ಕೇಳದೆ ನಿಮಗೀಗ ಮತ್ತು ತೆರೆದಷ್ಟೇ ಬಾಗಿಲು ಇವರ ಕಥಾ ಸಂಕಲನಗಳು. ಜನ ಸಾಮಾನ್ಯರ ಆಡುಮತುಗಳಲ್ಲೇ ತಮ್ಮ ಅನುಭವಗಳನ್ನು ಓದುಗರಿಗೆ ಸಲೀಸಾಗಿ ದಾಟಿಸಿಬಿಡುವ ಕಥನ ಕಲೆ ಅವರಿಗೆ ಸಿದ್ಧಿಸಿವೆ.
ಇಲ್ಲಿ ಎಲ್ಲರೂ ಕ್ಷೇಮ ಎಂದು ಪತ್ರ ಪ್ರಾರಂಭಿಸಿದೆ. ನಾನು ಕ್ಷೇಮ ಎಂದು ಮೊದಲಾಗಬೇಕಿತ್ತು. ಆ ಮೇಲೆ ನಿಮ್ಮ ಕ್ಷೇಮಕ್ಕೆ ಎಂದು ಮುಂದುವರಿಸಿದ್ದರೆ ನನ್ನತನವನ್ನು ಢಾಳಾಗಿ ಕಾಣಿಸಬಹುದಿತ್ತೇನೋ! ನನ್ನತನ ಏನು ಬಂತು. ಮನುಷ್ಯತನವನ್ನೇ ಶಬ್ದಗಳಲ್ಲಿ ಬಿಂಬಿಸಿದಂತಲ್ಲವೇ?...
ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ...
ಮೇಟಗಳ್ಳಿ ಬಸ್ ನಿಲುಗಡೆಯಲ್ಲಿ ನಿಂತ ನಗರ ಸಾರಿಗೆ ವಾಹನವನ್ನು ಏರಿದೆ. ಜನದಟ್ಟಣೆ ಇರದೆ ಪೀಠಗಳು ಬಿಕೋ ಎನ್ನುತ್ತಿದ್ದವು. ಊರಿಗೆ ಪ್ರಯಾಣಿಸಲು ಜಾಗ ಕಾಯ್ದಿರಿಸಲೋಸುಗ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಚೀಟಿ ಪಡೆದು ಮೂರು ಪೀಠಗಳ ಆಸನದಲ್ಲಿ...
ಈ ಊರಿಗೆ ನೀವು ಅಪ್ಪಿತಪ್ಪಿ ಬಂದೀರಿ. ಯಾವುದೋ ಗುಂಗನಾಗ ಬರಬರಾನ ದಾರಿಗಡ್ಡ ಚಾಚಿದ ಜಾಲಿ ಕಂಟಿ ನಿಮ್ಮ ಅಂಗಿ ಪರಚಿ ಬರಮಾಡಿಕೊಂಡಿತು. ಗಕ್ಕನ ನಿಂತು ಜಗ್ಗಿದ್ದನ್ನ ಬಿಡಿಸೋ ಪಜೀತಿ ನೋಡಿದ ಮಂದಿ ಹುಳ್ಳುಳ್ಳಗ ನಗಾಕ...
‘ಅಗದೀ ಹರಕತ್ತ ಐತಿ, ನಿಮ್ಮಣ್ಣಗ ಕೇಳಿ ಒಂದೈದು ಸಾವಿರ ಇಸ್ಕೊಂಬಾ’ - ಎಂದು ನನ್ನ ಗಂಡ ತವರಿಗೆ ಕಳಿಸಾಕ ಮೊದಲ ವರಾತ ಹಚ್ಚಿದ್ದರು. ಮತ್ತ ಮತ್ತ ಒತ್ತಾಯಿಸೋ ಗಂಡನ ಹಿಂಥಾ ಮಾತು ಬಿಸೇ ತುಪ್ಪ...
ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ...