ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಪ್ರಗತಿ ಅಥವಾ ದಾಸ್ಯವಿಮೋಚನೆ – ಉಪೋದ್ಘಾತ

ಲೋಕದಲ್ಲಿ ಪ್ರತಿಯೊಂದು ವಸ್ತುವು ಕ್ಷಣಶಃ ಪ್ರಗತಿಯನ್ನು ಹೊಂದುತ್ತಲಿದೆ. ಭೂಮಿಯಂಥ ಅತಿದೊಡ್ಡ ಗೋಲವೂ, ನೊರಜಿನಂಥ ತೀರ ಕ್ಷುದ್ರಪ್ರಾಣಿಯೂ ಕ್ರಮೇಣ ಪ್ರಗತಿಹೊಂದಿವೆ. ಎಷ್ಟೊ ವರ್ಷಗಳ ಪೂರ್ವದಲ್ಲಿ ರಸರೂಪದಲ್ಲಿ ಕಾದು ಪ್ರಶಾಶ ಗೊಂಡಿದ್ದ ಭೂಗೋಲವು, ಪ್ರಗತಿಯಿಂದ ತಣ್ಣಗಾಗಿ ಘನರೂಪ ತಾಳಿ, ವಿಧವಿಧದ ಘನ ಪ್ರವಾಹಿ, ವಾಯುರೂಪಗಳಿಂದ ಯುಕ್ತವಾಗಿ ಮನುಷ್ಯ ಮೊದಲಾದ ಪ್ರಾಣಿಗಳ ವಸತಿಗೆ ತಕ್ಕುದ್ದಾಗಿದೆ. ಅದರಂತೆಯೇ ಪ್ರಾಣಿಶಾಸ್ತ್ರದಲ್ಲಿ ವಿವರಿಸಿದಂತೆ ಮೀನವು ಪ್ರಗತಿಯನ್ನು ಹೊಂದಿ ಕಪ್ಪೆಯ, ಮಂಗನ, ಮನುಷ್ಯನ ರೂಪವನ್ನು ಹೊಂದಿರುವದು. ಆದರೆ ಭೂಮಿ, ಮೀನ, ಕಪ್ಪೆ, ಮಂಗ ಇವುಗಳ ಪ್ರಗತಿಯು ಕೃತ್ರಿಮವಾಗಿರುವದಿಲ್ಲ; ಅದು ಸೃಷ್ಟಿನಿಯಮಗಳನ್ನು ಸರಿಸಿ ತನ್ನಿಂದತಾನೇ ಆಗಿರುವದರಿಂದ ನೈಸರ್ಗಿಕಪ್ರಗತಿಯಾಗಿದೆ. ಸೃಷ್ಟಿ ನಿಯಮಗಳನ್ನು ಆನುಸರಿಸಿನಡೆಯುವ ಆಚೇತನ ಹಾಗು ಸಚೇತನಗಳ ಪ್ರಗತಿಯು ನೈಸರ್ಗಿಕವಾಗಿಯೇ ಆಗತಕ್ಕದ್ದು. ಅವುಗಳ ಪ್ರಗತಿಗೆ ಕೃತ್ರಿಮ‌ಉಪಾಯಗಳ ಯೋಜನೆಯು ಅವಶ್ಯಕತೆಯಿಲ್ಲ. ಆದರೆ ಯಾವ ಪ್ರಾಣಿಗಳು ಸೃಷ್ಟಿನಿಯಮಕ್ಕೆ ವಿರೋಧವಾಗಿ ನಡೆಯುವವೋ, ನಡೆಯಲುಯತ್ನಿಸುವವೋ, ಅವುಗಳ ಪ್ರಗತಿಯನ್ನು ಕೃತ್ರಿಮ ಉಪಾಯಗಳಿಂದ ಮಾಡುವದು ಉಕ್ತವಾಗಿದೆ. ಈ ಪ್ರಗತಿಯು ನೈಸರ್ಗಿಕದ ಮಾನದಿಂದ ಹೋಲಿಸಿ ನೋಡಿದರೆ ನಿಜವಾದ ಪ್ರಗತಿಯಾಗಿರದಿದ್ದರೂ, ಮನುಷ್ಯನ ವಿಚಾರಸರಣಿಗನುಸರಿಸಿ ಯೋಗ್ಯವಾಗಿರುವದು.

