ಬದಲಾಗಿದೆ ಕಾಲ
ಸೂಕ್ಷ್ಮಾತಿಸೂಕ್ಷ್ಮ
ಸಂಕ್ರಮಣ ಕಾಲ
ಅಡಿಯಿಡುವ ಮುನ್ನ
ನುಡಿ ಜಾರುವ ಮುನ್ನ
ಎಚ್ಚರವಿರಲಿ
ಹೂವೇ ಹಾವಾಗಿ
ಪ್ರಕೃತಿ ವಿಕೃತಿಯಾಗಿ
ಅಮೃತವೇ ವಿಷವಾಗಿ
ಜೀವ ತೆಗೆಯಬಹುದು
ಎಚ್ಚರವಿರಲಿ
ಮಾತು ಮುತ್ತಾಗದೇ
ಮೃತ್ಯುವಾಗಿ
ನಗುವ ಬೆಳದಿಂಗಳು
ಕ್ಷಣದಲ್ಲಿ ಕಪ್ಪಾಗಿ
ಮೇಲೆರಗಬಹುದು
ಎಚ್ಚರವಿರಲಿ
ಬೆಳ್ಳಗಿರುವುದು ಹಾಲಲ್ಲ
ಹೊಳೆಯುವುದು ಚಿನ್ನವಲ್ಲ
ಸಣ್ಣ ತೂತಲಿ ಹಿರಿದು ಹಿಂಜಿ
ತೇಪೆಯಾಗಬಹುದು
ಸಣ್ಣ ಗಾಯ ರಣರಂಪಾಗಿ
ಕಾಲು ಕತ್ತರಿಸಬಹುದು
ಎಚ್ಚರವಿರಲಿ.
ಬದಲಾಗಿದೆ ಕಾಲ
ಬದುಕಿನ ಜಾಲ
ಎಚ್ಚರವಿರಲಿ.
*****