“ಏಡ್ಸ್” ಎಂದ ತಕ್ಷಣ ಜಗತ್ತಿನ ಜನ ಬೆಚ್ಚಿಬೀಳುತ್ತಾರೆ. ಏಕೆಂದರೆ ಇದಕ್ಕೆ ಮದ್ದೇ ಇಲ್ಲವೆಂಬ ಸತ್ಯ ಅರಿತಿದ್ದಾರೆ. ಇದಕ್ಕೆ ಮದ್ದನ್ನು ಕಂಡು ಹಿಡಿಯಲಾಗಿದೆ ಎಂಬ ಸತ್ಯಗಳು ಹೊರ ಬೀಳುತ್ತಲಿವೆ. ಏನೇ ಆದರೂ ಈಗ್ಗೆ೧೦ ವರ್ಷಗಳ ಹಿಂದೆ ಈ ರೋಗದ ಯಾವಶೇಷವೂ ಇರಲಿಲ್ಲ. ಈಗ ಕೋಟ್ಯಾಂತರ ಏಡ್ಸ್ ರೋಗಿಗಳು ಜೀವನಮ್ರಣಗಳಲ್ಲಿ ಸಿಕ್ಕಿ ತಮ್ಮ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದಾರೆ. ‘ಏಡ್ಸ್’ ಎಂದರೇನು? ಇದು ಎಲ್ಲಿ ಹುಟ್ಟಿತು? ಎಂಬ ಸಂಗತಿ ಬಹಳ ಜನಕ್ಕೆ ಗೊತ್ತಿಲ್ಲ ಇದಕ್ಕಾಗಿ ಇದರ ಉಗಮದ ಬಗೆಗೆ ವಿಜ್ಞಾನಿಗಳು ಸಂಶೋಧನೆ ನಡೆಸಿ ‘ಆಫ್ರಿಕಾ’ ವನ್ನು ಮೂಲ ಮಾಡುತ್ತಾರೆ.

H.I.V.(ಹ್ಯೂಮನ್ ಇಮಿನೊ ಡೆಫಿಸೆನ್ಸಿ) ಎಂಬ ಜೀವಾಣುಗಳಿಂದ H.I.V. Iಮತ್ತು H.I.V. IIಎಂಬ ಎರಡು ರೀತಿಯ ಏಡ್ಸ್ ವೈರಸ್‌ಗಳನ್ನು ಗುರುತಿಸಿದ್ದಾರೆ. ನೂಯಾರ್ಕಿನ ರಾಕ್‌ಫೆಲರ್ ವಿಶ್ವವಿದ್ಯಾಲಯದ ಟುಯೋಫ ‘ಜು’ ಮತ್ತು ಷವರ ಸಂಗಡಿಗರು ತಮ್ಮ ಅಧ್ಯಯನದ ಬಗ್ಗೆ ಇತ್ತೀಚಿಗೆ ವರದಿ ಮಾಡಿದ್ದಾರೆ. ಕಾಂಗೋದೇಶ ವಾಸಿಯೊಬ್ಬನ ೧೯೫೯ರಲ್ಲಿನ ರಕ್ತವನ್ನು ಪರೀಕ್ಷೆ ಮಾಡಿದನು. ಈ ಸಂದರ್ಭದಲ್ಲಿ ಅವನು H.I.V. ಯನ್ನು ಗುರುತಿಸಲು ಪಾಲಿಮೆರೇಸ್ ಚೇನ್ ರಿಯಾಕ್ಷನ್ ಎಂಬ ರಾಸಾಯನಿಕ ಕ್ರಿಯಾ ತಂತ್ರವನ್ನು ಬಳಸಿದ್ದರೂ. ಆಗ ಅವನಿಗೆ ಏಡ್ಸ್‌ನ್ನು ಹೋಲುವ ಸಂಕೇತಗಳು ದೊರೆತವು. ಗಣಕೀಕೃತ ಮಾಹಿತಿಯಿಂದ D.N.A. ಅಥವಾ ಜೀವಾಣು ಘಟಕವನ್ನು ವಿಶ್ಲೇಷಿಸಿತು. ಹಿಂದೆ ಅದು ಸಾಮಾನ್ಯ ಪೂರ್ವಜರಿಗೆ ಅಂಟಿಗೊಂಡಿತ್ತು ಎಂದು ತೀರ್ಮಾನಿಸಿದ್ದಾರೆ. ’H.I.V.1. ಮತ್ತು H.I.V.II ಪರಸ್ಪರಗಳಿಂದ ನಂತರ ಬೇರ್‍ಪಟ್ಟವು. ಆದ್ದರಿಂದ ಏಡ್ಸ್ ನಿವಾರಣೆಗಾಗಿ ಔಷಧಿಗಳನ್ನು ಕಂಡು ಹಿಡಿಯ ಬೇಕಾದರೆ ವಿವಿಧ ಜಾತಿಯ H.I.V.I ಜೀವಾಣುಗಳನ್ನು ಗುರಿಯಾಗಿಟ್ಟು ಕೊಳ್ಳಬೇಕಾಗುತ್ತದೆ. ಅಶುದ್ಧಸೂಜಿಗಳ ಚುಚ್ಚು ಮದ್ದು, ಲೈಂಗಿಕ ಸ್ವೇಚ್ಚಾಚಾರಕ್ಕೆ, ಬದಲಾದ ಸಾಮಾಜಿಕ ಪರಿಸ್ಥಿತಿಗಳಿಂದ ಏಡ್ಸ್ ಹರಡುತ್ತದೆನ್ನುವುದನ್ನು ದೃಢಪಡಿಸಿಕೊಂಡರು. ಆದರೆ ದಕ್ಷಿಣ ಆಫ್ರಿಕಾದಲ್ಲಿಯೇ ಏಕೆ ಈ ರೋಗ ಹರಡಿತು ಎಂಬ ಸಮಂಜಸ ಉತ್ತರ ಇನ್ನು ದೊರೆತಿಲ್ಲ.

ಮೂಲತಃ ಏಡ್ಸ್ ಜೀವಾಣುಗಳು ಬೇರಾವುದೇ ಪ್ರಾಣಿಯಿಂದ ಹಾರಿ ಬಂದು ಮನುಷ್ಯನಿಗೆ ಅಂಟಿಕೊಂಡಿರಬಹುದು. ನಂತರ ಮನುಷ್ಯರಲ್ಲಿ ಇದು ತ್ವರಿತ ಗತಿಯಲ್ಲಿ ಬೆಳೆದು ಸಧ್ಯದ ಸ್ಥಿತಿಗೆ ತಲುಪಿರಬಹುದೆಂದು ಒಂದು ವಿಜ್ಞಾನ ಸಿದ್ಧಾಂತ ತಿಳಿಸುತ್ತದೆ. ಬಲವಾದ ಸಾಕ್ಷಿ ಎಂದರೆ ಚಿಂಪಾಂಜಿಗಳಿಗೆ (H.I.V) I ಮತ್ತು ಕೆಲವು ಜಾತಿಯ ವಾನರಗಳಿಗೆ (H.I.V.) II. ಈ ರೋಗ ತಗಲಿದ್ದು ಕಂಡು ಬಂದದ್ದನ್ನು ಸ್ಥಿತಿಗೊಳಿಸಿದ್ದಾರೆ. ಇವೆರಡೂ ಪ್ರಾಣಿಗಳು ಆಫ್ರಿಕಾದಲ್ಲಿ ಹತ್ತಿರ ಹತ್ತಿರವಾಗಿ ವಾಸಿಸುವ ಪ್ರಾಣಿಗಳಾಗಿವೆ. ಪ್ರಾಣಿ ಮೂಲದಿಂದ ಹರಡಿರಬಹುದಾದ ಈ ಏಡ್ಸ್ ಮಾರಿ ಇಂದು ಜಗತ್ತೇ ತಲ್ಲಣಗೊಳಿಸುತ್ತಿರುವುದಂತೂ ವಾಸ್ತವ.
*****