ಸನ್ನಡತೆಯಲ್ಲಿ ದೇವನಿಹನು

ಗುರಿ ಸಾಧನೆಯತ್ತ ಹೆಜ್ಜೆಹಾಕು
ಹಿಡಿದ ಪಥ ನ್ಯಾಯವಾಗಿದ್ದರೆ ಸಾಕು
ಮೇಲ್ಮಟ್ಟದ ವಿಚಾರದಿ ನಿನ್ನ ಓಲೈಸುವುದು
ಸಾರ್ಥಕ ಬಾಳು ನಿನಗೆ ತಂದು ಕೊಡುವುದು

ತುಸು ಅರಿತು ನೀನು ಧನ್ಯನೆನ್ನಬೇಡ
ಭಕ್ತಿವಂತ ನೀನ ಅಹಂಕಾರಬೇಡ
ಪವಾಡ, ಚಮತ್ಕಾರಗಳ ಮಾಡಬೇಡ
ಅವೆಲ್ಲವೂ ನಿನ್ನ ಹಿತೈಷಿಗಳೆನ್ನಬೇಡ

ಪರಮಾತ್ಮ ಸಾಗರದಲಿ ನಿತ್ಯ ಮುಳುಗು
ನಿನ್ನ ಜನ್ಮಗಳ ಪಾಪರಾಶಿಗೆ ಮರಗು
ದೇವರೆದುರಿನಲಿ ಅತ್ತು ಅತ್ತು ಕರಗು
ಅವನ ದರುಶನಕ್ಕೆ ನಿತ್ಯವೂ ಕೊರಗು

ಮನದಲಿ ಉದ್ರೇಕಿಸುವ ವಿಚಾರಬೇಡ
ನಾನು ನನ್ನದೆಂಬ ಚಿಂತೆಗಳೂ ಬೇಡ
ಆಸ್ತಿ ಅಂತಸ್ತುಗಳ ಆಡಂಬರ ಬೇಡ
ಮಾಣಿಕ್ಯ ವಿಠಲನ ಹೃದಯದಲಿ ಹಾಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೫
Next post ದುಡಿಯೋಣ ನಾವು

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys