಮ ದೇಹದ ೧-೧೩ನೇ ಅಂಶದಷ್ಟು. ರಕ್ತ ನೀರಿಗಿಂತ ೫ ಪಟ್ಟು ದಪ್ಪವಾದ ದ್ರವ. ಅಸ್ಥಿಮಜ್ಜೆ (ಬೋನ್ ಮ್ಯಾರೊ)ಯು ಪ್ರತಿ ಸೆಕೆಂಡಿಗೆ ೧೦,೦೦೦,೦೦೦ ಕೆಂಪು ರಕ್ತಕಣಗಳನ್ನು ತಯಾರಿಸುತ್ತದೆ.

* ಹೃದಯದ ತೂಕ ಕೇವಲ ೨೫೦ ರಿಂದ ೩೦೦ ಗ್ರಾಂನಷ್ಟು. ಅದು ಪ್ರತಿ ನಿಮಿಷಕ್ಕೆ ೭೨ ಬಾರಿ ಬಡಿಯುತ್ತದೆ. ತಾಸಿಗೆ ೪,೫೦೦ ಬಡಿತಗಳು, ದಿನಕ್ಕೆ ೧ ಲಕ್ಷ ಮತ್ತು ವರ್ಷಕ್ಕೆ ೨,೯೪೦ ಮಿಲಿಯನ್. ಹೃದಯದ ಪ್ರತಿಯೊಂದು ಬಡಿತವು ಸುಮಾರು ೭೦ ಗ್ರಾಂನಷ್ಟು ರಕ್ತವನ್ನು ಪಂಪ್ ಮಾಡುತ್ತದೆ. ಹೀಗೆ ಒಂದು ವರ್ಷದಲ್ಲಿ ೨,೫೫೫ ಟನ್ನಗಳಷ್ಟು! ಹೃದಯವು ಪುನಃ ಪುನಃ ದೇಹದ ರಕ್ತವನ್ನು ಪಂಪ್ ಮಾಡುತ್ತಿರುತ್ತದೆ. ಪ್ರತಿ ಅರ್ಧ ಗಂಟೆಗೆ ಅದು ಪಂಪ್ ಮಾಡುವ ರಕ್ತದ ಪ್ರಮಾಣ ೨೬೦ ಲೀಟರ್‌ಗಳು. ದಿನಕ್ಕೆ ೧೨,೦೦೦ ಲೀಟರ್‍ಗಳಷ್ಟು. ಹೃದಯವು ರಕ್ತವನ್ನು ೬೦,೦೦೦ ಮೈಲಿಗಳಷ್ಟು ಉದ್ದದ ರಕ್ತನಾಳದಲ್ಲಿ ಪಂಪ್ ಮಾಡುತ್ತದೆ. ಈ ರಕ್ತನಾಳಗಳನ್ನು ಒಂದಾದ ನಂತರ ಒಂದರಂತೆ ಜೋಡಿಸಿದರೆ ಭೂಮಿಗೆ ಎರಡೂವರೆ ಸಲ ಪ್ರದಕ್ಷಿಣೆ ಹಾಕಬಹುದು!

* ನಮ್ಮ ದೇಹವು ೭೨,೦೦೦ ನರಗಳನ್ನು ಹೊಂದಿದೆ.

* ಸಾಧಾರಣ ಉಸಿರಾಟದ ಮೂಲಕ ಒಬ್ಬ ಮನುಷ್ಯನು ೫೦೦ ಮಿ.ಲೀ.ನಷ್ಟು ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ದೀರ್ಘ ಉಸಿರಾಡುವಾಗ ೧,೫೦೦ ರಿಂದ ೨,೦೦೦ ಮಿ.ಲೀ.ನಷ್ಟು ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ನಾವು ದಿನಂಪ್ರತಿ ೨೬,೦೦೦ ಸಲ ಉಸಿರಾಡುತ್ತೇವೆ.

* ನಮ್ಮ ದೇಹದಲ್ಲಿರುವ ಎಲುಬುಗಳ ಸಂಖ್ಯೆ ೨೦೬.

* ನಮ್ಮ ಮೆದುಳಿನ ತೂಕ ೧,೨೬೦ ರಿಂದ ೧,೩೮೦ ಗ್ರಾಂನಷ್ಟು. ನವಜಾತ ಶಿಶುಗಳ ಮೆದುಳಿನ ತೂಕ ೩೭೦ರಿಂದ ೪೦೦ ಗ್ರಾಂ ನಷ್ಟು. ಅದು ದೇಹದ ೧-೧೫ನೇ ಅಂಶ. ಇದು ೧೦ ಬಿಲಿಯನ್‌ಗಿಂತಲೂ ಹೆಚ್ಚಿನ ನರ್ವ್‌ಪಲ್ಸ್‌ಗಳಿಂದ ಮತ್ತು ೯,೦೦೦,೦೦೦,೦೦೦ ಜೀವಾಣು (ಸೆಲ್ಸ್) ಗಳಿಂದ ಮಾಡಲ್ಪಟ್ಟಿದೆ. ನಾವು ಉಸಿರಾಡುವ ಆಮ್ಲಜನಕದ ೧-೫ನೇ ಅಂಶ ಮತ್ತು ದೇಹ ಹೀರಿಕೊಳ್ಳುವ ಒಟ್ಟು ಕ್ಯಾಲರಿ ಶಕ್ತಿಯ ೧-೫ ನೇ ಅಂಶವನ್ನು ಹೀರುತ್ತದೆ. ಮೆದುಳಿನ ಶೇಕಡಾ ೮೫ರಷ್ಟು ಭಾಗ ನೀರಿನಿಂದ ಕೂಡಿದೆ. ದಿನವೊಂದರಲ್ಲಿ ಮೆದುಳು ನೆನಪಿಡುವ ಮಿತಿ ೮೬ ಮಿಲಿಯನ್‌ಗಳಷ್ಟು. ಮೆದುಳಿಗೆ ಬೂದಿ ಬಣ್ಣದ ಸುಕ್ಕುಗಟ್ಟಿದ ಹೊದಿಕೆ (ಮೆನಿನ್ಂಗಸ್) ಇದೆ.
*****