ತಾಯಿ ಮತ್ತು ಅವಳ ಪುಟ್ಟ ಮಗ ಇಬ್ಬರೂ ನಾಟಕಗಳನ್ನು ನೋಡಲು ಹೋಗುತಿದ್ದರು. ಅದರಲ್ಲಿ ಮಗುವಿನ ತಂದೆ ವಿವಿಧ ಪಾತ್ರ ಗಳನ್ನು ಮಾಡುತ್ತಿದ್ದ. ಇದ್ದನ್ನು ಗಮನಿಸಿದ ಪುಟ್ಟ ಮಗ ಅಮ್ಮನ ಕೇಳಿದ- “ಏಕೆ ಅಪ್ಪ ಬೇರೆ ಬೇರೆ ಮದುವೆ ಆಗ್ತಾರೆ? ಮತ್ತೆ ಮುದುಕಪ್ಪನಂತೆ ಆಗ್ತಾರೆ, ಮತ್ತೆ ಕಳ್ಳನಂತೆ ಆಗ್ತಾರೆ? ಮತ್ತೆ ಕೊಲೆ ಮಾಡ್ತಾರೆ? ಅಮ್ಮ! ನಂಗೆ ಮಾತ್ರ ಯಾವಾಗಲು ಒಂದೇತರಹ ಒಳ್ಳೆಯವನಾಗಿರಬೇಕು ಅಂತೀಯಲ್ಲ?” ಎಂದಿತು. ಅಮ್ಮ ಹೇಳಿದಳು- “ಅದು ನಾಟಕ ಪುಟ್ಟ ಎಂದಳು ಅಮ್ಮ. ಹಾಗಾದರೆ “ನಂಗೂ ಬೇರೆಬೇರೆ ತರಹ ನಾಟಕ ಮಾಡಲು ಬರುತ್ತೆ ನಾನೂ ನಾಟಕ ಮಾಡಲಾ?” ಎಂದಿತು ಮಗು.
*****