ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ

“ಜ್ಯುರಿಯವರು ಹ್ಯಾಗೇ ಅಭಿಪ್ರಾಯಪಟ್ಟಿದ್ದರೂ ನಾನು ಸಂಪೂರ್‍ಣ ನಿರ್‍ದೋಷಿಯಾಗಿರುವೆನೆಂದು ನನ್ನ ಮನೋದೇವತೆಯು ಈಗಲೂ ನನಗೆ ಹೇಳುತ್ತದೆ. ಸೃಷ್ಟಿಯ ಅಧಿಪತ್ಯದಲ್ಲಿ ಈ ಕೋರ್‍ಟಿಗಿಂತ ಹೆಚ್ಚು ಅಧಿಕಾರವುಳ್ಳ ಪರಮೇಶ್ವರನ ನ್ಯಾಯಾಸನವಿರುತ್ತದೆ. ನಾನು ಸ್ವತಂತ್ರನಾಗಿರುವದಕ್ಕಿಂತ ಕಷ್ಟನಷ್ಟಗಳಲ್ಲಿರುವದರಿಂದ ನನ್ನ ಅಂಗೀಕೃತ ರಾಷ್ಟ್ರಕಾರ್‍ಯವು ಭರಭರಾಟಿಗೆ ಬರಬೇಕಂತಲೇ ಈಶ್ವರೀಸಂಕೇತವಿರಬಹುದು!” ಎಂದು ಸನ್ ೧೯೦೮ ಇಸ್ವಿಯ ರಾಜದ್ರೋಹದ ಖಟ್ಲೆಯಲ್ಲಿ ಜಸ್ಟಿಸದಾವರ ಇವರು ಆರುವರ್ಷಗಳ ಟಾಪುಶಿಕ್ಷೆಯೆನ್ನು ವಿಧಿಸಿದಾಗ ಲೋಕಮಾನ್ಯ ಟಿಳಕ ರವರು ಕೋರ್‍ಟಿಗೆ ಉದ್ದೇಶಿಸಿ ಮಾತಾಡಿದರು. ಲೋಕಮಾನ್ಯರ ಈ ಭಾಷಣವನ್ನು ಸುವರ್ಣಾಕ್ಷರದಲ್ಲಿ ಬರೆದಿಡಬಹುದಾಗಿದೆ, ಹಾಗು ಪ್ರಗತಿಪರನು ದಿನಾಲು ಪಾರಾಯಣಮಾಡಲಿಕ್ಕೆ ಅದು ತಕ್ಕದ್ದಾಗಿದೆ.

ಉಪಹಾಸ, ಅಪಮಾನ, ವಿಟಂಬನೆ, ವಿಪರೀತಪರಿಸ್ಥಿತಿ, ಭಯಂಕರದಾರಿದ್ರ್ಯ ಮೊದಲಾದ ದುಃಖದಾಯಕ ಸ್ಥಿತಿಯಿಂದಲೇ ಎಷ್ಟೋ ಜನರ ಪ್ರಗತಿಯಾಗಿ ಪ್ರಖ್ಯಾತರಾಗಿರುವರು. ಉಪಹಾಸ ಇಲ್ಲವೆ ಅಪಮಾನವಾದಹೊರತು ಎಷ್ಟೋಜನರಿಗೆ ಪ್ರಗತಿಮಾರ್‍ಗವು ಗೋಚರವಾಗುವದಿಲ್ಲ. ಅರ್‍ಜುನನಿಗೆ ಅಪಮಾನ-ಉಪಹಾಸಗಳು ಅದ ಹೊರತು ಕಾರ್‍ಯಸ್ಫೂರ್‍ತಿಯೇ ಆಗುತ್ತಿದ್ದಿಲ್ಲವೆಂದು ಭಾರತದಲ್ಲಿ ವರ್‍ಣಿಸಿದೆ. ಇದರಂತೆ ಅಪಮಾನವು ಕರ್‍ಣನಿಗೆ ‘ಆದರೆ ಅವನಿಗೆ ಕಾರ್‍ಯದಸ್ಫೂರ್‍ತಿಯಾಗದೆ ಅವನು ಕೇವಲ ಹೇಡಿಯಾಗುತ್ತಿದ್ದನು. “ಭಾಪುರೆ ಕರ್‍ಣ” ಎಂದು ಉಬ್ಬಿಸಿದಾಗಲೇ ಅವನು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಿರುವನು. ಸ್ವಭಾವವೈಚಿತ್ರ್ಯದಂತೆ ಕೆಲವು ಜನರು ಉಪಹಾಸದಿಂದ ಪ್ರಗತಿಯನ್ನು ಹೊಂದುವಂತೆ, ಬೇರೆ ಕೆಲವರು ಉತ್ತೇಜನದಿಂದ ಉನ್ನತಿಯನ್ನು ಹೊಂದುವರು. ಕೆಲವು ಮಾನೀ ಸ್ವಭಾವದವರು ಸಾಧಾರಣ ಉಪಹಾಸ-ಉತ್ತೇಜನಗಳಿಂದ ಕಾರ್‍ಯಪ್ರವರ್‍ತರಾದರೆ ಕೆಲವು ಮಡ್ಡ ಜನರು ಕಾರ್‍ಯ ಪ್ರವೃತ್ತರಾಗಲಿಕ್ಕೆ ದುಸ್ಸಹವಾದ ಅಪಮಾನವೂ, ಮಿಗಿಲಾದ ಇನಾಮೂ ಅವಶ್ಯವಾಗುವವು. ಇಂಥವರು ಕೆಲಸಮಾಡಹತ್ತಿದರೆಂದರೆ, ದೇಹದ ಪರಿವೆಯಿಲ್ಲದೆ ದುಡಿದು ಕೊನೆಗಾಣಿಸುವರು.

