ಯಂತ್ರ ವೈದ್ಯರು ಬರಲಿದ್ದಾರೆ!

೨೦೪೦ರ ಹೊತ್ತಿಗೆ ಅತಿಸೂಕ್ಷ್ಮ ಮತ್ತು ಪರಿಪೂರ್ಣ ರೋಬಟ್‌ಗಳನ್ನು ವಿಜ್ಞಾನಿಗಳು ಸಂಯೋಜಿಸುತ್ತಾರೆ. ಬ್ಯಾಕ್ಟೀರಿಯಾ ಗಾತ್ರದಲ್ಲೂ ಕೂಡ ಇವು ಇರುತ್ತವೆ. “ನ್ಯಾನೋ ಡಾಕ್ಸ್” ಎಂದು ಕರೆಯಲ್ಪಡುವ ರೋಬಟ್ ವೈದ್ಯನ ಶರೀರದಲ್ಲಿ ಸೂಕ್ಷ್ಮ ದರ್ಶಕಗಳನ್ನು ಅಳವಡಿಸಲಾಗಿದೆ. ಶರೀರಕ್ಕೆ ಹಾನಿಯುಂಟು ಮಾಡುವ ಸೂಕ್ಷ್ಮಜೀವಿಗಳು, ವಿಕೃತಗೊಂಡ ರಕ್ತಕಣಗಳು ಮತ್ತು ಕ್ಯಾನ್ಸರ್ ಕಣಗಳನ್ನು ಪತ್ತೆಹಚ್ಚುವ ದೃಶ್ಯ ವ್ಯವಸ್ಥೆಯ ‘ಮೆಮೋರಿ’ಯನ್ನು ಅಳವಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಇವು ರಕ್ತವನ್ನು ಶುದ್ಧಿಗೊಳಿಸುತ್ತವೆ. ಈ ನ್ಯಾನೋ ಇಂಜಿನ್‌ಗಳು (ರೋಬಟ್ ವೈದ್ಯ) ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಗುರುತಿಸಿ ಅವುಗಳ ಹೊರಕವಚವನ್ನು ಭೇಧಿಸುವದರಿಂದ ಬಿಳಿ ರಕ್ತಕಣಗಳಿಗೆ ಆ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಅನುಕೂಲವಾಗುತ್ತದೆ. ಹಲವಾರು ವರ್ಷಗಳಿಂದ ಶರೀರದಲ್ಲಿ ನೆಲೆಗೊಂಡ ಸೂಕ್ಷ್ಮಜೀವಿಗಳನ್ನು ಈ ರೋಬಟ್ ಇಂಜಿನ್‌ಗಳು ಪತ್ತೆಹಚ್ಚುತ್ತವೆ. ಬೋಸ್ಟನ ಕಾಲೇಜಿಗೆ ಸೇರಿದ ಟಿ. ರಾಸ್‌ಕೆಲ್ಲಿ ಮತ್ತು ತಂಡವು ಕೇವಲ ೭೮ ಪರಮಾಣುಗಳ ಒಂದು ನ್ಯಾನೋ ಇಂಜಿನನ್ನು ರೂಪಿಸಿದ್ದಾರೆ. ಜೀವಕೋಶಗಳಂತೆ ಅದು ಕೂಡ (ATP) ಅಣುವಿನಿಂದ ಶಕ್ತಿ ಪಡೆದು ಗ್ರಹಿಸುವುದು ವಿಶೇಷವಾದ ಸಂಗತಿ.

ಇಂತಹ ರೋಬಟ್ ಸರ್ಜನ್‌ಗಳು ಆಸ್ಪತ್ರೆಗಳು ಕಾಲಿಡುವ ದಿನ ಹತ್ತಿರದಲ್ಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಹೂಬನದಲ್ಲಿ ಮಾಲಿ ಮಾಡಿಕೋ ನನ್ನ
Next post ಹೇಳತೇನ ಕೇಳ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…