ಗಿರಿಜಾಪತಿ ಎಂ ಎನ್

#ಕವಿತೆ

ಅಂತರಾಳ

0

ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | ಉರಿಯು ತಂಪು ತಾರಾ ಮಿಣುಪು ಸಗ್ಗ ಋತುವಿನ ಸೋನೆಯು, ಶೃಂಗ ಶೃಂಗದ ಶೃಂಗ ನಂದನ ಭೃಂಗದೆದೆಯ ಮಿಡಿತವು, ದಟ್ಟ ಝರಿ ವನ ಬನ ರಾಜಿ ನಾನು ಧಮನಿ […]

#ಕವಿತೆ

ಕಾಲ

0

ಬೆಳಕಿನನುರಣದ…. ನಿತ್ಯ ಸರದಿಯೊಳಗೆ…. ದಿನಗಳರಳುತಿವೆ ಜೀವಂತ…. ಧಾವಂತ…. ನಿಯತಿಗಾಗಿ ನಿದ್ದೆ ಕಳೆದೆದ್ದವರ ಬದುಕಿಗಾಗಿ ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ ಸ್ಪುರಣೆಗಳೆಲ್ಲದರ ಪರಿವೆಯಿರದೆ ಜಗದ ಜಂಗಮತೆಯ ಚಂಚಲ ಧೃವ ಜ್ಯೋತಿಯಲ್ಲಿ…. ಕತ್ತಲೂ ಕವಿಯುತ್ತಲೇ ಇರುತ್ತದೆ…. ಹಗಲ ಪುನರನುರಣಕಾಗಿ…. ನಿಶಾಚಾರ…. ಉಷಾಚರಿಗಳ ಪಾಡು-ಹಾಡಿನ ಪರಿವೆ ಪರಿಧಿಯಾಚೆ ಎದ್ದರೂ ಮಲಗಿದಂತಿರುವ ಮಲಗಿದಲ್ಲಿಯೇ ಬೆಳಕನ್ನು ಜರಿಯುವವರನ್ನು ಕಾಲವೇ ಹಣಿಯುತ್ತದೆ ಅಗ್ಗಿಷ್ಟಿಕೆಯ ಕುಂಡದಲ್ಲಿ […]

#ಕವಿತೆ

ಅಕ್ಕನ ಭಾವಗೀತೆ

0

ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ…. ರೂಪ…. ತೇಜರಾಸಿ…. ಚಿತ್ರ-ಚಿತ್ತಾರವರಿತಂತೆ, ಗೇಹ ಬೆಳೆ-ಬೆಳೆದಂತೆ, ಮಾಗಿ ಮಾಗಿತು ಒಳಗೆ ಪ್ರೇಮ ಪಲ್ಲವಿಯ ಫಲವು, ಕ್ಷಣ-ಚಣವು ಉನ್ಮಾದ, ಆನಂದದಾನಂದ ಲೀಲೆಯಲಿ, ಮನತುಡುಕುವೆಡೆಯಲ್ಲಿ ಮಲ್ಲಿಕಾರ್ಜುನ ನಿರವು. ಬಯಲಿಗರ ಬನದೊಳಗೆ, ಬಯಲಾದ […]

#ಕವಿತೆ

ಅಂತರ್ದರ್ಶನ

0

ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ ನಿನ್ನಯ ಗಾರುಡಿ ಕಡಲ ತೆರೆಯ ನೊರೆಯ ತೊರೆಗೊ ಕಣ್ಣೀರ ಛಾಯೆಯ ಮುನ್ನುಡಿ ಬೀಸೊ ಗಾಳಿಗೂ ಭಾವ ಸಾಸಿರ ಜೀವ ಜಲಕು ಒನಪಿನೋಗರ ಪಂಕ್ತಿಯಲ್ಲೂ ಜಂಗಮದ ದರ್ಶನ ಖಗ-ಮಿಗ-ಜಂತುಗಳಲೂ […]

#ಕವಿತೆ

ಬಯಕೆ

0

ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ, ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು ತಪ್ಪದೆಡೆ ಮಾಡುತೆ | ಹೊಂಬೆಳಗಲ್ಲರಳಿ, ಸೌಗಂಧ ಸೂಸಿ ತನಿಗಾಳಿಯೋಳ್ ಬೆರೆತು ಮಕರಂದ ನೀಡೆ ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ ನಸುನಗುವ ನಂದನದ ಹೂವಾಗೋ ಬಯಕೆ ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು […]

