ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ
ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ
ಬೇಕದುವೆ ಅವಘಡದ ವೇಗವಿಳಿಸುವುದು
ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ
ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು – ವಿಜ್ಞಾನೇಶ್ವರಾ
*****
ಲೋಕದ ಡೊಂಕ ತಿದ್ದುವುದೆನ್ನ ಕಾಳಜಿಯಲ್ಲ
ಲೋಕ ಶೋಕವನಿಳಿಸೆ ರಸ್ತೆಯೊಳು ಡೊಂಕಿರ
ಬೇಕದುವೆ ಅವಘಡದ ವೇಗವಿಳಿಸುವುದು
ಶಿಕ್ಷಣವೆಂದಾ ಡೊಂಕು ಕಬ್ಬನಗಿದು ತಿನ್ನದೆ
ಸಕ್ಕರೆಗೊಳಿಸುವಾತುರಕೆನ್ನ ಕೊರಗಿಹುದು – ವಿಜ್ಞಾನೇಶ್ವರಾ
*****