ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು
ಜೀವ ಜಾಲದ ಬದುಕಿಗೆ
ನನಗೆ ನಿನಗೆಂದೆಣಿಸುವೇತಕೆ ಉರಿದು
ಬೀಳೋ ಅಸ್ಥಿಯ ಭ್ರಾಂತಿಗೆ |

ಎನಿತು ರೂಪರೂಪ ಭೇದವು
ಒಂದೇ ಜೀವದಿ ಸಮತೆಯು
ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ
ಮೂರ್ತ ಮೂರ್ತದ ದರುಶನ
ನವ್ಯ ನವಕೆ ಶುಭೋದಯವು
ನಿತ್ಯ ಸತ್ಯ ದಿನಪನ ಚೇತನ |

ಋತು ಚಕ್ರದ ಮಿಥುನ ಫಲವು
ಪ್ರಾಣ ಸ್ಪುರಣದುಗಮದಿರುವು
ನಾದ ಕ್ರತುವಿನನುಭಾವ ಸೌಧದ
ಜೀವ ದೇವ ಭಾವದ ಗೆಳೆತನ
ಬಂಧ ಬಂಧದ ಸೇತು ಬಂಧವು
ಸಂಸರಣ ಸಾರದ ನಂದನ |

ಹತನ ತನದಾ ಧೂರ್ತ ಕ್ರೌರ್ಯವು
ದಾನವನ ರಣದಾನನ
ಜತನ ಪಾವನ ಶೀಲ ತನವದೆ
ಹರಿಹರರ ಸಮತೆಯ ಚೇತನ
ಬಾಳ್ವೆ ಬಾಳ್ವೆಯ ಚೆಲ್ವ ಬಾಳ್ವೆಯು
ಸಗ್ಗ ಸಂವರಣದ ಸಾಧನ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಜಲ್
Next post ನೆನಪಿಡುವಳೆ?

ಸಣ್ಣ ಕತೆ