ಅವನನ್ನು ಪ್ರೀತಿಸಿದ ಹುಡುಗಿ
ಒಮ್ಮೆ ಅವನೊಳಗೆ
ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು
ಮುತ್ತಿನ ಮಳೆ ಸುರಿಮಳೆ

ಅಮೆರಿಕದ ಬಿಳಿಗೊಂಬೆಗೆ
ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ
ಮೇಲಕ್ಕೆತ್ತಿ ಸತ್ಯದ ಕತೆ
ಬಿಚ್ಚುವಿಕೆಯ ಹೊಯ್ದಾಟ
ಏನೂ ಇಲ್ಲದ ನವಾಬು ದರ್ಬಾರು
ಸುಳ್ಳಿನ ಕಂತೆ ಕಟ್ಟಿದ್ದು…..

ನಂಬಿದ ಹುಡುಗಿ
ತಾಜಮಹಲಿನ ಮನೆ ಕನಿಸುತಿದೆ
ರೆಕ್ಕೆಯೇ ಇವಳು.

ಸುಳ್ಳು ನವಾಬನ ಸಂಕಟ
ವಿಮಾನ ತುಂಬ ಸುತ್ತಾಟ
ಹೇಳುವದೇನು ಮನೆಗೆ ಬರುವ ಇವಳಿಗೆ?
ಕೋಣೆ ಬಾಗಿಲುಗಳಿಲ್ಲದ
ಓಡಾಡುವ ಮನೆಯೊಳಗೆ
ಕೋಳಿಗಳು;
ಬುರ್ಕಾದಡಿಯಲ್ಲಿಯ
ಅಮ್ಮಿಜಾನ್ ಅಬ್ಬಾಜಾನ್ ಪ್ರೀತಿ
ನೆನಪಿಡುವಳೆ?
ಅಥವಾ
ಮೂಗು ಮುರಿದು…..
*****

Latest posts by ಲತಾ ಗುತ್ತಿ (see all)