ಗಾಳಿಪಟ

ನಿನ್ನ ಬಾನಂಗಳದಲಿ ನನ್ನ ಗಾಳಿಪಟ
ತೇಲಲಿ ನೀಲಿ ಅಂಬರದಲಿ ಕನಸುಗಳು
ಚಿಕ್ಕಿಗಳು ಮಿನುಗಲಿ, ನಿನ್ನೆತ್ತರ
ಆಕಾಶದಲಿ ನನ್ನಾತ್ಮದ ಕನವರಿಕೆ
ಹಕ್ಕಿ ರೆಕ್ಕೆ ಬಿಚ್ಚಿ ಬೀಸಿ ಹಾರಾಡಲಿ
ಇಳೆಯ ಅಚ್ಚರಿಯ ಘನತೆಯಲಿ.

ನೀ ಎಂಬ ಮಳೆ ಹನಿಹನಿಯಾಗಿ
ಇಂಚರಿಸಲಿ ನನ್ನ ಮನಸ್ಸಿನಲಿ
ಅಲ್ಲಿ ಪ್ರೀತಿಯ ಹೊಳೆ ಹರಿದು
ನೀಲಿಯಾಗಲಿ ಕಡಲು ಒಂದಾದ
ಭಾವಮೋಡಗಳು ತೇಲಲಿ
ನಿನ್ನೊಡಲಿನ ಹರವಿನಲಿ.

ನೀ ಸುಂದರ ಹನಿತಂಪು
ಚಿಗುರಿ ಹಸಿರು ಹಾಸಲಿ ಈ
ಬಯಲಿನಲಿ ಬೀಜ ಅಂಕುರವಾಗಿ
ಒಡಲಿಗೂ ಕಡಲಿಗೂ ಮುತ್ತು ಅರಳಲಿ
ಸ್ವಚ್ಛಂದ ಜೀವ ಭಾವ ನಿರಾಳದಲಿ
ಬೆಳಕ ಕಿರಣಗಳ ಒಡಲಿನಲಿ.

ಬೆಳಕಿನ ಗಾಳಿಯ ದೀಪವಾದರೆ ನೀ
ಹೊಳೆ ಹೊಳೆವ ನದಿತಾರೆಯಾಗುವೆನಾ
ದಂಡೆ ದಂಡೆಯಲಿ ಮೆಲ್ಲಗೆ ಅರಳಿ
ಘಮ್ಮೆಂದು ಸೂಸಿ ಸೌರಭ ಪ್ರೇಮಕಾವ್ಯ
ಮುಗಿಲ ಕನಸಿಗೆ ಬಂಧವಾಗುವ
ಹುಟ್ಟು ಸಾವಿನ ಅನಂತತೆಯ ಧ್ಯಾನದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಡ್ಸ್ ಮಾರಿಯಹುಟ್ಟು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೬

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…