ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗಿನ ಮಹತ್ವ ಮತ್ತು ಮೂಗಿನ ಚಮತ್ಕಾರ!

ಮೂಗು ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದು ಪ್ರಮುಖವಾದ ಅಂಗ. ಈ ಮೂಗು ಮೂಸುವ ಶಕ್ತಿಯಿಂದ ಹೆಸರಾಗಿದೆ. ಮೂಗಿನಿಂದಲೇ ಸುವಾಸನೆಯ ಪ್ರಭಾವವನ್ನು ಕಂಡು ಹಿಡಿಯಬಹುಡು. ಕೆಲರೋಗಗಳನ್ನು ಮೂಗಿನಿಂದ ಹೀರಿದ ಸುವಾಸನೆಯಿಂದಲೇ ಸರಿಪಡಿಸಬಹುದು. ಅಲ್ಲದೇ ಈ ವಾಸನೆಯಿಂದಲೇ ದೇಹದ ಸ್ಥಿತಿಯನ್ನೇ ಬದಲಾಯಿಸಬಹುದು. ಬೇಸರವನ್ನು ಹೋಗಲಾಡಿಸಿ ಉತ್ಸಾಹ ಭರಿಸಬಹುದು ಸೆಕೆಯ ಚಡಪಡಿಕೆಯನ್ನು ದೂರಗೊಳಿಸಿ ತಂಪಿನ ಅನುಭವವುಂಟು ಮಾಡಬಹುದು. ಒಂದು ಅನಿಲವನ್ನು ಮೂಸಿ ನಗುವಂತೆ ಮಾಡಬಹುದು. ಈರುಳ್ಳಿ ರಸ ಮೂಸಿ ಕಣ್ಣಲ್ಲಿ ನೀರು ಬರುವಂತೆ ಮಾಡಬಹುದು, ಕ್ಲೋರೋಫಾರಮ್‌ ಮೂಸಿ ಶಸ್ತ್ರ ಚಿಕಿತ್ಸೆಯ ನೋವೆ ಆಗದಂತೆ ಮಾಡಿಕೊಳ್ಳಲೂಬಹುದು. ಅಶ್ರುವಾಯುವಿನ ಮೂಲಕ ಮನುಶ್ಯರನ್ನು ಅಳಿಸಲೂಬಹುದು. ಕೊಳೆತ ವಸ್ತುವಿನ ದುರ್ನಾತದಿಂದ (ವಾಸನೆಯಿಂದ) ಗಬ್ಬೆಂದು ದೂರ ಹೋಗಬಹುದು. ಈ ರೀತಿ ಅನೇಕ ವಾಸನೆಗಳನ್ನು ಗ್ರಹಿಸುವ ಮೂಗಿನ ಮಹತ್ವ ಮನುಷ್ಯನ ಬದುಕಲಿ ಅತ್ಯವಶ್ಯಕವಾಗಿದೆ. ಮೂಗೇ ಇಲ್ಲದಿದ್ದರೆ ಸುವಾಸನೆ, ಅಥವಾ ದುರ್ವಾಸನೆಗಳನ್ನರಿದೇ ಮೂಗನಾಗಿ, ಕೊರಡಾಗಬಹುದುಲ್ಲವೆ? ಒಂದು ವೇಳೆ ಮೂಗಿನಿಂದ ಈ ಯಾವ ವಾಸನೆಗಳನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೂಂಡ ಮನುಷ್ಯರಿಗೆಂದೇ ವಾಸನೆಗಳನ್ನು ಗ್ರಹಿಸುವ ಕೃತಕ ಮೂಗನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.

ಈ ಮೂಗಿಗೆ “ಸೈರೊನೋಸ್ ೨೦೦೦” ಎಂದು ಹೆಸರಿಟ್ಟಿದೆ. ಇದಕ್ಕೆ ‘ಈನೋಸ್’ ಎಂದೂ ಕೂಡ ಕರೆಯಲಾಗುತ್ತದೆ. ಒಬ್ಬ ಆರೋಗ್ಯವಂತನ ಮೂಗು ೬೫೦ ವಿಧದ ವಾಸನೆಗಳನ್ನು ಗುರುತಿಸಬಲ್ಲದೆಂದು ಮೂಗಿನ ತಜ್ಞರು ಹೇಳುತ್ತಾರೆ. ಈ ಕೃತಕ ಮೂಗಿನ ಸಾಮರ್ಥ್ಯ ಅಷ್ಟಿಲ್ಲದಿದ್ದರೂ ಮುಂದೆ ಇದನ್ನು ಅಭಿವೃದ್ಧಿಪಡಿಸಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಇದರ ಬೆಲೆ ೮ ಸಾವಿರ ಡಾಲರ್ ಇದೆ. ಈ ಕೃತಕ ಮೂಗು ಇದ್ದವರಿಗೆ ಉಪಕಾರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಇದು ರೋಗಗಳನ್ನು ಮೂಸಬಲ್ಲದು. ಇದನ್ನು ಇಂಗ್ಗೆಂಡ್ ಓಸ್ಮೆಟಿಕ್ ಕಂಪನಿ ತಯಾರಿಸಿದೆ. ಇದು ವಿಷಾಣುಗಳನ್ನು ಗುರುತಿಸಿ ಯಾವುದರಿಂದ ಕಾಯಿಲೆ ಬರುತ್ತದೆಂದು ಕಂಡು ಹಿಡಿದು ಯಾವ ಔಷಧಿಗಳಿಂದ ಗುಣಪಡಿಸಬಹುದೆಂದು ತಿಳಿಸುತ್ತದೆ. (ಸೂಚಿಸುತ್ತದೆ)

ಮುಂದೊಂದು ದಿನ ಇದರ ಬೆಲೆಯಲ್ಲಿ ಇಳಿಕೆಯಾದರೆ ಸಾಮಾನ್ಯ ಜನರೂ ಇದನ್ನು ಉಪಯೋಗಿಸಬಹುದು. ಆಗ ಯಾವ ದಾರಿಯಲ್ಲಿ ಸಾಗಬಹುದು, ಎಲ್ಲಿ ದುರ್ವಾಸನೆ ಇದೆ ಯಾವ ಹೋಟೆಲಿನ ಆಹಾರ ದೇಹಕ್ಕೆ ಒಗ್ಗಲಾರದು. ಯಾವ ತೋಟದ ಹೂವು ಮನಸ್ಸಿಗೆ ಅಲ್ಹಾದಕರ ಎಂಬ ಎಲ್ಲ ಮಾಹಿತಿಗಳು ಈ ಮೂಗು ಹೊಂದುವವರಿಗೆ ತಿಳಿಯಬಹುದು. ಸಹಜ ಮೂಗಿನಂತೆ ಬಳಸಿ ಇದೆಲ್ಲವನ್ನು ತಿಳಿಯಬಹುದು. ಇದು ಇನ್ನು ಬಹಳ ಆವಿಪ್ಕಾರ ಹೊಂದಬೇಕಿದೆ ಅಲ್ಲಿಯವರೆಗೆ ಆಕಾಂಕ್ಷಿಗಳು ಕಾಯಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಪ್ತ ಜನ್ಯ
Next post ವರುಣನ ಕೇಳು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys