ಪ್ರೀತಿ ಬಯಸಿ ಜೀವವೇ

ಪ್ರೀತಿ ಬಯಸಿ
ಮರಳಿಬಂದ ಜೀವವೇ
ತುಂಬು ಹೃದಯದಿ
ಸ್ವಾಗತಿಸಿ ನಿನ್ನ
ಸ್ವೀಕರಿಸುವೆ ನನ್ನೊಲವೇ||

ಏಕೆ ನಿನಗೆ ನಿನ್ನ ಮೇಲೆ
ಸಂದೇಹವು
ನಾನು ನಿನ್ನ ಸ್ವೀಕರಿಸುವುದಿಲ್ಲ
ಎಂಬಾ ಆತಂಕವು|
ಪ್ರೀತಿಯಲಿಂತ ಸಣ್ಣ
ಕಲಹಗಳು ಸಹಜವೇ|
ಪ್ರೀತಿಯಲಿ ಸೋತು
ಗೆಲುವುದೇ ಬಲು ಸೊಗಸು|
ಪ್ರೀತಿ ಪರೀಕ್ಷಿಸಿದಷ್ಟು
ಸಬಲವಾಗಿ ದೃಢವಾಗುತ್ತದೆ||

ಬಾಳಲಿ ಪರೀಕ್ಷೆಯೆ ಜೀವನ
ಹೊಸ ಸುಖ ದುಃಖವ ಅನುಭವಿಸಿ
ತಿಳಿಯುವುದೇ ಅದರ ಲಕ್ಷಣ|
ಪಶ್ಚಾತ್ತಾಪದಿಂದಲಿ ಪ್ರೀತಿ
ಪರಿಪಕ್ವವಾಗುತ್ತದೆ|
ಕ್ಷಮತೆಯಲಿ ಬೇರೂರಿ
ಹೊಸಚಿಗುರ ಚಿಮ್ಮಿ
ಪರಿಪೂರ್ಣವಾಗುತ್ತದೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಮ್ಮರಗಳ ಗೋರಿ
Next post ಧ್ಯಾನ

ಸಣ್ಣ ಕತೆ

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…