ರಾಮಕೃಷ್ಣ ಪರಮಹಂಸರೆಂದರೆ ಋಷಿ
ಅವರನ್ನು ಅನುಭವಿಸಿದರೆ ಖುಷಿ
ಅವರ ಬಾಳೆ ಒಂದು ಪವಾಡ
ನಿತ್ಯ ಅವರನ್ನೆ ನೀನು ಪಾಡ

ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು
ಅವಳ ಮಹಿಮೆಗಳ ಅರಗಿಸಿಕೊಂಡವರು
ಅವಳೊಂದಿಗೆ ನಿಂತು ಮಾತನಾಡಿದವರು
ಅವಳ ಆಜ್ಞೆಯಂತೆ ಬಾಳು ಸವೆಸಿದವರು

ಸಾಕಾರ ನಿರಾಕಾರಗಳೆಲ್ಲ ರೂಢಿಸಿಕೊಂಡವರು
ನಿರ್ವಿಕಲ್ಪ ಸಮಾಧಿ ಪಡೆದುಕೊಂಡವರು
ಪೈಗಂಬರ್‌ ಯೇಸುರನ್ನು ತಾ ಧರಿಸಿದವರು
ಹಿಂದೂ ಧರ್ಮವೇ ಉದ್ಧಾರ ಮಾಡಿದವರು

ಧೀಮಂತ ಶಿಷ್ಯಕೋಟಿ ಸೃಷ್ಟಿಸಿದವರು
ಭಾವಗಳಿಂದ ಪರಿಪೂರ್ಣತೆ ದರ್ಶಿಸಿದವರು
ಧ್ಯಾನ ಸಮಾಧಿಗಳಿಂದ ಸಾಧಿಸಿದವರು
ಹಗಲಿರುಳು ದೇವರಲ್ಲಿ ಲೀನವಾದವರು

ಅವತಾರ ಮಹಾನ ಮೂರ್ತಿ ವೆತ್ತವರು
ಪತ್ನಿಯನ್ನೆ ದೇವಿಯಾಗಿ ಸ್ವೀಕರಿಸಿದವರು
ತನ್ನದೆಲ್ಲವೂ ವಿಶ್ವಕ್ಕೆ ಧಾರೆಯೆರೆದವರು
ಮನುಕುಲಕ್ಕೆ ಮಾಣಿಕ್ಯ ವಿಠಲರಾದರು
*****