ನಿನ್ನಿಂದ ಏನಾಗುವದು? ನೀನು ಹೀಗೆಯೇ ರ ರ ಈ ಕಲಿಯುತ್ತ ಕೂಡ್ರುವವನು, ಎಂದು ಗುರುವರ್‍ಯ ಮಹಾಜನಿ ಇವರು ಅಂದದ್ದರಿಂದ ಕೈ. ಆಗರಕರರವರಿಗೆ ಬಹಳ ಅಪಮಾನವೆನಿಸಿತು. ಅದ್ದರಿಂದ ಅವರು ಕರ್‍ತವ್ಯಜಾಗ್ರತರಾಗಿ ಮಹಾಜನಿಯವರಂತೆ ಎಂ ಏ. ಪರೀಕ್ಷೆಯಲ್ಲಿ ಪಾಸಾದರಲ್ಲದೆ, ತಮ್ಮ ಓಜಸ್ವಿಯಾದ ಲೆಕ್ಕಣಿಕೆಯಿಂದ ಹಲವು ಉತ್ತಮ ಪುಸ್ತಕಗಳನ್ನು ಬರೆದು ಭಾಷಾಮಾತೆಯೆನ್ನು ಅಲಂಕರಿಸಿದರು. ಇವರು “ಮರಾರಾ” ಎಂಬ ಇಂಗ್ಲಿಷಭಾಷೆಯ ವಾರ ಪತ್ರವನ್ನು ತೆಗೆದರು. ಅವರ ಆ ಮರಾರಾಪತ್ರವು ಈಗಲೂ ಫುಣೆಯಲ್ಲಿ ಪ್ರಸಿದ್ಧವಾಗುತ್ತಿದೆ. ಹೆಸರುವಾಸಿಗಳಾದ ಎಲ್ಲ ಪುರುಷರು ಹೆಚ್ಚು ಕಡಿಮೆಮಾನದಿಂದ ಅಪಮಾನ-ಕಷ್ಟ-ನಷ್ಟಗಳನ್ನು ಸೋಸಿಯೇ ಮುಂದೆ ಬಂದಿರುವರು;

