Literature

#ಕವಿತೆ

ವರ್ತಕರು

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಮಾರ್ಬಲ್ ಹುಡುಗರ ಹುಡುಗಾಟ ಹುಡುಗಿಯರ ಮಲ್ಲಿಗೆಯ ನಗು ತುಂಟಾಟ ವೆನಿಸ್ಸಿನ ನೀರಿನಲೆಯೊಳಗೆ ತುಂಬಿ ವೈನ್ ಕುಡಿದ ಬೋಟಿನಲುಗಾಟ ವರ್ತಕರಂತೆ ಮುಂದಿನೂರಿಗೆ, ಕಣ್ಣರೆಪ್ಪೆಯೊಳಗೆ ಚಂದ್ರ ತುಂಬಿ ನರಳಾಟ ಮತ್ತೆ ಸ್ಥಬ್ದಕೆ ಇಲ್ಲಿ ಡ್ರಿಂಕ್ಸ್, ಎಚ್ಚರ ತಪ್ಪಿ ತೆಪ್ಪಗೆ- *****

#ಕವಿತೆ

ಕ್ಷಮಿಸು ತಂದೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು ಗಳೊಳಗೂ ಇತ್ತು ಬಿತ್ತಿ ಬೆಳೆವ ಪ್ರೀತಿ ಪ್ರೇಮ ವಿಶ್ವಾಸಗಳ ಬೀಜ ಅದಕೇಕಿಂದು ರಾಹು ಬಡಿದು ಮೊಳಕೆ ಒಡೆಯದೇ ಮನಮನ ಕಾಡಿಸುತಿವೆ- ದೇವರೆ! ದಿಕ್ಕುದಿಕ್ಕುಗಳು ಸೀಳಿ ಚಡಪಡಿಸಿ ಸಮುದ್ರಗಳು […]

#ಕವಿತೆ

ಸ್ಥಿತ್ಯಂತರ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ- ತತ್ವ ಚಿಂತನೆಗಳ ಹೊತ್ತಿಗೆಗಳ ಹಿಡಿದು ಸಮಾಜೋದ್ಧಾರ ಮಾನವೀಯತೆಯ ಬೀಜಗಳ ಮಂತ್ರ ಉಚ್ಚರಿಸುತ, ಎಚ್ಚರಿಸುತ ಬರುವುದಾ ನೋಡತೊಡಗಿದೆ. ಈಗೀಗ ಈ ಮೋಡಗಳೊಳಗೆ […]

#ಕವಿತೆ

ಶಾಂತಿಗಾಗಿ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಆಕಾಶಮಾರ್ಗದಲ್ಲಿ ಗಾಂಧಿಹೊರಟಿದ್ದು ಕಂಡೆ ಇದು ಡಿಸೆಂಬರ ಚಳಿಗಾಲ ಬೆಚ್ಚಗೆ ಹೊದ್ದುಕೊಂಡು ನಡಿಬಾರ್‍ದಾ ಹುಚ್ಚಪ್ಪಾ ಎಂದೆ ಎಲ್ಲಿಯ ಚಳಿ ಎಲ್ಲಿಯ ಮಳೆ ಎಲ್ಲರೆದೆ ಹೊತ್ತಿ ಉರಿಯುವಾಗ ನನ್ನದೇನು ಬಿಡು….. ಎನೇನೋ ಗೊಣಗುತ್ತಾ ವಿಮಾನ ಹಿಂದಿಕ್ಕುವಂತೆ ಬರಿಗಾಲಲ್ಲಿ ಓಡುತ್ತಲೇ ಇದ್ದ. ಅದೇನವಸರ ಎಲ್ಲಿಗೆ ಹೊರಟಿದ್ದು? ಎಂದೆ. ಶಾಂತಿಗಾಗಿ, ತಾಲಿಬಾನಿಗರ ಶಾಂತಿಗಾಗಿ ಗುಡುಗಿದ, ಮೋಡಗುಡುಗಿತು ಒದ್ದೆ ಕಣ್ಣೊಳಗೂ ಆಶಾವಾದಿ ಮುದುಕ […]

#ಕವಿತೆ

ಅಮರಾವತಿ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಕುತೂಹಲದ ಹೃದಯ ಕಣ್ಣು ಮನಸು ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ ಲಂಡನ್ ಸಡಗರದ ಕನಸು ನನಸಾಗುವ ಹತ್ತಿರ ಹತ್ತಿರದ ಸಮಯ ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ…. ಸಖಿಯ ಉಲಿತ ಕೆಲವೇನಿಮಿಷ ನಗರದಮೇಲೆ ಹಿಮಾಚ್ಫಾದನೆ ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು ಒಂದು ಎರಡು ಮೂರು ನಾಲ್ಕು ಸುತ್ತು ತಿರುಗುಚಕ್ರದನುಭವ ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ ಹುಡುಕಾಟ ಹುಡುಕಾಟ […]

#ಕವಿತೆ

ಮೇಘ(ನಾ)

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ ಮೈ ಕಣ್ಣುಗಳ ಮೇಲೆ, ಶಾಂತ ಮೇಘನಾ ದಿನಗಳು ತುಂಬಿವೆ, ಕ್ಷಣಗಣನೆ ನಡೆದಿದೆ ಪುಳಕ್ಕನೆ ಜಿನುಗಲು ಬಸಿರು ಇಳೆ ಕಾತರಿಸಿ ಕೈಯೊಡ್ಡಿದೆ […]

