ಸೊಳ್ಳೆಬತ್ತಿ ಉರಿಯುವಿಕೆಯಿಂದ ಕ್ಯಾನ್ಸರ್ ಬರಬಹುದು

ಸೊಳ್ಳೆಬತ್ತಿ ಉರಿಯುವಿಕೆಯಿಂದ ಕ್ಯಾನ್ಸರ್ ಬರಬಹುದು

ಶುದ್ಧವಿಲ್ಲದ ಪರಿಸರ ಎಲ್ಲೆಲ್ಲೂ ಇರುವುದರಿಂದ ಸಾಮಾನ್ಯವಾಗಿ ಎಲ್ಲಮನೆಗಳಿಗೂ ಸೊಳ್ಳೆಗಳು ಲಗ್ಗೆ ಇಡುತ್ತವೆ. ಸೊಳ್ಳೆಗಳನ್ನು ಸಾಯಿಸಲು ಅನೇಕ ಕಂಪನಿಗಳು ಕಾಯಿಲ್‌(ಚಾಪ್) ಗಳನ್ನು ಉತ್ಪತ್ತಿ ಮಾಡಿ ಬಳಕೆಗೆ ಬಿಡುಗಡೆ ಮಾಡುತ್ತಿವೆ. ಎಲ್ಲರ ಮನೆಗಳಲ್ಲಿ ಸೊಳ್ಳೆಯ ಚಾಪಗಳನ್ನು ಹೊತ್ತಿಸಿ ಹಾಯಾಗಿ ನಿದ್ರೆ ಮಾಡಬಹುದು. ಸೊಳ್ಳೆ ಕಡಿತದಿಂದ ಉಂಟಾಗುವ ಕಾಯಿಲೆಯನ್ನು ದೂರವಿಡಲು ಹೋಗಿ ನಾವೇ ಮಹಾಮಾರಿಯನ್ನು ಬರಮಾಡಿ ಕೊಳ್ಳುತ್ತಿದ್ದೇವೆ, ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಮಾಸ್ಕಿಟೊ ಕಾಯಿಲ್‌ಗಳ ಉರಿವಿಕೆಯಿಂದ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳು ಬರಬಹುದೆಂದು ಎಚ್ಚರಿಸಿದ್ದಾರೆ.

ಇಂದು ಏಷಿಯಾದ ವಿವಿಧ ಭಾಗಗಳಲ್ಲಿ ಸೊಳ್ಳೆ ಚಾಪ್‌ಗಳು ಸೊಳ್ಳೆ ನಿವಾರಕ ಮ್ಯಾಟಗಳನ್ನು ವ್ಯಾಪಕವಾಗಿ ಬಳೆಸುತಿದ್ದು ವಾರ್ಷಿಕವಾಗಿ ಹತಾರು ಸಾವಿರ ಕಾಯಿಲ್‌ಗಳು ಮಾರಾಟವಾಗುತ್ತವೆ. “ಎನ್ವರಾನ್‌ಮೆಂಟಲ್‌ ಹೆಲ್ತ್‌ಏರ್ಸಿಡೆರೈವ್ಸ್” ಪತ್ರಿಕೆಯ ಸಂಚಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಪ್ರಕಾರ ಏಕಮೇವ ಮಾಸ್ಕಿಟೋ ಕಾಯಿಲ್ ಏಕ ಕಾಲಕ್ಕೆ ೭೫ ಸಿಗರೇಟು ಸೇದಿ ವಿಸರ್ಜಿಸಿದಷ್ಟು ವಿಷದ ಘಟಕಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳಲ್ಲಿರುವ ಘನಾಂಶಗಳು ಹಾಗೂ ಹೊಗೆಯಲ್ಲಿರುವ ರಾಸಾಯನಿಕಗಳು ಕಣ್ಣು ಮತ್ತು ಶ್ವಾಸಕೋಶಗಳಿಗೆ ಹಾನಿಮಾಡುವುದರ ಜೊತೆಗೆ ‘ಕ್ಯಾನ್ಸರ್‌ಕಾರಕ’ ಆಗಿ ಪರಿಣಮಿಸುತ್ತದೆಂದು ಎಚ್ಚರಿಸಿದೆ.

