Home / ಲೇಖನ / ವಿಜ್ಞಾನ / ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ತಿಳಿಸುವ ಚಿಪ್

ಮುಂಬರುವ ಕಾಯಿಲೆ ಯಾವುದೆಂಬುಂದನ್ನು ತಿಳಿದರೆ ಅದರ ಹುಟ್ಟನ್ನು ಅಡಗಿಸಬಹುದು ಅಥವಾ ಮುನ್ನಚ್ಚರಿಕೆಯ ಕ್ರಮವನ್ನು ಅನುಸರಿಸಿ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳಬಹುದು. ಈ ವ್ಯವಸ್ಥೆ ಇದುವರೆಗೆ ಲಭ್ಯವಿರಲಿಲ್ಲ. ಆದರೆ ಸದ್ಯದಲ್ಲಿಯೇ ಮುಂಬರುವ ಕಾಯಿಲೆಯನ್ನು ಕಂಡು ಹಿಡಿಯಬಲ್ಲ ಕಂಪ್ಯೂಟರ್ ಚಿಪ್‌ಗಳು ಬರಲಿವೆ. ವ್ಯಕ್ತಿಯ ಅಂಗಾಂಗದ ಒಂದು ಕೋಶ ಒಳಗೆ ಇರುವ ಜೀನ್ ಅನ್ನು ಪರೀಕ್ಷಿಸಿ ಮುಂದೆ ಕ್ಯಾನ್ಸರ್ ಬರಲಿದೆಯೇ, ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆಗಳಿವೆಯೇ? ಎಂದು ಈ ಚಿಪ್‌ನಿಂದ ನಿಖರವಾಗಿ ಹೇಳಬಹುದು.

ನಿರ್ದಿಷ್ಟ ಅನುಕ್ರಮದ D.N.A.ಎಳೆಯನ್ನು ಕಂಪ್ಯೂಟರ್ ಭಾಷೆಯಲ್ಲಿ ಈ ಚಿಪ್‌ನಲ್ಲಿ ಬರೆದಿಡಲಾಗುತ್ತದೆ. ದೇಹದ ಕೋಶ ಒಂದರಲ್ಲಿ ಇರುವ ಡಿ.ಎನ್.ಎ ಎಳೆಯನ್ನು ಅದರೊಂದಿಗೆ ಹೋಲಿಸಿ ನೋಡಿ, ಯಾವ ಜೀನ್ ನ್ಯೂನ್ಯತೆಯಿಂದ ಕೂಡಿದೆ, ಎಂದು ಕ್ಷಣಾರ್ಧದೊಳಗೆ ಕಂಡು ಹಿಡಿದು ಈ ಚಿಪ್‌ನ ಸಹಾಯದಿಂದ ಯಾವ ಕಾಯಿಲೆ ಬರುತ್ತದೆಂದು ತಿಳಿಯಬಹುದು. ಒಂದು ವೇಳೆ ದೇಹದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ ಅದು ಯಾವ ಹಂತದಲ್ಲಿದೆ. ದೇಹದ ಯಾವೆಲ್ಲ ಭಾಗಕ್ಕೆ ಈಗಾಗಲೇ ಹರಡಿದೆ? ಎಂಬುವುದು ಕ್ಯಾನ್ಸರ್‌ಗೆ ತುತ್ತಾದ ಕೋಶಗಳು ಕಾಯಿಲೆಗಳು ಗಂಭೀರತೆಗನುಗುಣವಾಗಿ ಬೆಳಕನ್ನು ಹೊರ ಸೂಸುವ
ಮೂಲಕ ತಿಳಿಸುತ್ತವೆ.

ಎಷ್ಟೊ ಸಲ ಕೆಲವೊಂದು ಕಾಯಿಲೆಗಳು ವೈದ್ಯರು ಪರೀಕ್ಷಿಸಿ ನೋಡಿ ಮದ್ದುಕೊಟ್ಟರೂ ಗುಣವಾಗದಿರುವುದು ಉಂಟು. ವೈದ್ಯರ ಪ್ರಕಾರ ಇದು ಸಾಮಾನ್ಯ ಕಾಯಿಲೆ ಆಗಿರಬಹುದು. ಆದರೆ ಅದು ಗುಣವಾಗದಿರುವುಕ್ಕೂ ದೇಹದ ಜೀನ್‌ಗಳಿಗೂ ಪರಸ್ಪರ ಸಂಬಂಧ ಇರುತ್ತದೆ. ಯಾವ ಜೀನ್ ನ್ಯೂನ್ಯತೆಗೊಳಗಾಗಿದೆ ಎಂದು ನಿಖರವಾಗಿ ಪತ್ತೆಹಚ್ಚಿ ಅದಕ್ಕನುಗುಣವಾಗಿ ಸೂಕ್ತ ಚಿಕಿತ್ಸೆ ಕೊಟ್ಟಾಗಲಷ್ಟೇ ಆ ವ್ಯಕ್ತಿ ಗುಣಮುಖವಾಗಲು ಸಾಧ್ಯ ಎಂದು ಕಂಡು ಹಿಡಿಯಲಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...