ಪ್ರಗತಿಹೊಂದೋಣವೆಂದರೆ ಇದ್ದ ಸ್ಥಿತಿಯಿಂದ ಆಂತರಿಸುತ್ತ ಕೀಳುಸ್ಥಿತಿಯನ್ನು ಬಿಟ್ಟು ಉತ್ತಮಪದವನ್ನು ಏರೋಣವು. ಪ್ರಗತಿಹೊಂದದ ಸ್ಥಿತಿಗೆ ಕೀಳು ಅಥವಾ ದಾಸ್ಯಸ್ಥಿತಿಯೆಂತಲೂ, ಉತ್ತಮಪದವೇರಿದ ಸ್ಥಿತಿಗೆ ಪ್ರಗತಿ ಅಥವಾ ದಾಸ್ಯವಿಮೋಚನಸ್ಥಿಯೆಂತಲೂ ನಿರ್ಬಾಧವಾಗಿ ಹೇಳಬಹುದು. ಮೇಲ ಹೇಳಿದಂತೆ ಮೀನವು ಪ್ರಗತಿಹೊಂದದೆಯಿದ್ದಾಗ ಕೀಳು-ದಾಸ್ಯಸ್ಥಿತಿಯಲ್ಲಿ ಇದ್ದು, ಆದು ಪ್ರಗತಿಪಥವನ್ನು ಕ್ರಮಕ್ರಮಿಸಿದಂತೆ ಪ್ರಗತಿ-ದಾಸ್ಯವಿನೋಚನ ಸ್ಥಿತಿಯೆನ್ನು ಹೊಂದಿರುವದು. ದಡ್ಡನು ಪಂಡಿತನಾಗುವದೂ, ಮೂರ್‍ಖನು ವಿವೇಕಿಯಾಗುವದೂ, ಹೇಡಿಯೂ ಪ್ರಸಿದ್ಧ ರಣಪಂಡಿತನಾಗುವದೂ, ಆಶಕ್ತನು ಸಶಕ್ತನಾಗುವದೂ, ಅಳುಬುರಕನು ಧೈರ್ಯಶಾಲಿಯಾಗುವದೂ, ಕಳನು ನೀತಿಶಾಸ್ತ್ರಬೋಧಕನಾಗುವದೂ, ದರಿದ್ರನು ಘನಶ್ರೀಮಂತನಾಗುವದೂ ಕೂಲಿಯವನು ಯಜಮಾನನಾಗುವದೂ, ನೌಕರನು ಪ್ರಖ್ಯಾತ ಉದ್ಯೋಗಸ್ತನಾಗುವದೂ, ಜಾರಿಣಿಯು ಪತಿವ್ರತಾಶಿರೋಮಣಿ ಯಾಗುವದೂ ಪ್ರಗತಿ ಅಥವಾ ದಾಸ್ಯವಿಮೋಚನದಿಂದಲೇ. ಪ್ರಗತಿಪಥವನ್ನು ಕ್ರಮಿಸಹತ್ತಿದರೆ ಮನುಷ್ಯನಲ್ಲಿ ನಿಜವಾದ ಮನುಷ್ಯತ್ವವು ಕ್ರಮೇಣಬರತೊಡಗುವದು. ಪೂರ್ವಜನ್ಮ ಸಂಸ್ಕಾರದಿಂದ ನಮ್ಮಲ್ಲಿಯ ಎಷ್ಟೋ ಜನರು ಹುಟ್ಟಾ ಪ್ರಗತಿಗಾಮಿಗಳಾದ್ದರಿಂದ ಅವರು ಬಾಲ್ಯದಲ್ಲಿಯೇ ಮನುಷ್ಯತ್ವವನ್ನು ಹೊಂದಿ ತಮ್ಮ ಆ ಮಾರ್ಗದೆ ಶುದ್ಧಾಚರಣೆಯಿಂದ ಲೋಕವಂದ್ಯರಾಗುವರು. ಶ್ರೀಶಂಕರಾಚಾರ್ಯ, ಶ್ರೀಮಧ್ವಾಚಾರ್ಯ, ಶ್ರೀರಾಮಾನುಜಾಚಾರ್ಯ, ಏಸೂಕ್ರಿಸ್ತ, ಮಹಮ್ಮದ ಪೈಗಂಬರ, ಬುದ್ಧದೇವ, ಶ್ರೀಸಮರ್ಥರಾಮದಾಸ, ಶ್ರೀಶಿವಾಜಿಮಹಾರಾಜ, ಶ್ರೀಟೇಂಬೇ ಮಹಾರಾಜ, ಶ್ರೀ ಶೇಷಾಚಲ ಸಾಧುಗಳು, ಮಹಾತ್ಮಾಗಾಂಧೀ, ಶ್ರೀಯುತ ಟಿಳಕ ಮೊದಲಾದವರು ಹುಟ್ಟಾ ಪ್ರತಿಗಾಮಿಗಳಾಗಿದ್ದಾರೆ. ಇವರ ಶೀಲವೇ ಪ್ರಗತಿಮಾರ್ಗದ ದ್ಯೋತಕವಾಗಿದೆ.