ಸೊಳ್ಳೆ ನಿವಾರಕ ಚಾಪ್‌ಗಳಲ್ಲಿರುವ ಪ್ರಮುಖ ಕಚ್ಚಾ ಅಂಶವು ಪೈರಿ ಥ್ರಾಯಿಡ್ಸಗಳೆಂಬ ಕೀಟನಾಶಕದ ವರ್ಗಕ್ಕೆ ಸೇರಿದೆ. ದೇಶದಲ್ಲಿ ಲಭ್ಯವಿರುವ ಒಂದು ಸಾಮಾನ್ಯ ಮಾಸ್ಕಿಟೊ ಕಾಯಿಲ್‌ ಮರದ ಹೊಟ್ಟು, ಕೊಬ್ಬರಿ, ಪುಡಿ, ಹಾಗೂ ಸ್ಟಾರ್ಚ್‌ಗಳ ಜೊತೆಗೆ ಶೇ. ೦.೧ರಷ್ಟು ಪೈರಿಥ್ರಾಯಿಡ್ ಹಾಗೂ ಡಿ ಆಲೆಥೈನ್ ಅಂಶವನ್ನು ಹೊಂದಿದೆ. ಸ್ಕೌಲ್ಟಿಂಗ್ ಕಾಯಿಲ್ ಮನುಷ್ಯನ ಕೂದಲಿಗಿಂತ ೧೦೦ ರಿಂದ ೧೦೦೦ ಪಟ್ಟು ದಪ್ಪವಾಗಿರುವ ಕಣಗಳನ್ನು ಬಿಡುಗಡೆ ಮಾಡುತ್ತದೆ. ಅಮೇರಿಕಾದ ನ್ಯೂಜೆರ್ಸಿಯಲ್ಲಿರುವ ದಂತ ವೈದ್ಯಶಾಸ್ತ್ರ ಹಾಗೂ ವೈದ್ಯಶಾಸ್ತ್ರ ವಿಶ್ವವಿದ್ಯಾನಿಲಯದ ವೇಲಿಲ್ಯೂ ಅವರ ಪ್ರಕಾರ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿಂದ ಆವೃತವಾಗಿರುವ ಈ ಘನ ಕಣಗಳು ಶ್ವಾಸಕೋಶದ ಆಳಕ್ಕಿಳಿದು ಶಾಶ್ವತವಾಗಿ ಅಲ್ಲಿ ನೆಲೆನಿಲ್ಲುತ್ತವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬಳಗದ ಸಂಶೋಧನೆಯು ಇನ್ನೊಂದು ಅಪಾಯಕಾರಿ ಸತ್ಯವನ್ನು ಬಯಲು ಮಾಡಿದೆ. ಕೆಲವು ಮ್ಯಾಸ್ಕಿಟೊ ಕಾಯಿಲೆಗಳು ‘ಎಸ್ ೨’ ಎಂಬ ಹೆಸರಿನ ಆಕ್ಟಾಕ್ಲೊರೋಡಿ ಪ್ರೋಪಿಲ್ ಈಧರ್ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಕಾಯಿಲ್‌ಗಳನ್ನು ಉರಿಸಿದಾಗ ೫೨ ರಾಸಾಯನಿಕವು ಬಿಸ್‌ಕ್ಕೊರೋಮಿಧೈಲ್‌ ಈಧರ್ ಎಂಬ (BCME) ಇನ್ನೊಂದು ರಾಸಾಯನಿಕದ ರೂಪ ತಾಳುತ್ತದೆ. ಈ ಬಿ.ಸಿ.ಎಂ.ಇ. ರಸಾಯನಿಕವು ಅತ್ಯಂತ ಹಾನಿಕಾರಕವಾಗಿದ್ದು ಶ್ವಾಸಕೋಶದ ಕ್ಯಾನ್ಸರ್‌ರೋಗ ಉಂಟುಮಾಡಬಲ್ಲಷ್ಟು ಪ್ರಬಲವಾಗಿದೆ. ಕೆಲವರು ರಾತ್ರಿ ನಿದ್ರಿಸುವಾಗ ತಮ್ಮ ಹಾಸಿಗೆಗೆ ಅತ್ಯಂತ ಹತ್ತಿರದಲ್ಲಿ ಕಾಯಿಲ್ ಗಳನ್ನು ಹಚ್ಚಿಟ್ಟು ಮಲಗುತ್ತಾರೆ. ಈ ಕಾಯಿಲ್‌ಗಳಿಂದ ಬರುವ ಹೊಗೆಯನ್ನು ಉಸಿರಾಡುವುದರಿಂದ ಆರೋಗ್ಯದ ಮೇಲೆ ಕೆಲವು ಪರಿಣಾಮಗಳಾಗುತ್ತವೆ. ಇದರಿಂದಾಗಿ ಕಣ್ಣು ಹಾಗೂ ಉಸಿರಾಟದ ತೊಂದರೆಯ ಜೊತೆಗೆ ಆಸ್ತಮಾ ಸಂಬಂಧಿತ ತೊಡಕುಗಳು ಸೇರಿಕೊಂಡು ಆರೋಗ್ಯ ಪರಸ್ಥಿತಿ ಮತ್ತಷ್ಟು ಹದಗೆಡುತ್ತದೆ. ರಾತ್ತಿ ಸೊಳ್ಳೆ ಚಾಪ್‌ಗಳನ್ನು ಬಳೆಸುವಾಗ ಸುರಕ್ಷಾಕ್ರಮಗಳತ್ತ ಆದ್ಯ ಗಮನಹರಿಸಬೇಕಿದೆ. ಇಲ್ಲದಿದ್ದರೆ ಕ್ಯಾನ್ಸರ್ ರೋಗವನ್ನು ನೀವೇ ಕೈಯಾರೆ ಅವ್ಹಾನಿಸಿಕೊಂಡಂತಾಗುತ್ತದೆ. ಈ ವಿಷಯದಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಅವಶ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಭ್ರಮ
Next post ಅಲ್ಲಾ ನಿದ್ರಿಸುತಾನೆ ಇಲ್ಲಾ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…