“ನನ್ನ ಆಯುಷ್ಯದೊಳಗಿನ ಪ್ರತಿಯೊಂದು ವಿಜಯವನ್ನು ನಾನು ದೀರ್‍ಘ ಶ್ರಮಪಟ್ಟು ಸಂಪಾದಿಸುವದರಿಂದ ಸುಲಭರೀತಿಯಿಂದ ಸಾಧಿಸಬಹುದಾದ ಕಾರ್‍ಯವು ಕೂಡ ನನಗೆ ದುರ್ಲಭವಾಗಿ ತೋರುತ್ತದೆ” ಎಂದು ಒಬ್ಬ ಯಶಸ್ವಿ ಉದ್ಯೋಗಸ್ತನು ತನ್ನದೊಂದು ಭಾಷಣದಲ್ಲಿ ಹೇಳಿರುವನು. ಅವನು ಮತ್ತೆ ಅನ್ನುವದೇನಂದರೆ, ಯಾವ ಕೆಲಸವು ಶ್ರಮವಿಲ್ಲದೆ ಕೈಗೂಡುವದೋ ಆ ಕೆಲಸದಲ್ಲಿ ಏನಾದರೂ ಗೌಣವಿರಲೇಬೇಕು; ಮತ್ತು ನಿರಾಯಾಸದಿಂದಾದ ಕೆಲಸವು ಮಹತ್ವದ್ವೇ ಅಲ್ಲ. ಇಂಥ ಸಾವಿರಾರು ಕೆಲಸ ಮಾಡಿದರೂ ಮನುಷ್ಯನ ಪ್ರಗತಿಯಾಗಲಾರದು. ಮೈಮೇಲೆ ೯೯ ಗಾಯಗಳಾಗಿದ್ದರೂ ಸಂಗ್ರಾಮಸಿಂಹನು ಸಾಯುವವರೆಗೆ ಯುದ್ಧ ಮಾಡಲಿಕ್ಕೆ ಹೇಗೆ ಬೇಸರಿಯುತ್ತಿದ್ದಿಲ್ಲವೋ, ಹಾಗೆ ಸಂಕಟಪರಂಪರೆಗಳಿಗೆ ಎದುರಾಗಿ ಶ್ರೇಯಸ್ಸನ್ನು ಪಡೆದಿರುವ ಮನುಷ್ಯನು ಕಠಿಣಕಾರ್‍ಯಗಳನ್ನು ಮಾಡಲಿಕ್ಕೆ ಹಿಂದುಮುಂದು ನೋಡುವದಿಲ್ಲ. ಅಂಥವನಿಗೆ ಸಂಕಟಗಳಿಗೆ ಎದುರಾಗುವದಕ್ಕೂ ವಿಧವಿಧದ ಪ್ರಯತ್ನಮಾಡಿ ವಿಜಯಿಯಾಗುವದಕ್ಕೂ ಒಳ್ಳೇ ಹುರುಪು ಬರುವದು. ಈ ಹುರುಪು ಸಾಮಾನ್ಯ ಕೆಲಸಗಳಲ್ಲಿ ಬರುವದಿಲ್ಲಾದ್ದರಿಂದ ಅವನು ಸಾಮಾನ್ಯ ಕೆಲಸಗಳನ್ನು ಮಾಡಲುದ್ಯುಕ್ತನಾಗುವದಿಲ್ಲ.

ಕೃತ್ರಿಮ ಉಪಹಾಸ-ಅಪಮಾನಗಳಂತೆ ಶರೀರವು ವ್ಯಂಗವಾಗಿ ಉಪಹಾಸವಾಗುವದರಿಂದಲೂ ಮನುಷ್ಯನಲ್ಲಿ ಒಂದುತರದ ಕರ್‍ತವ್ಯಜಾಗ್ರತಿಯು ಬೆಳೆಯುವದು. ಎಷ್ಟೋ ಜನರು ಕುರುಡರು ಗಾಯನ-ವಾದನಪಟುಗಳಾಗಿರುವರು. ಮೂಕರು ಉತ್ತಮ ಶಿಲ್ಪಿಗರೂ, ನೇಕಾರರೂ, ಬಡಿಗರೂ ಆಗಿರುವರು. ನಾಧೆಮಾಧವನೆಂಬ ಸುಪ್ರಸಿದ್ಧ ಮಹಾರಾಷ್ಟ್ರ ಕಾದಂಬರಿಕಾರನು ಹೆಳವನಿದ್ದನು. ಜನ್ಮತಃ ಕಾಲು-ಕೈಗಳಿಲ್ಲದ ಅಗಡಿಯ ರಾಮಭಟ್ಟ ತಾಳೀಕೋಟಿ (ಒಡೆಯರು) ಎಂಬವರು ಮಹಾಬುದ್ಧಿಶಾಲಿಗಳಿದ್ದರು;

