ದುಡಿಯೋಣ ನಾವು
ಒಂದಾಗಿ ದುಡಿಯೋಣ
ಬೆವರ ಸುರಿಸಿ ದುಡಿಯೋಣ
ಮನಕೆ ಸಂತಸ ತುಂಬೋಣ ||ದು||

ಹೆಜ್ಜೆ ಮೇಲೆ ಹೆಜ್ಜೆ ಹಾಕಿ
ಗೆಜ್ಜೆ ನಾದ ಉಣ್ಣ ಬಡಿಸಿ ||
ಸದ್ದು ಗದ್ದಲ ಇಲ್ಲದಂತೆ |
ಹೊನ್ನ ಮಳೆಯ ಸುರಿಸೋಣ ||ದು||

ಒಂದೇ ಜಾತಿ ಒಂದೇ ಮತವೆಂಬ |
ಪಚ್ಚೆ ಪೈರ ನೆಟ್ಟು ನಾವು ||
ಗಿಡಬೆಳಸಿ ಮರವಾಗಿಸಿ |
ಸಂಭ್ರಮದಿ ನಲಿಯೋಣ ||ದು||

ಭರತ ಭೂಮಿ ನಮ್ಮ ತಾಯಿ
ಎಂದು ಆನಂದದಿ ಕುಣಿಯೋಣ ||ದು||
*****