ಎಚ್ಚರ!

ಮನಸೇ ಹಸಿರಾಗಿರು ನೀನು
ಈ ಉಸಿರು ತಾನಾಗಿ ನಿಲ್ಲುವ ತನಕ
ಉಸಿರೇ ಹೆಸರಾಗಿರು ನೀನು
ಈ ಬಸಿರ ಖಿಣವು ತಾ ತೀರುವ ತನಕ ||ಪ||

ಚೆಲುವೊ-ನಲಿವೋ ಹೃನ್ಮನದ ಒಲವೊ
ಗೆಲುವ ಛಲದ ಬಲವೊಽ
ಹೂವೊ ಹಣ್ಣೊ ತಂಬೆಲರ ಸೊಗಸೊ
ನವನವದ ನವ್ಯ ನಂದನವೊಽ
ಮನ ಮನದಿ ಮಥನ
ಸೌಗಂಧ ತನನ ನವರಾಗದಿಂಪ ಸ್ವರವೊಽ
ಜೀವ ದೇವ ಭಾವೋನ್ಮಾದದ ಮಿಲನವೊಽ
ಸೋಲುಗೆಲುವ ರಂಗ ತಂತ್ರವೊಽ ||೧||

ಕಷ್ಟ-ಕಠಿಣ ಸಂಕರದ ಜಾಲವೊ
ಹಗೆಯ ಧಗೆಯ ಸುಳಿಯೊಽ
ಬರಮೋಡದಲೆಗಳಲವತನಿಲ ಸೊಗಸೊ
ಬಿರುಬಿಸಿಲ ಮರಳರಳ ನೆಲವೊಽ
ಕಣ ಕಣದಿ ದಮನದುರಿಯೊ
ಅಣು-ಅಣುವುದಹಿಸೊ ಕಡು ತಾಪ ಕೂಪವೊಽ
ದೇಹ-ಮೋಹ ದಾಹೋನ್ಮಾದದ ತಂತ್ರವೊಽ
ಅಳಿವು-ಳಿವಿನಾ ಶೂಲ ಜಾಲವೋಽ ||೨||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯುದ್ಧ
Next post ಗೂಡಿಂದ ಗೂಡಿಗೆ

ಸಣ್ಣ ಕತೆ