ಆರೋಗ್ಯಕ್ಕೆ ಕಾಫಿ ಟೀ ಒಳ್ಳೆಯದಲ್ಲ ಎಂದು ಸಂಶೋಧನೆಗಳು ಸಾರಿ ಸಾರಿ ಹೇಳುತ್ತಿವೆ. ಆದರೂ ಬೆಳಿಗ್ಗೆ ಒಂದು ಕುಡಿದರೆ ಏನಾಗದೆಂದು ಕೆಲವು ಜನರು ಕಾಫಿ-ಟೀಯೊಂದಿಗೆ ರಾಜಿಯಾಗಿರುವರು.

ಇನ್ನು ಕೆಲವರು ಟೀ… ಅದರಲ್ಲೂ ಗ್ರೀನ್ ಟೀ ಎರಡೂ ಹೊತ್ತು ಕುಡಿಯುವುದು ಒಳ್ಳೆಯದೆಂದು ಹೇಳುವರು. ಮೊನ್ನೆ ದಿನ ಶಾಲೆಗೆ ಡಾ|| ವಿ. ನಾಗರಾಜು ಅವರು ಬಂದಿದ್ದರು. ಅವರು ಬರುವಾಗ ದಿನ ಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಪತ್ರಿಕೆಗಳನ್ನು ತಂದು ಮಕ್ಕಳಿಗೆಲ್ಲ ವಿತರಿಸಿ ಇವುಗಳನ್ನು ಓದಲು ಗ್ರೀನ್ ಟೀ ಕುಡಿಯಲು ಸಲಹೆ ಮಾಡುತ್ತಾ ನಿಂತರು.

ಪುಟಾಣಿಗಳೆ… ಗ್ರೀನ್ ಟೀ ಎಂದರೆ… ದಿವ್ಯೌಷಧಿಯಂತೆ ಕೆಲಸ ಮಾಡುವುದು. ಅದರಿಂದ ಉಪಯೋಗಗಳು ಈ ರೀತಿಯಲ್ಲಿವೆ…

೧. ಇದು ನಿದ್ದೆಯನ್ನು ಸೋಮಾರಿತನವನ್ನು ದೂರ ಮಾಡುವುದು.

೨. ಮೆದುಳನ್ನು ಚುರುಕುಗೊಳಿಸುವುದು.

೩. ನೆನಪಿನ ಶಕ್ತಿ ವೃದ್ಧಿಸುವುದು.

೪. ಬೊಜ್ಜು ಕರಗಿಸುವುದು. ತೂಕ ಇಳಿಸುವುದು, ನಿರಂತರ ಚುರುಕಾಗಿರುವಂತೆ ಮಾಡುವುದು.

೫. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಕ್ಯಾನ್ಸರ್ ಬರದಂತೆ ತಡೆಯುವ ಶಕ್ತಿ ಇದೆ.

೬. ಸಕ್ಕರೆ ಕಾಯಿಲೆ ಬರದಂತೆ, ಹೃದಯಾಘಾತವಾಗುವುದನ್ನು ತಡೆಯುವುದು.

೭. ಬಾಯಿ ವಾಸನೆ ತಡೆಯುವುದು, ಹಲ್ಲು ಹುಳುಕು ಹಿಡಿಯದಂತೆ ತಡೆಯುವುದು.

೮. ಎಲುಬುಗಳನ್ನು ಗಟ್ಟಿಗೊಳಿಸುವುದು. ಮರೆಗುಳಿತನವನ್ನು ದೂರ ಮಾಡುವುದು.

೯. ಹುರುಪು ಉತ್ಸಾಹ ತುಂಬುವುದು.

೧೦. ದೇಹವನ್ನು ಬೆಚ್ಚಗಿಡುವುದು.
*****