ಮೌನ

ಮೌನ ಉದ್ದಕ್ಕೆ ಬೆಳೆದಾಗ
ಭೂತ ಬೆಳೆದಂತೆ ಭಯವಾಗುತ್ತದೆ
ಮೌನ ಮನಸ್ಸಿನಲ್ಲಿ ಬೆಳೆದು ಕುಳಿತಾಗ
ತನ್ನವರು ಅನ್ಯರಾದಾಗ
ಜೊತೆಯವರು ಪರರಾಗಿ
ಏಕಾಂತವನ್ನು ಭೋಗಿಸ ಬೇಕಾಗಿ ಬಂದಾಗ
ಮೌನ ಭೀತವಾಗಿರದೆ
ಎಲೆಗಳಿಂದ ಹೊರಟ
ಹವೆಯೂ ರುಂಯೆಂದು
ಶಾಪವಾಗುತ್ತದೆ!
ಮೌನದಿಂದ ದೂರ ಓಡುವವರೆಲ್ಲ
ಚಾದಂಗಡಿಯಲ್ಲಿ
ಶರಾಬುಖಾನೆಯ ಮೇಜಿನಲ್ಲಿ
ಜೊತೆಗೊಬ್ಬರನ್ನು ಹುಡುಕ ತೊಡಗುತ್ತಾರೆ.
ಬೋರು ಹೊಡೆಯುವ ಯಾರದೋ
ಹಾಂಕ್ಕೆ ಹೂಂ ಸೇರಿಸಿ
ಕೇಳಿಸಿ ಕೊಂಡ ಸೋಗು ಹಾಕುತ್ತಾರೆ.
ಕೈಗೆಸಿಕ್ಕ ಒಣ ಕಾದಂಬರಿಯಲ್ಲಿ
ತೊಂಭತ್ತು ಮಿನಿಟುಗಳ ಹಿಂದಿ ಸಿನೇಮಾದಲ್ಲಿ
ಬೀದಿ ಬೀದಿಯ ನುಸುಳಿ
ವಿಂಡೋ ಶೋಪಿಂಗ್ ಮಾಡುತ್ತಾರೆ
ಕವಿಯ ಮನೆಯನ್ನು ಹೊಕ್ಕು
ಬೋರು ಕಾವ್ಯವ ಕೇಳಿ
ಕೇಳದೆಯೆ ವಾಹ! ಎಂದು ಮೆಚ್ಚುತ್ತಾರೆ
ಬಸ್‌ಸ್ಟಾಪಿನಲ್ಲಿ ವ್ಯರ್ಥವೆ ಬಸ್‌ ಬಿಡುತ್ತ
ಮನಸ್ಸು ಚಿಂತೆಯಲ್ಲದ್ದುವ ಮೊದಲೆ
ಸೆರೆಯ ಶರಣು ಹೊಡೆಯುತ್ತಾರೆ
ಯಾವ ಜತನವೂ ನಡೆಯದಿರೆ
ಮನೆಗೆ ಮರಳಿ
ಸತಿ ಸುತರಲ್ಲಿ ಹಿಂದೆ
ಆಡಿದ್ದನ್ನೆ ಆಡಿ
ಕೇಳದ-ಹೇಳದ ಫಾರ್ಮುಲವನ್ನೆ
ಮರುಕಳಿಸಿದಂತಾಗುವುದು
ನಂತರ ಮನೆಯಲ್ಲಿ
ಮನೆಯ ಮುಂದಿರುವ
ಸ್ಮಶಾನದಂತಹ,
ಒಂದು ದೀರ್ಘ ಮೌನ ಹರಡುವುದು
ಈ ಮೌನವನ್ನು ಬಿಗಿದಪ್ಪಿ
ಎಲ್ಲರು ಮಲಗುವರು
ನಿದ್ದೆಯಲ್ಲಿ ಬಡ ಬಡಿಸುವರು
ನನ್ನ ತೆರೆದಿದ್ದ ಕಣ್ಣಿಗೆ
ಬಾಲ್ಕನಿಯಲ್ಲಿ ತೂಗುವ
ಒಣವಸ್ತ್ರ ಕಾಣುವುದು
ನಮ್ಮ ಅಗಸ ಬರಲಿಲ್ಲ?
ನನ್ನ ಲುಂಗಿ ನೀನೆ ಒಗೆದದ್ದು ಲೇಸಾಯಿತು
ರಾತ್ರಿಯಲ್ಲಿ ಅದು….
ನಾನು ನನ್ನಷಕ್ಕೆಂಬಂತೆ
ಅವಳಿಗೆ ಹೇಳುತ್ತೇನೆ
ಕೋಮಿಕ್ಸ್ ಓದುತ್ತಿದ್ದ
ನನ್ನ ಮಗಳ ಮುಖ ಅರಳುತ್ತದೆ
ಅಪ್ಪ, ಮಾತು ಲುಂಗಿಯದಾದರೂ
ನಿನ್ನ ಮೌನ ಮುರಿಯಿತಲ್ಲ!
ಎಂದು ನಗೆ ಕಿಸಕ್ಕೆಂದು ಹೊರಡುತ್ತದೆ.
*****
ಮೂಲ: ಪ್ರೀತಮ್ ಬೇಲಿ
(ಹಿಂದಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯ ಕನ್ನಡ ಜಯ ಕನ್ನಡ
Next post ಬರಿದರ್ಥಕಾಮದ ಮರವುಳ್ಳವುದೆಂತು?

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…