ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್

ಪರಿಸರಕ್ಕೆ ಕಂಟಕ ಪ್ರಾಯವಾಗಿ ವಾಯುಮಾಲಿನ್ಯವನ್ನು ಹದಗೆಡಿಸುವ, ಮತ್ತು ಭೂಮಿಯಲ್ಲಿ ಕರಗದೇ ರೈತರಿಗೆ ವೈರಿಯಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಎಲ್ಲರಿಗೂ ಗೊತ್ತು. ಇದು ಹೇಗೆ ಮಾಡಿದರೂ ನಾಶ ಹೊಂದಲಾರದು, ಕನಿಷ್ಟ ಮೂರು ನಾಲ್ಕು ನೂರು ವರ್ಷಗಳವರೆಗೆ ಭೂಮಿಯಲ್ಲಿ ಕರಗದೇ ಜಲ ಸಂಚಯಕ್ಕೆ ತೊಡಕಾಗುತ್ತಿತ್ತು ಸುಟ್ಟರೂ ಸಹಿತ ಪರಿಸರ ಕಷ್ಮಲಗೊಳ್ಳುವ ಇಂಗಾಲ ಡೈ ಆಕ್ಸೈಡ್ ಉತ್ಪತ್ತಿಯಾಗಿ ಜನರ ಉಸಿರಾಟಕ್ಕೆ ಮಾರಕವಾಗಿತ್ತು. ಇದರ ನಿರ್ನಾಮಕ್ಕೆ ಮದ್ದೇ ಇರಲಿಲ್ಲ ಎಂಬ ಸಂದರ್ಭದಲ್ಲಿ ಭಾರತೀಯ ಯುವ ವಿಜ್ಞಾನಿ ಪಂಕಜ ಅವಧಿಯು ಅವರ ಈ ಪಾಲಥಿನ್ ಅನ್ನು ಭಕ್ಷಿಸುವ ೪-೫ ಕೀಟಗಳನ್ನು ಶೋಧಿಸಿದ್ದಾರೆ.

ಛತ್ತೀಸಗಡದ ಕೃಷಿ ವಿಜ್ಞಾನಿಯಾದ ಇವರು ಸೊಸೈಟಿ ಫಾರ್ ಪಾರ್ಥೇನಿಯಂ ಮ್ಯಾನೇಜ್‌ಮೆಂಟ್ ಸಂಯೋಜಕರಾಗಿ ತಮ್ಮ ಖಾಸಗಿ ಪ್ರಯೋಗಾಲಯದಲ್ಲಿ ೧೩೫ ವಿವಿಧ ಕೀಟಗಳ ಮೇಲೆ ೨ ವರ್ಷ ಪ್ರಯೋಗ ನಡೆಯಿಸಿದರು. ಕೊನೆಗೆ ೫ ವಿವಿಧ ಕೀಟಗಳು ಪಾಲಿಥಿನ್ ತಿನ್ನುವಂತಹವು ಎಂಬುವುದು ಖಚಿತವಾಯಿತು. ಇದಕ್ಕಾಗಿ ‘ಪ್ಲಾಸ್ಟಿಕ್ ಈಟಿಂಗ್ ಆರ್ಗೆನಿಸಂ ಪರಿಯೋಜನಾ’ ಹುಟ್ಟು ಹಾಕಿದರು. ಈ ಪ್ಲಾಸ್ಬಿಕ್ ತಿನ್ನುವ ಕೀಟಗಳಿಗೆ ‘ಪ್ಲಾಸಿಕ್ ಬಗ್’ ಎಂದು ಹೆಸರಿಸಿದ್ದಾರೆ. ಸದ್ಯಕ್ಕೆ ಈ ಕೀಟದ ಇನ್ನಿತರ ವಿವರಗಳು ಮತ್ತು ಅದರ ವೈಜ್ಞಾನಿಕ ಹೆಸರುಗಳನ್ನು ಅವಧಿಯು ರಹಸ್ಯವಾಗಿ ಇರಿಸಿದ್ದಾರೆ.

೧೯೯೯ ರಲ್ಲಿಯೇ ಈ ಬಗ್ಸ್‌ಗಳನ್ನು ಕಂಡು ಹಿಡಿದರೂ ಇವುಗಳ ಜೀವನ ಚಕ್ರ ಇನ್ನು ವಿಸ್ತಾರವಾದ ಅಧ್ಯಯನಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳಲಾಯಿತೆಂದು ಹೇಳುತ್ತಾರೆ. ಚಳಿಗಾಲದಲ್ಲಿ ಸಕ್ರಿಯವಾಗಿ ಈ ಕೀಟಗಳು ರೈತನಿಗೆ ಮಿತ್ರನಂತೆ ಇರುತ್ತವೆಂದೂ ಹೇಳುತ್ತಾರೆ. ಈ ಕೀಟಗಳು ೮೦ ವಿವಿಧ ಗಿಡಗಳ ಎಲೆಗಳನ್ನು ತಿನ್ನುವುದರ ಜತೆಗೆ ಅಲ್ಲಿನ ಕೆಲವು ಮುಖ್ಯ ಬೆಳೆಗಳಿಗೆ ವೈರಿಯಾಗಿರುವ ಕಳೆಗಿಡಗಳನ್ನು ತಿಂದು ಹಾಕುತ್ತವೆ. ಇನ್ನೂಂದು ವಿಶೇಷವೆಂದರೆ ಕಪ್ಪು ಬಣ್ಣದ ಪಾಲಿಥಿನ್ ತಿನ್ನುವುದು ಇದರಲ್ಲಿ ಒಂದು ಕೀಟಕ್ಕೆ ಬಹು ಇಷ್ಟವೆಂದು ಹೇಳುತ್ತಾರೆ. ಇವು ಹಣ್ಣಾದ ಮಾವಿನ ಎಲೆಯಂಥಹ ೧೦-೧೨ ಪಾಲಿಥಿನ್ ಎಲೆಗಳನ್ನು ೩-೪ ಗಂಟೆಗಳಲಿ ತುಂಬ ರುಚಿವಹಿಸಿ ತಿನ್ನುತ್ತವೆ ಮತ್ತು ಜೀರ್ಣಿಸಿಕೊಳುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಕ್ಕರೆ ರೋಗವತಿ ವೇಗದವಘಡವಲ್ಲವೇ ?
Next post ಹೆಂಡತಿಯ ಮಾತ ಕೇಳಿದರೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys