Home / Kavite

Browsing Tag: Kavite

ಸೂಜಿ ಮೊನೆ ಹೊತ್ತ ಸಂಬಂಧದ ಚೌಕಟ್ಟಿನ ಸಂ-ಸಾರ ದಾರವಾಗಿ ಒಡಲಲಿ ಸೇರಿದ ಕ್ಷಣ ಶುರುವಾಗಿದೆ ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ ಗೊತ್ತಿರದ ಕೈಗಳು ಮಾಡಿದ ಸೂಜಿ ಎಸಳು ಪ್ರೀತಿಯಿಂದ ಹೊಸೆದ ದಾರ ಎತ್ತಣದ ಸಂಬಂಧಗಳು ಇತ್ತಣವಾಗಿ. ಒಮ್ಮೊಮ್ಮೆ ಬೆಸೆದು ...

ಜೀವ ಮೆಲ್ಲನೆ ಒಜ್ಜೆಯಾದ ಸಂಜೆ ಕೌನೆರಳು ಕವಿದ ಗೋಡೆಯ ಮೇಲೆ ಗಡಿಯಾರದ ಮೆದು ಶಬ್ದಗಳು, ನೀನು ಬರುವ ಹೆಜ್ಜೆಯ ಸಪ್ಪಳದಂತೆ, ಕೇಳಿ ಓಣಿಯ ಕೆಂಪು ಮಣ್ಣಿನಲ್ಲಿ ಮೂಡಿದವು ನಿನ್ನಯ ಪಾದದ ಗುರುತುಗಳು. ನನ್ನ ಮನೆಯ ಅಂಗಳದ ಆಕಾಶದ ನೀಲಿಯಲಿ ಅದ್ದಿ ಬೆರೆಯ...

ನೀಲಿ ಅಂಬರದ ತಿಳಿಬೆಳದಿಂಗಳು ಸಾವಿರಾರು ಚುಕ್ಕಿ ಮಿನುಗು ತೇಲಿ ಹಾರಿದ ಬೆಳ್ಳಕ್ಕಿ ಸಾಲಿನಲ್ಲಿ ಮೋಡಗಳು ಎಚ್ಚರಗೊಂಡು ದಾವಾ ಹರಡಿ ಹರಡಿ ಪೃಥ್ವಿ ಪುಲಕಗೊಂಡಳು ಬಯಲ ತುಂಬೆಲ್ಲಾ ಹಸಿರು. ಚಿಗುರು ಸ್ಪರ್ಶಕ್ಕೆ ಮುದಗೊಂಡ ಬೀಜ ಶಕ್ತಿ ವಿಜೃಂಭಿಸಲು ಒಡ...

ಪ್ರತಿ ಸಂಜೆ ಆಕಾಶದ ಒಂದು ನಕ್ಷತ್ರ ಚಿಮಣಿ ಮಿನುಗಾಗಿ ಅವಳ ಕೈಯಲ್ಲಿ ಇಲ್ಲಿಂದ ಅಲ್ಲಿಗೆ ಬೆಳಕು ಹರಡಿ ಮನೆ ತುಂಬ ಘನಿಕರಿಸಿಕೊಳ್ಳುತ್ತದೆ, ಮುಗಿಲು. ಅವಳ ಬೆರಳ ಸ್ಪರ್ಶದಲಿ ಬಳೆಗಳ ಸ್ವರದಲಿ ನೀಲಿ ಹರಡಿ ತೊಟ್ಟಿಲು ಜೀಕುತ್ತದೆ ನಕ್ಷತ್ರಗಳ ಲೋಕದಲಿ...

ಬುದ್ಧ ಹೇಳಿದ ಮುಳ್ಳಿನ ಕಿರೀಟ ಧರಿಸಿದರೆ ನೋವುಗಳು ಎದೆಗಿಳಿದು ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು ಎಲ್ಲವೂ ಮೌನವಾಗುತ್ತವೆ. ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತ...

