ಹೆಂಡತಿಯ ಮಾತ ಕೇಳಿದರೆ

ಹೆಂಡತಿಯ ಮಾತ ಕೇಳಿದರೆ
ಒಮ್ಮೊಮ್ಮೆ ಒಳ್ಳೆಯದೇ ಆಗುವುದು|
ಅಗಾಗ ಅವಳಿಗೂ ಗಂಡ
ನಾ ಹೇಳಿದಮಾತ ಕೇಳುವನೆಂಬ
ನಂಬಿಕೆಯಲೆ ಜೀವನ ಸಾಗುವುದು||

ವಾರಕ್ಕೊಮ್ಮೆ ಸಂತೆ ಮಾಡೆಂದರೆ
ಜೇಬಿಗೆ ಲಾಭವೇ ತಾನೆ|
ತಿಂಗಳಿಗೊಮ್ಮೆ ಮನೆ ಸಾಮಾನು
ತರಬೇಕೆಂದರೆ ಒಳ್ಳೆಯದೇ ತಾನೆ|
ದಿನವು ನೀವು ಶೆವ್ ಮಾಡಿ
ತಿಂಗಳಿಗೊಮ್ಮೆ ಹೇರ್‌ಕಟ್ ಮಾಡಿಸಿ
ಹೆರ್‌ಡೈ ಮಾಡಿಸೆಂದರೆ ನೀನು
ಚೆನ್ನಾಗಿಯೆ ಕಾಣುತ್ತೀಯತಾನೆ||

ತಿಂಗಳಿಗೊಂದು ಸಿನೆಮಾ ಬಯಸಿ
ವರ್ಷಕ್ಕೊಂದು ಸೀರೆ ಆಶಿಸಿದರೆ
ತಪ್ಪೇನಿಲ್ಲಾ ತಾನೆ|
ಆದರೆ ವರ್ಷಕ್ಕೊಂದು ಚಿನ್ನದ
ಚೀಟಿ ಹಾಕೆಂದರೆ ಲಾಭವೊ
ನಷ್ಟವೊ ನಾ ಕಾಣೆ|
ಆಗಾಗ ತೌರಿಗೆ ಹೋಗುವೆನೆಂದರೆ
ಆಟೊ ಹತ್ತಿಸಿ ಬಸ್ ದರ ಕೈಯಲ್ಲಿರಿಸಿದರೆ
ನಮಗೂ ಸ್ವಲ ಕಿರಿಕಿರಿ ಕಡಿಮೆತಾನೆ||

ಸಾಲ ಮಾಡಿಯಾದರೂ ಸೈಟ್
ಮಾಡಿಯೆಂದರೆ ಮುಂದೆ ಒಳ್ಳೆಯದೆ ತಾನೆ|
ಮಗನ ಯಾವಾಗಲು ಬೈಯುತಾ
ಮಗಳ ಬರೀ ಮುದ್ದಿಸುವುದು
ಸರಿಯಲ್ಲವೆನ್ನುವುದು ಮಗಳ ಒಳ್ಳೆಯದಕೆ ತಾನೆ|
ಬರ್ರೀ ಬೇರೆಯವರ ಉಸಾಬರಿ ನಿಮಗೇತಕೆ
ಎನ್ನುವುದ ನಮ್ಮಯ ಸೇಪ್ಟಿಗೆತಾನೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತೀಯ ಯುವ ವಿಜ್ಞಾನಿಯ ಶೋಧ – ಪ್ಲಾಸ್ಟಿಕ್ ಬಗ್
Next post ನವಿಲು ಗದ್ದೆ

ಸಣ್ಣ ಕತೆ

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…