ಆದರೆ ಮಹಾನುಭಾವರ ಈ ಪ್ರಗತಿಮಾರ್ಗವು ದುರಭಿಮಾನಿಗಳೂ ಲೇಶವೂ, ಮನುಷತ್ವವಿಲ್ಲದ ದ್ವಿಪಾದಪಶುಗಳೂ ಆದ ನಮಗೆ ಹ್ಯಾಗೆ ಗೋಚರವಾಗಬೇಕು? “ದೊಡ್ಡಸ್ತಿಕೆಬೇಕು, ಕಷ್ಟ ಪಡಲಿಕ್ಕೆ ಬೇಡ” ಎಂಬಂತೆ ನಾವು ಲೋಕದಲ್ಲಿಯ ಸರ್ವಾಗ್ರಗಣ್ಯತ್ವವನ್ನು ಬಯಸಿ, ಇಡಿ ಆಯುಷ್ಯವನ್ನು ದುಂದುಗಾರಿಕೆಯಲ್ಲಿಯೂ ಹೀನತರದ ಆಚಾರೆಗಳಲ್ಲಿಯೂ ಕಳೆಯುವೆವು. ಇದರಿಂದ ನಮ್ಮ ಬಯಕೆಯು ಕೊನೆಗಾಣುವದೊತ್ತಟ್ಟಿಗೇ ಉಳಿದು, ಹೊಟ್ಟೆ ಬಟ್ಟೆಗಾಗಿಯೂ, ರೋಗಾದಿಗಳ ನಿವಾರಣಕ್ಕಾಗಿಯೂ, ಧನಾರ್ಜನಕ್ಕಾಗಿಯೂ ನಾವು ಯಾವಾಗಲೂ ಪರರ ದಾಸ್ಯತ್ವವನ್ನು ವಹಿಸಬೇಕಾಗವದು. ಆದರೆ ಆ ದಾಸ್ಯತ್ವವವನ್ನಾದರೂ ನಾವು ಸಮಾಧಾನದಿಂದ ವಹಿಸಿ ನಡೆದರೆ, ಆ ಸ್ಥಿತಿಯಲ್ಲಿಯೂ ನಮಗೆ ಕೆಲಮಟ್ಟಿಗೆ ಸುಖವೆನಿಸಬಹುದು. ಸ್ವಭಾವತಃ ದುಷ್ಟರೂ, ಕೀಳರೂ, ಹೇಡಿಗಳೂ, ಪರರ ಒನ್ನತ್ಯವನ್ನು ಕಂಡು ಅಸೂಯಪಡುವವರೂ ಆದ ನಮ್ಮಿಂದ ಆ ದಾಸವೃತ್ತಿಯನ್ನು ಸಹಿಸಲಾಗುವದಿಲ್ಲ. ಅದಕ್ಕಾಗಿ ನಾವು ಹಲವು ಹೇಯಪ್ರಕಾರದಿಂದ ಮಂದಿಯ ಗೋಣು ಮುರಿಯಲು ಪ್ರಯತ್ನಿಸಿ ಕಡೆಗೆ ಅದರಿಂದಲೂ ದಾಸ್ಯವಿಮೋಚಿತವಾಗದಿರಲು, ಮುಂದುಗಾಣದಾಗುವೆವು. ಆದ್ದರಿಂದ ಮನುಷ್ಯನು ಕುಹಕತನದಿಂದ ಪ್ರಗತಿಯನ್ನು ಹೊಂದಲು ಸರ್ವಧಾ ಹವಣಿಸಬಾರದು. ಪ್ರಸಂಗವಶಾತ್‌ ಈ ದುಷ್ಟಮಾರ್ಗದಿಂದ ಪ್ರಗತಿಯಾದಂತೆ ತೋರಿದರೂ ಅದು ನಿಜವಾದ ಪ್ರಗತಿಯಾಗಿರದೆ, ತನ್ನನ್ನು ಮತ್ತಷ್ಟು ಅಧೋಗತಿಯನ್ನು ಹೊಂದಿಸುವ ಚಿಹ್ನವಾಗಿದೆಯೆಂದು ಅರಿತುಕೊಳ್ಳಬೇಕು.

ಪ್ರಗತಿಯನ್ನು ಪಡೆದು ದಾಸ್ಯವಿಮೋಚಿತನಾಗುವ ಇಚ್ಛೆಯುಳ ಮನುಷ್ಯನು ಪ್ರಗತಿಪಧಗಳಾದ ಕೆಳಗಿನ ಉಪಾಯಗಳನ್ನು ಕಂಡು ಪ್ರಯತ್ನ ಪೂರ್ವಕ ಅದರಂತೆ ನಡೆಯಲು ಬದ್ಧನಾಗಬೇಕು. ಇದರಿಂದ ಪ್ರಗತಿಯು ನಿಶ್ಚಯವಾಗಿ ಆಗುವದು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ವರುಷ
Next post ದೇಹವೆಂಬ ಹಣತೆಯಲ್ಲಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys