Home / ಕವನ / ಕವಿತೆ / ಕೋರ್‍ಸಿಕಾ

ಕೋರ್‍ಸಿಕಾ

ನಿನಗಿಂತ ಕಂಪುಳ್ಳ ದ್ವೀಪಗಳಿರಬಹುದು ಕೋರ್‍ಸಿಕಾ! ಸುಗಂಧ ದೇಹಿ!
ಜಾವಾ, ಸುಮಾತ್ರಾ, ಸಿಂಹಲ,-ಮತ್ತಿನ್ನನೇಕ.
ನಿನ್ನಡವಿಗಿಂತ ನಿಬಿಡವಿಹ ವನಗಳುಂಟು ಲೋಕದಲ್ಲಿ.
ಆದರೆ ಬೀಸಲಿಲ್ಲ ಮತ್ತೆಲ್ಲಿಯೂ ಮೂಲೋಕಕೆ ನಿನ್ನ
ಕೀರ್ತಿಯನೊಯ್ವಂಥ ಗಂಧವಹನು.
ಅರಳಲಿಲ್ಲವಿನ್ನೆಲ್ಲಿಯೂ ನಿನ್ನ ನರುಗಂಪನಜರಾಮರವಾಗಿ ಕಾಯ್ವ
ವನಸುಮವು.
ನೀರಮೇಲೆ ತೇಲಿಬಿಟ್ಟ ಸೂರ್ಯಪುತ್ರನಂತೆ-ಕರ್ಣನಂತೆ-
ಕರ್ಣಪೂರವಾದನು ನಿನಗೆ ನೆವೋಲಿಯನ್ನನು-ಬೆಳಗಿದನು ಪ್ರಖರವಾಗಿ,
ಚಂದ್ರನಂತೆ ಸಮುದ್ರಕುವರನಾಗಿ ಮೂಡಿಸಿದನೀರೇಳು ಲೋಕದಿ
ನಿನ್ನ ಧವಳಗಿರಿಗಳಂತತಿ ಧವಳವಾದ ವಿಮಲ ಕೀರ್ತಿಯನ್ನು!
ಅತ್ಯಾಸೆಯಲ್ಲವದು,-ಅವತಾರಿಯಾಗಲಿವ ಪಟ್ಟ ಸಾಹಸವು.
ವಿಶ್ನವೇ ತನಗೆ ಕೊಡೆಯಾಗಬೇಕೆಂದ,
ದೇವತ್ವವನು ತನ್ನಲಿಳಿಸಬೇಕೆಂದ.
ಪೌರುಷದ ಶಿಖರವನೇರಿ-ದೈವತವದೇ ಅದೇ ಎಂದು ಕುಣಿಯಬೇಕೆಂದ.
ಅಲ್ಲದೆ ಬರಿ ಪದವಿಗಾಗಿ-ಸಂಪದಕಾಗಿ-ಶಕ್ತಿಗಾಗಿ ಹಾತೊರೆದವನಲ್ಲ.
ಅರ್ಧ ಸಾಧಿಸಿತು; ಅರ್ಧ ಸಾಧಿಸಲಿಲ್ಲ; ಅದು ಅವನ ತಪ್ಪಲ್ಲ.
ಬೇರೆಯಿತ್ತು ದೈವದಾಟ:
ಕಾಲಕ್ಕೆ ಸರಿಯಾಗಿ ಸಿಕ್ಕ ಸಾಮಗ್ರಿಗಳನಣಿಗೊಳಿಸಿ
ತನ್ನ ಕನಸನೊಂದ ಕಟ್ಟಬೇಕೆಂದು ಇದಕಿಂತ ಹಿರಿಮಾತಾವುದು?
ಒ೦ದು ದ್ವೀಪದಲ್ಲಿ ಹುಟ್ಟಿ ಇನೊಂದು ದ್ವೀಪದಲ್ಲಿ ಮಡಿದ.
ಇವನ ಜೀವನದ ತುದಿಮೊದಲು ಸಂಜೆಮುಂಜಾವಂತೆ: ಒಂದೇ ಬಣ್ಣದವು.
ಹರೆಯದ ಹಗಲಿನಲ್ಲಿ ಮಾತ್ರ ನವಖ೦ಡಗಳನ್ನು ಬೆಳೆಗಿದನು-ಸೂರ್ಯನಂತೆ.
ಸಮುದ್ರದಲ್ಲಿಯೇ ಹುಟ್ಟಿ ಸಮುದ್ರದಲ್ಲಯೇ ಗುಪ್ತನಾದನಿವನು
ಪಶ್ಚಿಮದ ಸಮುದ್ರಗುಪ್ತನು ನೋಡಾ!
*****
Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...