ಕಲಾಂ ಹೀಗಿದ್ದರು

ಕಲಾಂ ಹೀಗಿದ್ದರು

ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಜೀವಂತವಿದ್ದಾಗಲೇ ದಂತ ಕತೆಯಾದವರು.

ಇವರು ೨೦೦೨ರಲ್ಲಿ ಭವ್ಯ ಭಾರತದ ೧೧ನೆಯ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕರಿಸಿದ ಹೊಸತರಲ್ಲಿ ದಿನಾಂಕ ೧೪-೦೮-೨೦೦೨ರಲ್ಲಿ ಬೆಳ್ಳಂಬೆಳಗ್ಗೆ ಬಹುದೊಡ್ಡ ಅಧಿಕಾರಿ ಬಹುಶಃ ಸ್ವಜಾತಿಯೆಂಬ ಸಲುಗೆಯಿಂದಲೋ ಏನೋ ಇವರನ್ನು ಕಾಣಲು ಬಂದಿದ್ದರು.

“ಸಾರ್ ನಿಮ್ಮ ಕಚೇರಿಗೆ ಮೇಲಿಂದ ಮೇಲೆ ಬರುತ್ತಿರುವ ಆ ಅಧಿಕಾರಿ ಬಗೆಗೆ ನಿಮಗೆ ತಿಳಿಯದೆಂದು ಅನಿಸುವುದು! ಆತ…?’ ಎಂದು ಇನ್ನು ಏನೇನೋ ಹೇಳಲು ಉತ್ಸಾಹಕನಾಗಿದ್ದನು.

‘ಕಲಾಂಜೀಯವರು ಮಧ್ಯದಲ್ಲೇ ಆ ವ್ಯಕ್ತಿ ನಿನಗೆ ಪರಿಚಿತರೇ?’ ಎಂದು ಬಂದಿದ್ದ ಅಧಿಕಾರಿಯನ್ನು ಕೇಳಿದರು.

‘ಇಲ್ಲ! ನನಗೆ ಪರಿಚಿತರಲ್ಲ. ನಾನು ಬೇರೊಬ್ಬ ಅಧಿಕಾರಿಯಿಂದ ವಿಷಯ ಸಂಗ್ರಹಿಸಿದ್ದೇನೆ. ಅದನ್ನು ನಿಮಗೆ ಹೇಳಿದರೆ ಸುರಕ್ಷಿತವೆಂದು ಭಾವಿಸಿ ಬಂದಿದ್ದೇನೆ’ ಎಂದ.

‘ನಿಮಗೆ ಅವರು ಗೊತ್ತಿಲ್ಲ. ಇನ್ನೊಬ್ಬರ ಮಾತು ಕಟ್ಟಿಕೊಂಡು ನನ್ನಲ್ಲಿಗೆ ಬಂದಿರುವೆ. ಅದು ಸತ್ಯವೆಂದು ನಿನಗೆ ಖಾತರಿ ಇದೆಯೇ?’ ಎಂದು ಕಲಾಂಜೀಯವರು ಮತ್ತೇ ಬಂದಿದ್ದವರನ್ನು ಪ್ರಶ್ನಿಸಿದರು.

‘ನನಗೆ ಹೇಳಿದವರೂ ನಮ್ಮ ಜಾತಿಯವರು. ಬಹಳ ದೊಡ್ಡ ಅಧಿಕಾರಿಯವರು, ಅವರು ಸುಳ್ಳು ಹೇಳಲಾರನೆಂದು ನಂಬಿಕೆ ನನ್ನದು ಅದನ್ನು ನಿಮಗೆ ಹೇಳಿದರೆ ನಿಮ್ಮ ಪದವಿಗೆ ಒಳ್ಳೆಯದೆಂದು ಬಂದಿರುವೆ’ ಎಂದ.

‘ಅವರಿಗೂ ಇವರಿಗೂ ವೃತ್ತಿ ಮತ್ಸರವಿರಬೇಕು. ಜಾತಿ, ಮತ, ಕುಲ, ಧರ್‍ಮ, ವೈಷಮ್ಯವಿರಬೇಕು. ಇದರಿಂದ ನನಗೇನು ಧಕ್ಕೆಯಾಗದು. ನನಗೇ ನನ್ನದೇ ಆದ ಬಹಳಷ್ಟು ಕೆಲಸಗಳಿವೆ. ಇನ್ನೊಬ್ಬರ ಗೊಡವೆ, ವೈಯಕ್ತಿಕ ವಿವರಗಳು, ನನಗೆ ಬೇಕಿಲ್ಲ! ಇದರಿಂದ ದೇಶಕ್ಕೆ, ವಿಶ್ವಕ್ಕೆ ಏನಾದರೂ ಪ್ರಯೋಜನವಿದೆಯೇ? ಹೇಳಿ ನಾನು ಕಾಲವನ್ನು ಮೀಸಲಿಡುತ್ತೇನೆ…’ ಎಂದು ಕಲಾಂಜೀಯವರು ಬಂದಿದ್ದ ಅಧಿಕಾರಿಗೆ ನೇರವಾಗಿ ಅಂದರು.

ಬಂದಿದ್ದ ಅಧಿಕಾರಿಯ ಟೈ-ಕೋಟು-ಕ್ರಾಪು ಎತ್ತತ್ತಲೋ ಹಾರಿತು! ಅದನ್ನು ಸರಿ ಮಾಡಿಕೊಳ್ಳುತ್ತಾ ಅಲ್ಲಿಂದ ಒಂದೇ ಉಸಿರಿಗೆ ಓಟ ಕಿತ್ತವರು ಇನ್ನೆಂದೂ ಅವರ ಎದುರಿಗೆ ಓಡಾಡಲಿಲ್ಲ.

ಪ್ರತಿ ಮನೆ, ಸಂಘ, ಸಂಸ್ಥೆ, ನಿಗಮ, ಇಲಾಖೆ, ಗುಂಪು… ಕಚೇರಿಯಲ್ಲಿ ಇಂಥವರು ಇರುವವರಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಯ್ದಯ್ದರನಿತಯ್ದುತಯ್ದಿತಾ ಕಾಲಂ
Next post ಉಡಿತುಂಬುವ ಹಾಡು

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…