ಚುಕು ಬುಕು ರೈಲು ಸಾಗುತಲಿತ್ತು
ಮುಂದಕೆ ಮುಂದಕೆ ಓಡುತಲಿತ್ತು
ಗಾವುದ ಗಾವುದ ಎದುರಿಗೆ ಇತ್ತು
ಗಾವುದ ಗಾವುದ ಹಿಂದಕು ಬಿತ್ತು

ಚುಕು ಬುಕು ರೈಲು ಸಾಗುತಲಿತ್ತು
ಮುಂದಕೆ ಮುಂದಕೆ ಓಡುತಲಿತ್ತು
ಆಚೆಗೆ ಬೆಟ್ಟ ಈಚೆಗೆ ಬಯಲು
ಎಲ್ಲೋ ಹೊಲದಲಿ ನಡೆದಿದೆ ಕೊಯ್ಲು

ಚುಕು ಬುಕು ರೈಲು ಸಾಗುತಲಿತ್ತು
ಮುಂದಕೆ ಮುಂದಕೆ ಓಡುತಲಿತ್ತು
ಇನ್ನೂ ಬರಲಿದೆ ಸಾವಿರ ಮೈಲು
ಓಡುವುದೊಂದೇ ಅದಕಿರೊ ಐಲು

ಚುಕು ಬುಕು ರೈಲು ಸಾಗುತಲಿತ್ತು
ಮುಂದಕೆ ಮುಂದಕೆ ಓಡುತಲಿತ್ತು
ಎಷ್ಟು ಸುರಂಗಗಳ ಹೊಕ್ಕು ಹೊರಟಿತು
ಎಷ್ಟು ರಂಗಗಳ ಮೆಟ್ಟಿ ಕುಣಿಯಿತು!

ಚುಕು ಬುಕು ರೈಲು ಸಾಗುತಲಿತ್ತು
ಮುಂದಕೆ ಮುಂದಕೆ ಓಡುತಲಿತ್ತು
ಕೇಳಿರಿ ಕೇಳಿರಿ ಕೂ ಕೂ ಕೂ ಕೂ
ಕತ್ತಲು ಮುಗಿದು ಬರುವುದು ಬೆಳಕು!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)