ಕನ್ನಡ ಕನ್ನಡ

ನಮ್ಮ ನೆಲವಿದು ಕನ್ನಡ
ನಮ್ಮ ಜಲವಿದು ಕನ್ನಡ
ನಮ್ಮ ನಾಡಿದು ಕನ್ನಡ
ಕನ್ನಡ ಕನ್ನಡ ||

ಶಿಲ್ಪ ಕಲ್ಪತಲ್ಪವಲ್ಲಿ
ಅಂದ ಚೆಂದ ಒಲ್ಮೆಯಲಿ
ಒಲುಮೆ ಚಿಲುಮೆ ನಲುಮೆ
ತಂಗಾಳಿಯಲಿ ತಂಪ ಸೂಸಿ
ಇಂಪಾಗಿ ಕೇಳ ಬರುವ ಕನ್ನಡ ||

ಸುಂದರ ಸುಮಧುರ ಕನ್ನಡ
ಗಿರಿಧಾಮಗಳೆತ್ತರಕೆ
ಮೈಯೊಡ್ಡಿ ಜಗದ ಸುತ್ತಣ
ಕೆಳೆಯ ಬಯಸಿ ಕರೆಯನ್ನಿತ್ತು
ಬರಸೆಳೆಯುತಿಹುದು ಕನ್ನಡ ||

ಜಲಧಿ ತರಂಗಗಳ
ನಡುವೆ ತೂಗುವ ದೋಣಿಯ
ನಾವಿಕನ ಕೊರಳ ದನಿಯಾಗಿ
ಬೆರೆತ ನಾದವೇ ಕನ್ನಡ
ಸುಂದರ ಸುಮಧುರ ಕನ್ನಡ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೆ
Next post ಮೋಹನ ಮುರಳಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…