ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. “ನೀನು ಮನೆಯಲ್ಲಿರುವೆಯಾ? ಇಲ್ಲಾ ನಮ್ಮನ್ನು ಕಡೆದು ಕಟ್ಟಿದ ಗೋರಿಯಲ್ಲಿ ಇರುವೆಯಾ?” ಎಂದು ಹೆಮ್ಮರಗಳ ಆತ್ಮ ಚೀರಿ ಕೇಳಿತು. ಅವನ ಮೈ ಎಲ್ಲ ಬೆವತು ಎದ್ದು ಕೂಡುತಿದ್ದ, ಇಡಿ ರಾತ್ರಿ ನಿದ್ರೆ ಬಾರದೆ, ಹೆಮ್ಮರಗಳ ಸಾವು ಏಕೆ ಉಸಿರುಗಟ್ಟಿಸುತ್ತಿದೆ? ಎಂದು ಚಿಂತಿಸಿದ.
*****