ಮಳೆರಾಜ ಬಂದಾನು
ಭೂರಮೆಯ ಕರೆದಾನು
ನಕ್ಕಾನು ಕೂಡ್ಯಾನು ಬಿತ್ಯಾನು ಬೀಜ

ಕಿಲಕಿಲನೆ ನಕ್ಕಳು
ಕೆರೆಕೊಳ್ಳ ತುಂಬಿತು
ಉಕ್ಕಿ ಹರಿದಾವು ಹೊಳೆಹಳ್ಳ

ಹದವಾದ ಭೂರಮೆಯ
ಬಸಿರು ಉಬ್ಬುಬ್ಬಿ
ಕ್ಷಣಕೊಂದು ಬೇನೆ ಕೊಟ್ಟಾಳ

ಬೋಡು ಬೆಟ್ಟಗಳು ಚಿಗಿತಾವ
ಕಾಡಿಗೆ ಕಾಡೇ, ನಾಡಿಗೆ ನಾಡೇ
ಹೂ ಬಿಟ್ಟ ಬಾಣಂತಿಗೆ ಹಿಗ್ಗೋಹಿಗ್ಗು

ಮಳೆರಾಜ ಬಂದಾನ
ಗಿಲಗಿಲಕಿ ಮಾಡ್ಯಾನ
ಮುನಿಸೀನ ಹುಡುಗಿ
ಮೈಮುರಿದು ಎದ್ದಾಳ
ನಕ್ಕಾರ ಕೂಡ್ಯಾರ ಹಸಿರು ಹರಿಸ್ಯಾರ
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)