#ಕವಿತೆ

ಅರಮನೆ

0

ನಿನ್ನ ಮನವೆ ನನ್ನ ಮನೆ ನನ್ನ ಮನವೆ ನಿನ್ನ ಮನೆ ಎರಡು ಮನದ ಮನಗಳೇ ನಮ್ಮ ಬದುಕಿನರಮನೆ | ನಿನ್ನ ಮನದ ಮೂಲೆಯಲ್ಲೂ ಎನ್ನ ಮನದ ಪ್ರೀತಿ ಮಿಡಿತ ಎನ್ನ ಮನದಂಗಳಂಗಳದಲೂ ನಿನ್ನ ಒಲವ ಬೆಸೆವ ತುಡಿತ | ಎನ್ನ ನಿನ್ನ ಭಾವದಲ್ಲಿ ಮಾತು ಮೌನದಽ ಮಿಲನಽ ನಿನ್ನ ನನ್ನ ಉಸಿರುಸಿರಲಿ ‘ಜೀವರಾಗ’ದ ತೋಂ ತನನನಽ […]

#ಕವಿತೆ

ಎಚ್ಚರ!

0

ಮನಸೇ ಹಸಿರಾಗಿರು ನೀನು ಈ ಉಸಿರು ತಾನಾಗಿ ನಿಲ್ಲುವ ತನಕ ಉಸಿರೇ ಹೆಸರಾಗಿರು ನೀನು ಈ ಬಸಿರ ಖಿಣವು ತಾ ತೀರುವ ತನಕ ||ಪ|| ಚೆಲುವೊ-ನಲಿವೋ ಹೃನ್ಮನದ ಒಲವೊ ಗೆಲುವ ಛಲದ ಬಲವೊಽ ಹೂವೊ ಹಣ್ಣೊ ತಂಬೆಲರ ಸೊಗಸೊ ನವನವದ ನವ್ಯ ನಂದನವೊಽ ಮನ ಮನದಿ ಮಥನ ಸೌಗಂಧ ತನನ ನವರಾಗದಿಂಪ ಸ್ವರವೊಽ ಜೀವ ದೇವ […]

#ಕವಿತೆ

ಅಮರ‘ಶಿಲ್ಪಿ’

0

ಸೃಜನ ಜನಕನ ಪ್ರೀತಿ ತನಯ ಸೃಷ್ಠಿ ದೃಷ್ಠಿದಾತನ ಚಿನ್ಮಯ | ಕಲಾ, ಕಲೆ, ಕಲಾಲಯದ ಕಾವ್ಯವೊ ನಿನ್ನ ಕಣ್ಣ ಕೈಗಳ ಲೀಲೆಯು ಲೋಕ ಲೋಕಕೆ ಹೇತು ಸಿಂಧುವು ನಾಕ ಭುವನದ ಕೀರ್ತಿಯು | ಶಿಲೆಯು, ಧಾತುವು ಸುಮವರಳಿನರಳು ನವನೀತಗೊಳಿಸುತೆ ನೇಹದಿ ಲಾವಣ್ಯದೆಳೆಯ ತಿರುಳ ಹೆರಳಲಿ ಭಾವಾತೀತವಾಗುತ ಪುಣ್ಯದಿ | ಕಲ್ಲು ಕಲ್ಲೆದೆ ಮಿಡಿಸೊ ಕರ್ತೃವೆ ಮೂರ್ತ […]

#ಕವಿತೆ

ಪಯಣ

0

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ-‘ಮನ’ವ ಕೈಯ ಹಿಡಿಯಲಿ | ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ ಬೆಳಕಿನ ಪಥದಲಿ ನಿನ್ನರಿವೆ ತಾನದು ಹೊನ್ನ ದೀವಿಗೆ ಮರವೆ ತಾರದೆ ಜೊತೆ ಸೇರಲಿ | ದೇವ ದೇವರಿರವಿನರಿವಿಗೆ ನೀನೆ ನಿನ್ನಯ ಆಲಯ ಸಮತೆ ಸಮರಸ ಶಾಂತ ಕ್ಷಮತೆಗೆ […]

#ಕವಿತೆ

ಸಂಸರಣ

0

ವಿಶ್ವದಂಗಳ ತೃಣ-ತೃಣದ ಕಣವದು ಜೀವ ಜಾಲದ ಬದುಕಿಗೆ ನನಗೆ ನಿನಗೆಂದೆಣಿಸುವೇತಕೆ ಉರಿದು ಬೀಳೋ ಅಸ್ಥಿಯ ಭ್ರಾಂತಿಗೆ | ಎನಿತು ರೂಪರೂಪ ಭೇದವು ಒಂದೇ ಜೀವದಿ ಸಮತೆಯು ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ ಮೂರ್ತ ಮೂರ್ತದ ದರುಶನ ನವ್ಯ ನವಕೆ ಶುಭೋದಯವು ನಿತ್ಯ ಸತ್ಯ ದಿನಪನ ಚೇತನ | ಋತು ಚಕ್ರದ ಮಿಥುನ ಫಲವು ಪ್ರಾಣ ಸ್ಪುರಣದುಗಮದಿರುವು ನಾದ […]