ನಮ್ಮಲ್ಲಿಯ ಬಹು ಸ್ವಲ್ಪ ಜನರು ತಮ್ಮ ನಿಜವಾದ ಯೋಗ್ಯತೆಯನ್ನು ಕಂಡುಕೊಂಡವರೂ, ಪ್ರಗತಿಯ ಯೋಗ್ಯ ಮಾರ್‍ಗವನ್ನು ಹಿಡಿದವರೂ ಆಗಿರುತ್ತಾರೆ. ತಮ್ಮ ಸಾಮರ್‍ತ್ಯಭಾಂಡಾರದ, ದೇಹ ಸಾರ್‍ಥ್ಯಕ್ಯದ ಮಾರ್‍ಗವನ್ನು ಗೊತ್ತುಹಚ್ಚಿಕೊಳ್ಳುವಷ್ಟರಲ್ಲಿಯೇ ಎಷ್ಟೋ ಜನರು ಇಹಲೋಕದಯಾತ್ರೆಯನ್ನು ಮುಗಿಸಿಕೊಳ್ಳುವರು. ವಿಶಿಷ್ಟಕಾರ್‍ಯಕ್ಕಾಗಿ ಒಂದೇಸವನೆ ದುಡಿಯುವದೇ ಪ್ರಗತಿಯ ಮುಖ್ಯ ಶಕ್ತಿಯಾಗಿದೆ. ಅವಿಶ್ರಾಂತ ಶ್ರಮಮೂಡಿದ ಹೊರತು ಕೆಲಸದ ಮಹತ್ವವು ಬೆಳೆಯುವದಿಲ್ಲ. ಇಂಥ ಹಲವು ಕೆಲಸಗಳನ್ನು ಮಾಡಿದ ಹೊರ್‍ತು ಮನುಷ್ಯನ ಮಹತ್ವಬೆಳೆಯುವೆದಿಲ್ಲ. ಕೆಲಸಮಾಡುವ ಸಂಧಿಗಳನ್ನು ದೊರಕಿಸುವವನು ಪ್ರಗತಿಪರನೂ, ಸಂಧಿಗಳನ್ನು ಪ್ರಯತ್ನ ಪೂರ್‍ವಕ ಕಳಕೊಳ್ಳುವವನು ಪ್ರಗತಿಹೀನನೂ ಆಗುವರು. ತಮ್ಮ ಜಾತಿಯವರ ಸಲುವಾಗಿ ಬಡ ಸಿದ್ದೀಗುಲಾಮನಾದ ಡಾ. ಬುಕರ ಬ. ವಾಸಿಂಗ್ಟನ್ನನು ಅತ್ಯಂತ ಶ್ರಮಪಟ್ಟು ಹಿತಮಾಡುವ ಸಂಧಿಯನ್ನು ತಂದುಕೊಂಡಿದ್ದರಿಂದಲೇ ಅವನು ಆ ಜಾತಿಯ-ಅದೇಕೆ ಮಾನವಜಾತಿಯ ಕಲ್ಯಾಣಕರ್‍ತನಾದನು. ಅವನು ತಾನು ಶ್ರೀಮಂತನಲ್ಲವೆಂದೂ, ಸುಶಿಕ್ತಿತನಲ್ಲವೆಂದೂ ಭಾವಿಸಿದ್ದರೆ, ಅವನಿಗೆ ಈ ಸಂಧಿಯು ದೊರಕುತ್ತಿದ್ದಿಲ್ಲ. ಉಪಹಾಸದಿಂದ ಪೀಡಿತನಾದ ಅವನು ಕೇವಲ ಗುಲಾಮಗಿರಿಯಲ್ಲಿಯೇ ದೀರ್‍ಘಪರಿಶ್ರಮಪಟ್ಟು ಸ್ವತಃ ವಿದ್ಯೆಸಂಪಾದಿಸಿ, ಮಂದಿಗೆ ಕಲಿಸಿ ಅವರಲ್ಲಿ ಮನುಷ್ಯ್ಯತ್ವವನ್ನುಂಟುಮಾಡಿದ್ದರಿಂದಲೇ ಅವನ ಮಹತ್ವ ಬೆಳೆದಿದೆ.