ಈ ಸಂಜೆ ಗುಡಿಯ ಕಟ್ಟೆಯ ತುದಿಯಲ್ಲಿ ಕಾಲು ಮಡಚಿ ಕುಳಿತ ಮುದುಕನ ಕಣ್ಣ ತುಂಬ ನೀರಿನ ಪಸೆ ಎಲುಬುಗಳು ಹಾಯ್ದ ಮುಖದ ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು ಅವನ ದೃಷ್ಠಿ ಹರಿವ ಉದ್ದಗಲಕೂ ಮಾವಿನ ತೋಪಿನ ನೆರಳು ಉರಿವ ಸೂರ್ಯ ನಾಚಿಕೆಯಿಂದ ಮರೆಯ...

ಬಾಗೆಳೆಯಾ ಅಂಗಳಕೆ ಸಾಲು ದೀಪಗಳ ಬೆಳಗೋಣ ದೀಪಾವಳಿ ಮಾಗಿಯ ರಾತ್ರಿಯಲಿ. ಬಾಗೆಳೆಯಾ ಚಾವಡಿಗೆ ಬಣ್ಣಬಣ್ಣದ ಜರಿಯ ದೀಪದ ಗೂಡು ಕಟ್ಟೋಣ ಮೌನ ದೀಪಗಳ ಕಾಂತಿಯಲಿ ಬಾ ಗೆಳೆಯಾ ಪಡಸಾಲೆಗೆ ಮೆಲ್ಲಗೆ ಹಚ್ಚೋಣ ಸುರುಸುರು ಬತ್ತಿ ನನ್ನ ನಿನ್ನ ಕಣ್ಣೊಳಗಿನ ನೂರ...

ಹೊಳೆದಂಡೆಯ ಮುಟ್ಟಲು ಮರುಕಿ ಮೆಲ್ಲಗೆ ಸ್ಪರ್ಶಿಸಿದಾಗ ಮುಳ್ಳು ಚುಚ್ಚಿ ರಕ್ತ ಬಂತು ನಿನ್ನ ನೆನಪಾಗಿ ಹಿತ್ತಲದ ನಂದಿ ಬಟ್ಟಲು ಹೂಗಳು ಗಂಧ ಯಾಕೋ ಪರಿಮಳ ಸೂಸಲು ಕಣ್ಣುಗಳು ಬಾಡಿದವು ನಿನ್ನ ನೋಟಗಳ ಮರೆತು. ಯಾರು ಎಲ್ಲಿ ಯಾವ ಭಾವಕೆ ಬಸಿರಾದರೂ, ನದಿ...

ಕತ್ತಲು ಕೋಣೆಯಲಿ ಬೆಳಕಿನ ಅಕ್ಷರಗಳು ಮೌನ ಆವರಣದಲ್ಲಿ ಮಾತುಗಳ ಶಬ್ಧಗಳು ಕತ್ತಲು ಬೆಳಕು ಮೌನ ಮಾತು ಎಲ್ಲವೂ ಒಂದೇ ನಾಣ್ಯವಾದಾಗ, ಹುಡುಕುವುದು ಏನನ್ನೂ ಗಾಯಕ್ಕೆ, ಸವರಿದ ಮೂಲಾಮಿನ ತಣ್ಣನೆ ಸ್ಪರ್ಶ ಮರದಲ್ಲಿ ಚಿಗುರಿದ ಹಸಿರು, ಯಾತನೆಯಲ್ಲಿ ಸಾವಿನ...

ಈ ಸಂಜೆ ಕಂತುವ ಸೂರ್‍ಯ ಯಾಕೋ ಮಂಕಾಗಿ ಅವನ ಬಣ್ಣವೆ ಜಿಗುಟಾಗಿ… ಎಲ್ಲವೂ ಸ್ತಬ್ಧವಾಗಿತ್ತು; ಗಾಳಿ ಚಲಿಸುತ್ತಿರಲಿಲ್ಲ; ಹಕ್ಕಿಗಳು ಮಾತ್ರ ಗೂಡಿಗೆ ಮರಳುತ್ತಿದ್ದವು. ಎಲ್ಲ ಧ್ವನಿಗಳು ಪ್ರತಿಧ್ವನಿಗಳಾಗಿ ಒರಲಿ ಉರುಳಾಡಿ ಶಬ್ಧಗಳೇ ಸರಿದು ಹೋ...

123...9

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...