ನಾಟಕವೊಂದರ ಹಾಡುಗಳು – ೨

ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ
ಹೊರಹರಿದನವನು ಅಂತರವ ಕ್ಷಮಿಸಿ,
ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ;
ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು
ಆಕಾರವಿರದ ಕಲ್ಪಕ ಕತ್ತಲನ್ನು;
ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು
ಎಲ್ಲ ದೈವಿಕ ಸಹನಶೀಲತೆಯನು
ವ್ಯರ್‍ಥಗೊಳಿಸಿತು ಡೋರಿಕ್ ಶಿಸ್ತುಗಳನು.

ಹಿರಿದೆಂದು ಮಾನವನು ಭಾವಿಸಿದ್ದೆಲ್ಲ
ಉಳಿವುದೊಂದೇ ಹಗಲು ಅಥವ ಗಳಿಗೆ;
ಪ್ರೇಮ ನೀಡುವ ಸೌಖ್ಯ ಪ್ರೇಮವನೆ ತಿನ್ನುವುದು,
ಕುಂಚವೇ ಚಿತ್ರಕನ ಕನಸುಗಳನು,
ವಂದಿಘೋಷಣೆ ಅವನ ವೈಭವವ ಮುಗಿಸುವುದು,
ಸೈನಿಕನ ನಡೆ ಅವನ ಶಕ್ತಿಯನ್ನು;
ಇರುಳಲ್ಲಿ ಜ್ವಾಲೆಯಾಡುವುದೆಲ್ಲ ಬೆಳೆದದ್ದು
ಹೀರಿ ಮಾನವ ಹೃದಯಸಾರವನ್ನು.
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

(೪) ಬ್ಯಾಬಿಲೋನಿನ ಜ್ಯೋತಿಶ್ಯಾಸ್ತ್ರ
(೫) ‘ಆಕಾರವಿಲ್ಲದ ಕಲ್ಪಕ ಕತ್ತಲು’ ಕ್ರಿಶ್ಚಿಯನ್ ಧರ್‍ಮವನ್ನು ಸೂಚಿಸುತ್ತದೆ. ಅದನ್ನು ಹಾಗೆ ಬಣ್ಣಿಸಿದವನು ಪ್ರೊಕ್ಲಸ್ ಎಂಬ ದಾರ್‍ಶನಿಕ. ಇವನು ನವ ಪ್ಲೆಟಾನಿಕ್ ಪಂಥದವನು.
ಡೋರಿಕ್ ಶಿಸ್ತು – ಗ್ರೀಕರ ಶಿಸ್ತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೭
Next post ಮೈಸೂರ ಮಲ್ಲಿಗೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…