ಬೇರು ಹುಳದಿಂದಡಿಕೆ ಬುಡದಲಿ ಕೊಳೆಯು
ತಿರೆ ಬೆಳೆಗಾರ ನೊಂದಿಹನು, ಸುಳಿ ಬಾಡಿತೆಂದು
ವರ ಭತ್ತ ಬೆಳೆವಲ್ಲಿ ಜೀವನವೆ ಇರುವಲ್ಲಿ
ಬರಿದಡಿಕೆಯನ್ನು ಬೆಳೆಯುತಿರೆ ಘನ ಸಂಸ್ಕೃತಿಯ
ಬೇರೆ ಕೊಳೆಯುತಿದೆ. ಭೀಕರವು ಮುಂದೆ – ವಿಜ್ಞಾನೇಶ್ವರಾ
*****