ಸೂಜಿ-ದಾರ

ಸೂಜಿ ಮೊನೆ ಹೊತ್ತ ಸಂಬಂಧದ
ಚೌಕಟ್ಟಿನ ಸಂ-ಸಾರ ದಾರವಾಗಿ
ಒಡಲಲಿ ಸೇರಿದ ಕ್ಷಣ ಶುರುವಾಗಿದೆ
ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ

ಗೊತ್ತಿರದ ಕೈಗಳು ಮಾಡಿದ ಸೂಜಿ
ಎಸಳು ಪ್ರೀತಿಯಿಂದ ಹೊಸೆದ ದಾರ
ಎತ್ತಣದ ಸಂಬಂಧಗಳು ಇತ್ತಣವಾಗಿ.
ಒಮ್ಮೊಮ್ಮೆ ಬೆಸೆದು ಕೊಳ್ಳಲು ಪರಿಪಾಠ ಇರಸು.

ಒಲವು ವಿಸ್ಮಯದ ರೇಖೆಗುಂಟ ಇಳಿದ
ದಾರದ ವೇಗನೆ ಗಟ್ಟಿ ಭೂಮಿಯ ಸೀಳಿ
ಬರುವ ಸೂಜಿ ತೂತಲಿ ತೂರಿಕೊಳ್ಳವ ಪರಿ
ಲಿಂಗ ಜಂಗಮ ವಾಗುವ ತತ್ವ ವಿಶೇಷ

ಎಲ್ಲಿ ನಯ ಎಲ್ಲೆಲ್ಲಿ ಬಿರುಸು
ಹೊಲೆದು ಹದ ಮಾಡಿದ ಬಟ್ಟಬಯಲು
ತೆನೆ-ಕಾಳು ಹಸಿರು ಚಿಮ್ಮಿ ಕಸೂತಿ

ಇಳೆಯಲ್ಲ ಕಳೆ ತುಂಬುವ ಕೆಲಸ ವಿಸ್ಮಯ.
ದಾರದಲಿ ಸೂಜಿಯೋ ಸೂಜಿಯಲಿ
ದಾರವೋ ಮಳೆ ಮೋಡ ನದಿ ಕಡಲು
ಒಡಲು ಬಟ್ಟೆ ಬಯಲು ಆಲಯ
ರೇಷ್ಮೆ ನೇಯ್ಗೆ ಜಾರಿ ಜಾರಿ ಬಿಚ್ಚಿಕೊಂಡ ಭವದಾರಿ ವಿನೂತನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಬರುವ ಕಾಯಿಲೆ ತಿಳಿಸುವ ಚಿಪ್
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೬

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…