Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ನವೆಂಬರ ೨೦, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಶುಕ್ರವಾರ, ನವೆಂಬರ ೨೦, ೧೯೪೨

ಪ್ರೀತಿಯ ಕಿಟಿ,

ಇವನ್ನೆಲ್ಲಾ ಹೇಗೆ ತೆಗೆದುಕೊಳ್ಳುವುದು ಎಂಬುದೇ ಯಾರಿಗೂ ಅರ್ಥವಾಗುತ್ತಿಲ್ಲ. ಈ ಕ್ಷಣದವರೆಗೂ ಯಹೂದಿಗಳ ಬಗೆಗಿನ ಸುದ್ದಿ ವಿವರ ನಮ್ಮವರೆಗೂ ಬಂದಿರಲಿಲ್ಲ. ಅಲ್ಲಿಯವರೆಗೆ ಸಾಧ್ಯವಾದಷ್ಟು ಖುಷಿಯಿಂದ ಇರುವುದೇ ಒಳಿತೆಂದು ತಿಳಿದಿದ್ದೆವು. ಆಗಾಗ ಮೇಪ್ ತನ್ನ ಗೆಳೆಯರಿಗಾದ ಸಂಗತಿಗಳನ್ನು ಬಂದು ಹೇಳಿದಾಗಲೆಲ್ಲಾ, ಮಮ್ಮಿ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಪ್ರತಿಸಲವೂ ಅಳುತ್ತಾರೆ. ಅದಕ್ಕಾಗಿ ಮೇಪ್ ಈಗೀಗ ಏನೂ ಹೇಳುವುದಿಲ್ಲ. ಆದರೆ ಈಗ ಡಸೆಲ್ ಬಂದ ಕೂಡಲೇ ಎಲ್ಲರಿಂದ ಮುಗಿಬೀಳುವ ಪ್ರಶ್ನೆಗಳು ಮತ್ತು ಅವರು ಹೇಳುವ ಕಥೆಗಳು ಅದೆಷ್ಟು ಭೀಬತ್ಸವಾಗಿರುತ್ತವೆ ಎಂದರೆ ಒಮ್ಮೆ ಕೇಳಿದ ಮೇಲೆ ಮುಗಿಯಿತು, ಅದನ್ನು ತಲೆಯಿಂದ ನಿವಾರಿಸುವುದು ಬಹುಕಷ್ಟ.

ಹೀಗಿದ್ದೂ, ಈ ಭೀಕರ ಸಂಗತಿಗಳೆಲ್ಲಾ ಸ್ವಲ್ಪ ಮನಸ್ಸಿನಲ್ಲಿ ಮಸುಕಾದಂತೆ, ನಾವು ಒಬ್ಬರನ್ನೊಬ್ಬರು ತಮಾಷೆ ಮಾಡುತ್ತ, ಜೋಕುಗಳ ಮಾಡುತ್ತ ಇರುವೆವು. ಇದರಿಂದ ನಮಗೆ ಒಳ್ಳೆಯದೇನೂ ಇಲ್ಲ ಹಾಗೇ ಹೊರಗಿದ್ದವರಿಗೆ ಇದರಿಂದ ಸಹಾಯವೇನೂ ಆಗಲ್ಲ. ಈಗ ಇರುವಂತೆ ಕತ್ತಲೆಯ ಬದುಕಿನಲ್ಲೆ ಇರಬೇಕಾಗಿರುವುದು. ನಮ್ಮ ಗುಪ್ತ ಗೃಹಯನ್ನು ಇನ್ನು ’ಗುಪ್ತ ಕತ್ತಲೆ ವಾಸ’ ಎಂದು ಮಾಡುವುದಾದರೆ ಏನೆಲ್ಲಾ ಬೇಕಾಗಬಹುದು? ನಾನೇನಾದರೂ ಮಾಡುತ್ತಿರಲಿ, ಆದರೆ ಉಳಿದವರ ಬಗ್ಗೆ ಕೂಡಾ ನಾನು ಯೋಚಿಸಬೇಕಲ್ಲವೇ? ಯಾವುದೋ ಕಾರಣಕ್ಕೆ ನನಗೆ ನಗಬೇಕಾಗಿದೆ, ಅದನ್ನು ಆ ಕ್ಷಣ ಅದುಮಿಕೊಳ್ಳಬೇಕೆ? ನಾನು ಖುಷಿಯಾಗಿದ್ದದ್ದಕ್ಕೆ ನಾನೇ ನಾಚಿಕೆಪಟ್ಟುಕೊಳ್ಳಬೇಕೆ? ಆ ಇಡೀ ದಿನ ನಾನು ಅಳುತ್ತಾ ಇರಬೇಕಾಗುವುದಲ್ಲವೇ? ಇಲ್ಲ, ಅದು ನನಗೆ ಸಾಧ್ಯವಿಲ್ಲ. ಇದೆಷ್ಟು ದಿನ. ಈ ಕತ್ತಲು ಸ್ವಲ್ಪ ದಿನಕ್ಕೆ ಕಣ್ಮರೆಯಾಗಬಹುದು.

