ರೇಷ್ಮಸೀರೆ ಅಂಗಡಿಯೊಂದರ ಮುಂದೆ ದೊಡ್ಡ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅದೂ ಬರೀ ಹೆಂಗಸರೇ ತುಂಬಿದ್ದರು. ಗಂಡಸೊಬ್ಬನು ದಾಪುಗಾಲು ಹಾಕುತ್ತ ಕ್ಯೂ ಬ್ರೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ. ಎಲ್ಲಿ ತೂರಿಕೊಳ್ಳಲು ಪ್ರಯತ್ನಿಸಿದರೂ ಯಾವ ಹೆಂಗಸೂ ಹಾದಿ ಮಾಡಿಕೊಡಲಿಲ್ಲ. ಅವನಿಗೂ ತಾಳ್ಮೆ ಕೈ ಕೊಟ್ಟಿತು. “ನೀವು ಹೀಗೆ ಅಡ್ಡಿ ಮಾಡುತ್ತ ಹೋದರೆ ನಾನು ಹೋಗಿ ಅಂಗಡಿ ಬಾಗಿಲು ತೆರೆಯುವುದಾದರೂ ಹೇಗೆ? ನನ್ನ ಅಂಗಡಿಯ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಹಿಂದಿರುಗುತ್ತೀರಿ ಅಷ್ಟೆ!”
***