ಅರಮನೆ

ನಿನ್ನ ಮನವೆ ನನ್ನ ಮನೆ
ನನ್ನ ಮನವೆ ನಿನ್ನ ಮನೆ
ಎರಡು ಮನದ ಮನಗಳೇ
ನಮ್ಮ ಬದುಕಿನರಮನೆ |

ನಿನ್ನ ಮನದ ಮೂಲೆಯಲ್ಲೂ
ಎನ್ನ ಮನದ ಪ್ರೀತಿ ಮಿಡಿತ
ಎನ್ನ ಮನದಂಗಳಂಗಳದಲೂ
ನಿನ್ನ ಒಲವ ಬೆಸೆವ ತುಡಿತ |

ಎನ್ನ ನಿನ್ನ ಭಾವದಲ್ಲಿ
ಮಾತು ಮೌನದಽ ಮಿಲನಽ
ನಿನ್ನ ನನ್ನ ಉಸಿರುಸಿರಲಿ
‘ಜೀವರಾಗ’ದ ತೋಂ ತನನನಽ |

ಭಾಷೆ ಭಾವ ರಾಗ ಮೀರಿ
ಶಬ್ದ ಸುಳಿಗಳಿಂದ ಜಾರಿ
ನನ್ನ ನಿನ್ನ ಮನದ ತನುವು
ಹರಣ-ಹರಣದಿ ಬೆರೆತಿತು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜ್ಞಾನ
Next post ಹೊರಟಿದ್ದೇನೆ ಕುಬೇರನ ದೇಶಕ್ಕೆ

ಸಣ್ಣ ಕತೆ