ಬೆಳಕಿನನುರಣದ…. ನಿತ್ಯ
ಸರದಿಯೊಳಗೆ…. ದಿನಗಳರಳುತಿವೆ
ಜೀವಂತ…. ಧಾವಂತ…. ನಿಯತಿಗಾಗಿ
ನಿದ್ದೆ ಕಳೆದೆದ್ದವರ ಬದುಕಿಗಾಗಿ
ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ
ಸ್ಪುರಣೆಗಳೆಲ್ಲದರ ಪರಿವೆಯಿರದೆ
ಜಗದ ಜಂಗಮತೆಯ ಚಂಚಲ
ಧೃವ ಜ್ಯೋತಿಯಲ್ಲಿ….
ಕತ್ತಲೂ ಕವಿಯುತ್ತಲೇ
ಇರುತ್ತದೆ…. ಹಗಲ
ಪುನರನುರಣಕಾಗಿ….
ನಿಶಾಚಾರ…. ಉಷಾಚರಿಗಳ
ಪಾಡು-ಹಾಡಿನ ಪರಿವೆ ಪರಿಧಿಯಾಚೆ
ಎದ್ದರೂ ಮಲಗಿದಂತಿರುವ
ಮಲಗಿದಲ್ಲಿಯೇ
ಬೆಳಕನ್ನು ಜರಿಯುವವರನ್ನು
ಕಾಲವೇ ಹಣಿಯುತ್ತದೆ
ಅಗ್ಗಿಷ್ಟಿಕೆಯ ಕುಂಡದಲ್ಲಿ
ನಿದ್ರೆಯರಿವು-ಪರಿವುಗಳಿರದೆ
ಬೆಳಕಿನಲಿ ಸಾಗುವವರಿಗೆ
ಕಾಲವೇ ಮಣಿಯುತ್ತದೆ.
*****
Latest posts by ಗಿರಿಜಾಪತಿ ಎಂ ಎನ್ (see all)
- ಅಂತರಾಳ - December 11, 2018
- ಕಾಲ - December 4, 2018
- ಅಕ್ಕನ ಭಾವಗೀತೆ - November 27, 2018