ಭೂಗೋಳ ಶಾಸ್ತ್ರದ ಗುರುಗಳು ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿ “ಯಾರು ಸರಿಯಾಗಿ ಉತ್ತರಿಸಬಲ್ಲಿರಿ ?” ಎಂದು ಕೇಳಿದರು. ಒಬ್ಬ ಶಿಷ್ಯ “ನೀವು
ಪ್ರಶ್ನೆ ಕೇಳಿ ಸರ್, ನಾನು ಉತ್ತರ ಹೇಳುತ್ತೇನೆ” ಅಂದ.
ಗುರು: “ಬಾಬಾ ಬುಡನ್‍ಗಿರಿ, ಮುಳ್ಳಯ್ಯನ ಗಿರಿ, ಕಲ್ಹತ್ತಗಿರಿ- ಇವುಗಳನ್ನು ನೀವು ಕೇಳಿದ್ದೀರಿ. ಹಾಗಾಯೇ ಇನ್ಯಾವುದಾದರೂ ಗಿರಿಗಳ ಹೆಸರು ಹೇಳು ನೋಡೋಣ” ಎಂದರು.
ಶಿಷ್ಯಾ: “ಅದೇಸಾರ್, ದಾದಾಗಿರಿ, ಚಮಚಾಗಿರಿ, ಗೂಂಡಾಗಿರಿ.”
ಗುರು: “ಓಹ್ ಎಷ್ಟೇ ಆಗಲಿ ನೀನು ರಾಜಕಾರಣಿಯವರ ಪುತ್ರನಲ್ಲವೆ ಅದಕ್ಕೆ ತಕ್ಕಂತೆ ಉತ್ತರಿಸಿದ್ದೀಯಾ ಭೇಷ್. !”
***