#ಕವಿತೆ

ಹೊರಟಿದ್ದೇನೆ ಕುಬೇರನ ದೇಶಕ್ಕೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹೊರಟಿದ್ದೇನೆ ಕುಬೇರನ ನಾಡಿಗೆ ಅಲ್ಲಿ ಏನೆಲ್ಲ ಇದೆಯಂತೆ ಅದೊಂದು ಮಾಯಾ ಪೆಟ್ಟಿಗೆಯಂತೆ ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ ಸುಮ್ಮನೆ ಕನಸು ಕಾಣಬಾರದಂತೆ; ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ ವಿಚಿತ್ರವಲ್ಲದೇ ಮತ್ತಿನ್ನೇನು- ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ ಪಕ್ಕ ಕುಳಿತಿದ್ದೇನೆ. ಅಕ್ಕಪಕ್ಕ-ಮುಂದಿನ-ಹಿಂದಿನ ಸೀಟುಗಳಲ್ಲೆಲ್ಲಾ ಘಾಟಿಯೋ, ಹುಳಿಯೊಗರಿನ ಎಣ್ಣೆಯ ವಾಸನೆ. ಅವರೂ ಚುರುಕಾಗಿರಬೇಕೆಂದೇ ತಾನೆ! ಕುಬೇರನರಮನೆಗೆ ಹೋಗಲು ಕಣ್ತುಂಬ ಮನತುಂಬ […]

#ಕವಿತೆ

ಗೂಡಿಂದ ಗೂಡಿಗೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ನಿನ್ನೆ ಮೊನ್ನೆಯೇ ಮದುವೆಯಾದಂತಿದೆ ಆಕೆಯ ಕೈಮೇಲಿನ ಮೆಹೆಂದಿ, ಹಸಿರುಬಳೆ ಕಾಲುಂಗುರ ಗರಿಗರಿಯಾದ ಸೀರೆ- ಆತನ ಮುಂಗೈ ರೇಶ್ಮೆದಾರ ಮದುವೆಯ ಥ್ರೀ ಪೀಸ್ ಸೂಟು. ಹನಿಮೂನಿಗೆ ಸಮಯವೇ ಇಲ್ಲವೆಂದಾಗಿದ್ದರೆ ಇಲ್ಲಾದರೂ ಒಂದಿಷ್ಟು ಪ್ರೀತಿ ಮಾತು ಮುತ್ತು ನಗು ಕೊಡಬಹುದಾಗಿತ್ತೇನೋ ಹೇಳುತ್ತಲೇ ಇದ್ದಾನೆ ತನಗರಿವಿಲ್ಲದಂತೆ ಅಮೆರಿಕದ ಗಡಿಬಿಡಿ ಜೀವನ ಆಫೀಸು, ಶಾಪಿಂಗು, ಮನೆಗೆಲಸ ಡ್ರೆಸ್ಸು, ಫುಡ್ಡು, ನೇಬರು ಎಂದೇನೆಲ್ಲ….. […]

#ಕವಿತೆ

ರಾಜ ಹಂಸಗಳು

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಹರ್ಷವರ್ಧನ, ಚಾಲುಕ್ಯ, ಅಶೋಕ ಮೌರ್ಯ….. ಏರ್‌ಫ್ರಾನ್ಸ್, ಬ್ರಿಟೀಷ್ ಏರ್‌ವೇಸ್, ಸ್ವಿಸ್‌ಏರ್‍ ರಾಯಲ್‌ಡಚ್, ಸ್ಕೆಂಡಿನೇವಿಯಾ, ಕೆಥೆಫೆಸಿಫಿಕ್….. ಒಂದಕ್ಕಿಂತ ಒಂದು ಚೆಂದದ ಅಂದದ ಹೆಸರುಗಳು ಈ ರಾಜಹಂಸಗಳು ನನ್ನ ಪಯಣದ ಜಂಬೋ ಸವಾರಿಗಳು. ಕಾರ್ಪೇಟ್ ಮೆಟ್ಟಲೇರಿ ಒಳಹೊಕ್ಕರೆ ಥೇಟ್ ರಾಜನ ಒಡ್ಡೋಲಗ ಮೆತ್ತನೆಯ ನೆಲಹಾಸುಗೆ ಐಶಾರಾಮಿ ಖುರ್ಚಿಗಳು ಇಂಪಾಗಿ ತೇಲಿಬರುವ ವಾದ್ಯ ಸಂಗೀತ ನಡು ನಡುವೆ ಉಲಿಯುವ ಕನ್ನಿಕೆಯರು. […]

#ಕವಿತೆ

ಮಳೆರಾಜ ಬಂದಾನು

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಮಳೆರಾಜ ಬಂದಾನು ಭೂರಮೆಯ ಕರೆದಾನು ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ ಕಿಲಕಿಲನೆ ನಕ್ಕಳು ಕೆರೆಕೊಳ್ಳ ತುಂಬಿತು ಉಕ್ಕಿ ಹರಿದಾವು ಹೊಳೆಹಳ್ಳ ಹದವಾದ ಭೂರಮೆಯ ಬಸಿರು ಉಬ್ಬುಬ್ಬಿ ಕ್ಷಣಕೊಂದು ಬೇನೆ ಕೊಟ್ಟಾಳ ಬೋಡು ಬೆಟ್ಟಗಳು ಚಿಗಿತಾವ ಕಾಡಿಗೆ ಕಾಡೇ, ನಾಡಿಗೆ ನಾಡೇ ಹೂ ಬಿಟ್ಟ ಬಾಣಂತಿಗೆ ಹಿಗ್ಗೋಹಿಗ್ಗು ಮಳೆರಾಜ ಬಂದಾನ ಗಿಲಗಿಲಕಿ ಮಾಡ್ಯಾನ ಮುನಿಸೀನ ಹುಡುಗಿ ಮೈಮುರಿದು […]