ಸಾಧಾರಣವಾಗಿ ವಿಚಾರಿಸಿ ನೋಡಿದರೆ ಮನುಷ್ಯನು ಆಲಸ್ಯ ಪ್ರಿಯನೆಂಬದು ಕಂಡುಬರುತ್ತದೆ. ಅವನು ಅವಶ್ಯವೆಂದು ಎಲ್ಲ ಕೆಲಸಗಳನ್ನು ಮಾಡುತ್ತಿರುತ್ತಾನೆ. ಏಳುವದು, ಕೂದ್ರುವದು, ಓಡಾಡುವದು, ಕೆಲಸಮಾಡುವದು ಇವು ಅವನಿಗೆ ಬೇಸರಿಕೆಯನ್ನುಂಟು ಮಾಡುತ್ತವೆ. ಶ್ರೀಮಂತರಿಗೂ ‘ಆಲಸ್ಯದಲ್ಲಿಯೂ ಐಷ ಆರಾಮ ಗಳಲ್ಲಿಯೂ ಬೆಳೆದವರಿಗೂ ಬಡವರ ಕಲ್ಪನೆಯೇ ಆಗುವದಿಲ್ಲ. ಕಷ್ಟಪಟ್ಟು ಪ್ರಗತಿ ಹೊಂದೆಂದು ಯಾರಾದರೂ ಅವರಿಗೆ ಬೋಧಿಸಿದರೆ ಅವರು ಆದರ ಅರ್‍ಥವನ್ನೇ ತಿಳಿಯದಾಗುವರು. ಇಂಥವರು ದೀರ್‍ಘಪರಿಶ್ರಮಪಟ್ಟು ಉಪಹಾಸ ಅಪಮಾನಗಳನ್ನು ಸಹಿಸಿ ಪ್ರಗತಿ ಹೊಂದಲಿಕ್ಕೆ ಎಂದೂ ಯತ್ನಿಸಲಾರರು. ಆಲಸ್ಯತನದಿಂದ ಅಧೋಗತಿಯಾಗಿ ಇವರ ಶ್ರೀಮಂತಿಕೆ ಕಳೆದುಹೋಗಿ ಬಡತನಬಂದಾಗ ಮಾತ್ರ ಇವರ ಕಣ್ಣುಗಳು ತೆರೆಯೆಹತ್ತುವವು.

ಪರಾಜಯವಾದ ಬಳಿಕ ಅವಲಂಬಿಸುವ ಮಾರ್‍ಗದಿಂದಲೇ ಮನುಷ್ಯನ ಖರೇ ಪರೀಕ್ಷೆಯಾಗುವದು. ಪರಾಜಯದಿಂದ ಅವನು ಪ್ರೋತ್ಸಾಹನಹೊಂದುವನೋ ನಿರಾಶೆಹೊಂದುವನೋ ಎಂಬದನ್ನು ನೋಡಬೇಕು. ಪರಾಜಯಕ್ಕೆ ಹೆದರದಿದ್ದರೆ ಹೆಚ್ಚು ಪ್ರಗತಿಪಡೆಯುವನು, ಪರಾಜಯಕ್ಕೆ ಹೆದರಿದರೆ ಕಾರ್‍ಯವಿನ್ಮುಖನಾಗಿ ಅಧೋಗತಿ ಹೊಂದುವನು

“ಆರಂಭಶೊರಃ” ಎಂಬಂತೆ ಎಲ್ಲಿ ನೋಡಿದರೂ ಒಳ್ಳೇ ಈರ್‍ಷೆಯಿಂದೆ ಹೊಸ ಹೊಸ ಕೆಲಸ ಮಾಡುವವರೇ ಕಣ್ಣಿಗೆ ಬೀಳುತ್ತಾರೆ. ಮತ್ತು ಕ್ಷುಲ್ಲಕ ವಿಘ್ನಬಂದಕೂಡಲೆ ಕಾರ್ಯವಿನ್ಮುಖರಾಗಿ ಪರಾಜಯ ಹೊಂದುತ್ತಾರೆ. ಸಾವಿರಗಟ್ಟಲೆ ಜನರಿಗೆ ತಮ್ಮ ದಾರಿದ್ರ್ಯದ ನಿಜವಾದ ಕಾರಣವು ಗೊತ್ತಾಗಿರುವದಿಲ್ಲ. ಹಾಗು ಅದನ್ನು ತಿಳಕೊಂಡು ನಿವಾರಣಮಾಡಿಕೊಳ್ಳಲು ಯತ್ನಿಸುವದೂ ಇಲ್ಲ. ಪರಾಜಯವು ಪ್ರಾಪ್ತವಾದಾಗ ಎದೆಯೊಡೆದುಕೊಳ್ಳದೆ, ಮತ್ತೊಮ್ಮೆ ಅವಿಶ್ರಾಂತ ಪ್ರಯತ್ನಮಾಡಿ ಪ್ರಗತಿಹೊಂದಿದವರ ಎಷ್ಟೋ ಉದಾಹರಣೆಗಳು ಇತಿಹಾಸ ಪ್ರಸಿದ್ಧವಿರುವವು. ತೈಮೂರನೂ, ಘೋರಿ ಮಹಮ್ಮದನೂ, ಶಿಕಂದರ ಬಾದಶಹನೂ, ಪ್ರತಾಪಸಿಂಹನೂ ಹೀಗೆ ಪ್ರಯತ್ನಮಾಡಿ ಯಶೋಭಾಗಿಗಳಾಗಿರುವರು.