ಈ ಕಷ್ಟದ ಜೊತೆಗೆ ಇನ್ನೊಂದು ಸಂಗತಿ ಸೇರಿಸುತ್ತಿದ್ದೇನೆ, ಅದರಿದು ಕೇವಲ ನನ್ನ ಖಾಸಗಿ ವಿಚಾರ. ಯೋಚಿಸಿದರೆ ಇದು ಈ ಮೊದಲೇ ಹೇಳಿದ ಎಲ್ಲ ಸಂಕಟದ ಸಂಗತಿಗಳ ಮುಂದೆ ಅಂತಹ ಮಹತ್ವದ್ದಲ್ಲ. ಆದರೂ ನಾನಿದನ್ನು ಹೇಳದೇ ಹಾಗೆ ಅದುಮಿಟ್ಟುಕೊಳ್ಳಲಾರೆ. ಇತ್ತಿಚೆಗೆ ನಾನು ಏಕಾಂಗಿತನವನ್ನು ಅನುಭವಿಸುತ್ತಿದ್ದೇನೆ. ನನ್ನ ಎಲ್ಲರೂ ದೂರಮಾಡುತ್ತಿದ್ದಾರೆ ಎನ್ನಿಸುತ್ತಿದೆ. ಹಿಂದೆಂದೂ ನನಗೆ ಹೀಗಾಗಿರಲಿಲ್ಲ. ನನ್ನ ತಮಾಷೆಗಳು, ಹುಡುಗಾಟ, ನನ್ನ ಸ್ನೇಹಿತೆಯರು ಇವೇ ನನ್ನ ಮನಸ್ಸನ್ನು ತುಂಬಿದ್ದವು. ಆದರೆ ಈಗೀಗ ಬೇಜಾರಿನ ಸಂಗತಿಗಳ ಬಗ್ಗೆ ಇಲ್ಲವಾದರೆ ನನ್ನ ಬಗ್ಗೆ ಮಾತ್ರ ಯೋಚಿಸಬಲ್ಲೆ. ತುಂಬಾ ದಿನಗಳ ಹಿಂದೆ ಡ್ಯಾಡಿಯ ಬಗ್ಗೆ ಯೋಚಿಸಿದ್ದೆ. ಅವರು ನನ್ನ ಅತಿ ಪ್ರೀತಿಪಾತ್ರರು. ಆದರೂ ನನ್ನ ಪುಟ್ಟ ಜಗತ್ತಿನಲ್ಲಿ ಕಳೆದುಹೋದ ಎಲ್ಲ ದಿನಗಳಲ್ಲಿ ಅವರು ಸ್ಥಾನ ಪಡೆಯಲಾರರು. ನಾನೇಕೆ ನಿನಗೆ ಇಂತಹ ಮೂರ್ಖ ಸಂಗತಿಗಳ ಬಗ್ಗೆ ಹೇಳಿ ಬೇಸರಗೊಳಿಸುತ್ತಿರುವೆ? ನಾನು ಕೃತಘ್ನಳು, ಕಿಟಿ: ನನಗೆ ಗೊತ್ತು. ಆದರೆ ನಾನೇನಾದರೂ ಅದರಲ್ಲಿಯೇ ಮುಳುಗಿದರೆ ನನ್ನ ತಲೆ ಅಲ್ಲೇ ಸುತ್ತುವಂತೆ ಆ ಬಗ್ಗೆಯೇ ಚಿಂತಿಸುವಂತೆ ಮಾಡುತ್ತಿರುತ್ತದೆ. ನಾನು ಉಳಿದ ಇನ್ನಿತರ ಸಂಕಟಗಳ ಬಗ್ಗೆ ಚಿಂತಿಸುವುದು ಆಮೇಲೆ.

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...