ಅರುಣನುದಯನೆ ನಿನ್ನ

ಅರುಣನುದಯನೆ ನಿನ್ನ
ಕರುಣ ಕಮಲದಿಂದಲಿ
ಜಗದ ಜೀವ ಚೇತನವಾಗಿ
ಸುಂದರ ರೂಪತಳೆದು
ತೋರುತಿಹುದು ನಿತ್ಯ ಸತತ||

ದಿನದ ಪ್ರತಿಘಳಿಗೆಯನು
ಬಿಡದೆ ನೀ ಬೆಳಗಿ ಬೆಳೆಯುತ
ಲೋಕವನುದ್ದರಿಸುತಿರುವೆ|
ಬೆಳೆದು ಬೆಳೆದಂತೆ
ಸವೆದು ಇತರರಿಗೆ
ಚಿಕ್ಕವನಾಗಿರುವಂತೆ ತೋರಿ
ಮಾದರಿಯಾಗಿರುವೆ||

ನೀ ಏನನು ಬಯಸದಲೆ
ಎಲ್ಲಾ ನಮಗಾಗಿ ಬಗೆಬಗೆ ಕಿರಣ
ಕಾಂತಿಗಳ ಹೊರಸೂಸುತಿರುವೆ|
ಕೋಟಿ ವಂದನೆ ನಿನಗೆ
ತಾ ಸುಡುತಲಿ ಜಗವ ಬೆಳಗುತಿರುವೆ|
ನಿನ್ನೊಬ್ಬನಿಗೇ ತಿಳಿದಿದೆ ಈ ವಸುಂಧರೆಯ
ಸಂಪೂರ್ಣ ಸತ್ಯ‌ಇತಿಹಾಸ ಪುರಾವೆ||

ನೀನೋಬ್ಬನೇ ಕಂಡಿರುವೆ ನಮ್ಮೆಲ್ಲ
ಪೂರ್ವಜರ ಸ್ಥಿತಿ ಗತಿ ಮತಿಯನು
ನೀನೊಬ್ಬನೇ ದರ್ಶಿಸಿರುವೆ ಇಲ್ಲಿ ನಡೆದಾಡಿದ
ದೇವಾದಿ ದೇವರುಗಳನು|
ನಿನ್ನಿಂದಲಾಗಿ ಚಂದ್ರಮನು ಹುಣ್ಣಿಮೆಯಾಗಿ
ಮೈತಳೆದು ಮಿನುಗುವನು
ನಿನ್ನಂತ ಪುಣ್ಯದೇವನು ಯಾರಿಹರು
ನಿನಗೆ ನೀನೆ ಸರಿಸಾಟಿಯು|
ಪ್ರತಿ ಮುಂಜಾನೆ ಅರ್ಪಿಸುವೆ ನಿನಗೆ
ನನ್ನದೊಂದು ಅರ್ಘ್ಯ ನಮಸ್ಕಾರವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಗಳ ಧ್ವನಿಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೪

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…