ಜಯ ಕನ್ನಡ ಜಯ ಕನ್ನಡ

ಜಯ ಕನ್ನಡ ಜಯ ಕನ್ನಡ
ಜಯ ಕನ್ನಡ ಮಾತೇ
ಜಯಹೇ ಅಗಣಿತ ಗುಣ
ಗಣಗಳ ಜನ್ಮದಾತೆಯೇ ||ಜ||

ನೀನು ನಲಿದೊಡೆ
ಅದುವೆ ಪುಣ್ಯಕ್ಷೇತ್ರ
ನೀನು ಒಲಿದೊಡೆ
ಅದುವೆ ಪಾವನ ತೀರ್ಥ
ನೀನು ಮುನಿದೊಡೆ
ಅದುವೆ ಪ್ರಾಳಯವಮ್ಮಾ || ಜ ||

ನಿನ್ನ ಮಡಿಲ ಮಕ್ಕಳು
ನಿನ್ನ ಮಮತೆಯ ಒಕ್ಕಲು
ನನ್ನ ಕರುಣೆಯೇ ದೇವಿದೀಕ್ಷೆ
ನೀನೇ ನಮಗೇ ಶ್ರೀರಕ್ಷೆ || ಜ ||

ಭುವನ ಮಂಗಳೇ ನೀನು
ಭುವನೇಶ್ವರಿ ತಾಯೆ
ಹರಿಶಿನ ಕುಂಕುಮ ಸೌಭಾಗ್ಯನಿಧಿಯೆ || ಜ ||

ಹಳದಿ ಕೆಂಪು ಬಾವುಟ
ಕೈಯಲ್ಲಿ ಹಿಡಿದು
ಸಿಂಹವಾಹಿನಿ ಕನ್ನಡ ಕಲಿಗಳ
ಗರ್ಜನೆಗೊಲಿದು
ಬಂದ ತಾಯೆ ನಿಂದೆ ತಾಯೆ
ಹರಸು ತಾಯೆ ನಮಿಸುವೆವು ನಿನ್ನ || ಜ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ
Next post ಮೌನ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…