ಹರಿ ವಿರಂಚಿಯೂ ಕೂಡಿ
ಗುರು ಬೃಹಸ್ಪತಿ|
ಕೂಡಿ ಗುರು ಬೃಹಸ್ಪತಿ
ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ||

ಹರನ ತಪವನುಽ
ಕೆಡಿಸಿ ಸ್ಮರಗೆ ಬೋಧಿಸು|
ಕೆಡಿಸಿ ಸ್ಮರಗೆ ಬೋಧಿಸು
ಸುರರ ಬಾದೆಯ
ಬ್ಯಾಗ ಪರಿಹರಿಸುವುದು||೧||

ಅಕ್ಷ ಮೂರ್ತಿಯಽ
ತಪವು ಭ್ರಷ್ಟವಾದರೆ
ತಪವು ಭ್ರಷ್ಟವಾದರೆ
ಹುಟ್ಟಿ ಷಣ್ಮುಖಾಽ
ಖಳನ ನಷ್ಟ ಮಾಡುವ||೨||

ಗುರು ಬೃಹಸ್ಪತಿ ಸ್ಮರಗೆ
ಪರಿ ಪರಿಗಳಿಂದಲಿ
ಸ್ಮರಗೆ ಪರಿಪರಿಗಳಿಂದಲಿ
ಕರದಿ ಕರವನು ಹಾಕಿ
ಭರದಿ ಪೇಳಲು||೩||

ಮೋಸದಿಂದಲಿ ಸ್ಮರನು
ಭಾಷೆಗೊಂಡನು
ಈಶ ಮಾಡುವಾ ತಪವ
ನಾಶಗೈವುದು||೪||

ಅಂದ ಮಾತನು ಕೇಳಿ
ನೊಂದ ಮದನನು
ಕೇಳಿ ನೊಂದ ಮದನನು
ಕುಂದಿ ಕೊರಗುತಽ
ಮನದಿ ಮುಂದು ಗೆಟ್ಟನು||೫||
*****