ಒಂಬತ್ತೂ ತಿಂಗಳು ಶಾಂತ-ಪ್ರಶಾಂತ
ಮೇಘನಾ
ಹತ್ತನೆಯ ತಿಂಗಳು ಯಾಕಿಷ್ಟೊಂದು
ಮುಖ ಕಪ್ಪಿಟ್ಟಿತು
ಬೇನೆ ಸುರುವಾಯಿತೆ ರಾಣಿ?
ಸಮಾಧಾನಿಸಿಕೋ
ಸಮಯ ಬರುತ್ತದೆಯಲ್ಲ ಹತ್ತಿರ
ಮಡಿಲು ತುಂಬಲು
ಕಾತರಿಸಿದ ಕುಡಿಗೆ ಮುದ್ದಿಡಲು
ಎಷ್ಟೊಂದು ಬೆವರ ಹನಿಗಳು
ಮುಖ ಮೈ ಕಣ್ಣುಗಳ ಮೇಲೆ,
ಶಾಂತ ಮೇಘನಾ
ದಿನಗಳು ತುಂಬಿವೆ, ಕ್ಷಣಗಣನೆ ನಡೆದಿದೆ
ಪುಳಕ್ಕನೆ ಜಿನುಗಲು ಬಸಿರು
ಇಳೆ ಕಾತರಿಸಿ ಕೈಯೊಡ್ಡಿದೆ

ಎಲ್ಲೆಲ್ಲೂ ನೀನೇ ನೀನು ನೋಡು
ನಿನ್ನ ನೀನೇ ಶ್ಯಾಮಲವರ್ಣಿ
ಈಗೆಷ್ಟು ಹೊಳಪು
ಬಸಿರಿಳಿದು ಗುಲಾಬಿ ಶ್ವೇತಗುಲಾಬಿ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)