೧೯೮೯ ರಿಂದಲೂ ನಾನು ಅಲೆಮಾರಿ, ಅರೆ ಅಲೆಮಾರಿ, ಜನಾಂಗವಾದ ದೊಕ್ಕಲು ಮಕ್ಕಳ ಕುರಿತು ಅಧ್ಯಯನ ಮಾಡುತ್ತಲೇ ಇದ್ದೇನೆ. ಅವರ ಹಚ್ಚೆ ಕಲೆಯ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಕ್ಷೇತ್ರ ಕಾರ್ಯದಲ್ಲಿದ್ದೇನೆ…

“ಹಚ್ಚೆ ಮೊದಲೋ ಜನ ಮೊದಲೋ..?” ಎಂದು ನನ್ನನ್ನು ಪ್ರಶ್ನಿಸುವ ಮೂಲಕ ಹಚ್ಚೆಯ ಮಹತ್ವವನ್ನು ಆ ಜನರು ವಿವರಿಸುತ್ತಾ ಹೋದರು.

ಹರಪ್ಪಾ ಮಹೊಂಜಾದಾರೋ ಸಂಸ್ಕೃತಿಯ ಕಾಲದಲ್ಲಿ ಕೂಡಾ ಹಚ್ಚೆ ಕಲೆ ಇತ್ತು ! ಗಂಡಸರು ಹೆಂಗಸರು ಮಕ್ಕಳು ಅಷ್ಟೇ ಏಕೆ ಗೋಡೆ ಮಣ್ಣಿನ ಪಾತ್ರೆ ಪಡುಗ ಗಡಿಗೆಗಳ ಮೇಲೆ ಹಚ್ಚೆ ಕಲೆಯಿತ್ತು.

ಹಚ್ಚೆ ಕಲೆಯು ಮೂಲ ನಿವಾಸಿಗಳ ಬುಡ್ಡಕಟ್ಟು ಜನರ ಕಲೆ. ಆರಂಭದಲ್ಲಿ ಬುಡಕಟ್ಟಿನ ನಾಯಕ-ನಾಯಕಿ ಮಾತ್ರ ಹಚ್ಚೆ ಹಾಕಿಸಿ ಕೊಳ್ಳುತ್ತಿದ್ದರು. ನಂತರ ಗುಂಪು ಗುಂಪು ಹಚ್ಚೆ ಹಾಕಿಸಿಕೊಳ್ಳಲು ಮುಂದಾಯಿತು. ಇದು ಅಧಿಕಾರದ ಗುಲಾಮಗಿರಿಯ ಅಪರಾಧಿಗಳ ಪತ್ತೆಗಾಗಿ ಹಚ್ಚೆ ಬಳಕೆಯಲ್ಲಿತ್ತು.

ಸಮಾಜ ಶಾಸ್ತ್ರಜ್ಞರ ಪ್ರಕಾರ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆಯೆಂದೂ ಕ್ರಿ.ಪೂ.ದಲ್ಲಿ ಮಮ್ಮಿಯೊಂದರಲ್ಲಿ ದಕ್ಷಿಣ ಅಮೆರಿಕಾದಲ್ಲಿ ಪತ್ತೆ ಹಚ್ಚಿರುವರು.

ಜೂಲಿಯಸ್ ಸೀಸರ್ ಕ್ರಿ.ಪೂ. ೫೪ ರಲ್ಲಿ ಬರೆದಿರುವ ಟೆಂಪೆಸ್ಟ್, ಮ್ಯಾಕ್‌ಬತ್ ಕೃತಿಗಳಲ್ಲಿ ಹಚ್ಚೆಯ ಕುರುಹುಗಳಿವೆ.

ಜೇಮ್ಸ್ ಕುಕ್ ಎಂಬ ನಾವಿಕ ಯುರೋಪ್‌ಗೆ ಮೊತ್ತ ಮೊದಲು ಹಚ್ಚೆಯನ್ನು ಪರಿಚಯಿಸಿದ.

೧೯೭೧ರಲ್ಲಿ ಹವಾಯಿ ದ್ವೀಪದಿಂದ ಮರಳಿದ್ದ ಈತ !

ಹಿಟ್ಲರ್ -ಕೈದಿಗಳಿಗೆ ಹಚ್ಚೆ ಹಾಕಿಸುತ್ತಿದ್ದನೆಂದು ಇತಿಹಾಸ ಹೇಳುವುದು.

ಕ್ರೈಸ್ತ ಮಿಷನರಿಗಳು ಹಚ್ಚೆ ಕಲೆಗೆ ವಿರೋಧವಿದ್ದವು. ೧೮-೧೯ ನೆಯ ಶತಮಾನದಲ್ಲಿ ಉನ್ನತ ಜನರೂ ಹಚ್ಚೆಗೆ ಒಲವು ತೋರಿದ್ದು ಇತಿಹಾಸ ಸಾರುವುದು. ೧೯೬೦ ರಲ್ಲಿ ಹಚ್ಚೆ ಜನಪ್ರಿಯವಾಗಿತ್ತು !

ಗೋರಂಟಿ – ಮೆಹೆಂದಿಯು ಹಚ್ಚೆಯ ರೂಪವೆಂಬುದನ್ನು ಹೇಳುವರು.

ಹಚ್ಚೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಇದೆ. ಸಂಗ್ರಹಿಸಬೇಕಾಗಿದೆ. ಕಾದೂ ನೋಡೋಣವಲ್ಲವೇ?
*****