ಪುನಃ ಪುನಃ ಪ್ರಯತ್ನಮಾಡಿದ್ದರಿಂದಲೇ ಆಂಗ್ಲೇಯರನೇಕರು ಹಲವು ದೇಶಗಳನ್ನು ಗೊತ್ತು ಹಚ್ಚಿದರು. ಪೇರಿಸನೆಂಬ ಶೋಧಕನು ಉತ್ತರಧ್ರುವವನ್ನು ಕಂಡು ಹಿಡಿಯುವದಕ್ಕೆ ಆರುಸಾರೆ ಪ್ರಯತ್ನಮಾಡಿ ಪರಾಜಯಹೊಂದಿದನು. ಪ್ರತಿಯೊಂದು ಸಾರೆ ಸಂಗಡಿಗರಾದ ನೂರಾರುಜನ ನಾವಿಕರನ್ನೂ, ಎಷ್ಟೋ ಸಾಧನಸಾಮಗ್ರಿಗಳನ್ನೂ ಕಳಕೊಂಡನು. ಅದರೆ ಅವನ ದೃಢನಿಶ್ಚಯವು ಮಾತ್ರ ಸಡಿಲಾಗಲಿಲ್ಲ – ಅಂತಿಮಸಾಧ್ಯಕ್ಕಾಗಿ ೨೫ ವರ್ಷ ಅವನು ಕಷ್ಟಪಡಬೇಕಾಯಿತು. ಈ ಅವಧಿಯಲ್ಲಿ ಒಮ್ಮೆ ಸಹ ಅವನು ನಿರಾಶನಾಗಲಿಲ್ಲ, ಅವನ ಧೀರ್‍ಘಪ್ರಯತ್ನದಿಂದಲೇ ಏಳನೇಸಾರೆ ಅವನಿಗೆ ಉತ್ತರದ್ರುವದ ಶೋಧವಾಯಿತು. ಜೇಡಹುಳವು ಮನೆಕಟ್ಟುವಾಗ ತಂತುಗಳು ಮೇಲಿಂದ ಮೇಲೆ ಹರಿಯುತ್ತಿದ್ದರೂ ಬೇಸರಪಡದೆ ದೃಢನಿಶ್ಚಯದಿಂದ ತಂತುಗಳನ್ನು ಹೆಣೆದು ಮನೆಕಟ್ಟುವದು. ಕ್ಷಣ ಶಃ ಪ್ರಗತಿಹೊಂದುತ್ತಲಿದ್ದ ಈ ಸೃಷ್ಟಿಯಲ್ಲಿ ನಾವು ನಮ್ಮ ಪ್ರಗತಿಯನ್ನು ಮಾಡಿಕೊಳ್ಳುವದು ಕರ್‍ತವ್ಯವಾಗಿದೆ. ಹೀಗೆ ಮಾಡದೆ ಪ್ರಗತಿಹೀನಾಗುತ್ತ ಹೋಗಿ, ಸೃಷ್ಟಿಯ ರಚನೆಗೆ ಬಾಧೆತರುವದು ಯೋಗ್ಯಆದೀತೆ?
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವತಾರಿ
Next post ಜಯ ಕನ್ನಡ ಜಯ ಕನ್ನಡ

ಸಣ್ಣ ಕತೆ

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys